ಮಡಿಕೇರಿ, ಜೂ. ೨೧: ಭಾರತೀಯ ಸಂಸ್ಕೃತಿಯ ಹೆಗ್ಗುರುತಾದ ಯೋಗವೀಗ ವಿಶ್ವಮಾನ್ಯತೆ ಪಡೆದುಕೊಂಡಿದ್ದು, ವಿಶ್ವದಾದ್ಯಂತ ಯೋಗ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಲಾಕ್‌ಡೌನ್ ನಡುವೆಯೂ ಇಂದು ಎಲ್ಲೆಡೆ ವಿಶ್ವ ಯೋಗದಿನಾಚರಣೆ ಪ್ರಯುಕ್ತ ಯೋಗಾಸನ ಮಾಡಲಾಗಿದೆ. ಜಿಲ್ಲೆಯಲ್ಲೂ ಕೂಡ ಈ ದಿನವನ್ನು ಎಲ್ಲರ ಸಹಯೋಗದೊಂದಿಗೆ ಆಚರಣೆ ಮಾಡಲಾಗಿದೆ.

‘ಯೋಗ ಕ್ಷೇಮಕ್ಕಾಗಿ ಯೋಗ’ ಧ್ಯೇಯವಾಕ್ಯದೊಂದಿಗೆ ಇಂದು ಯೋಗದಿನವನ್ನು ಆಚರಿಸಲಾಗಿದೆ. ಕೆಲವೆಡೆಗಳಲ್ಲಿ ಸಾಮೂಹಿಕವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಆಚರಣೆ ಮಾಡಿದರೆ, ಬಹುತೇಕರು ತಮ್ಮ ತಮ್ಮ ಮನೆಗಳಲ್ಲಿಯೇ ಯೋಗ ಮಾಡಿದರು.

ಮಡಿಕೇರಿ ನಗರ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಅಂತರರಾಷ್ಟಿçÃಯ ಯೋಗ ದಿನವನ್ನು ನಗರ ಅಧ್ಯಕ್ಷ ಮನು ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ಯೋಗಗುರು ಕೆ.ಕೆ. ಮಹೇಶ್ ಕಾರ್ಯಕ್ರಮ ನಡೆಸಿಕೊಟ್ಟರು. ಮುಂದಿನ ದಿನಗಳಲ್ಲಿ ಮನೆಮನೆಗಳಲ್ಲಿ ಈ ಕಾರ್ಯಕ್ರಮ ಆಯೋಜಿಸಬೇಕಾಗಿ ಸಂಕಲ್ಪ ಮಾಡಿಸಿದರು. ಕಾರ್ಯಕ್ರಮವನ್ನು ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಉದ್ಘಾಟಿಸಿ, ಭಾಗವಹಿಸಿದ್ದರು.

ಜಿಲ್ಲಾ ಉಪಾಧ್ಯಕ್ಷ ಅರುಣ್ ಕುಮಾರ್, ನಗರ ಮಂಡಲದ ಪದಾಧಿಕಾರಿಗಳು, ನಗರಸಭಾ ಸದಸ್ಯರುಗಳು ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷರುಗಳು ಭಾಗವಹಿಸಿದ್ದರು.

ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಮಡಿಕೇರಿ ಶಾಸಕ ಅಪ್ಪಚ್ಚುರಂಜನ್ ಹಾಗೂ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ತಮ್ಮ ತಮ್ಮ ನಿವಾಸದಲ್ಲಿ ಯೋಗ ಮಾಡಿದರೆ; ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹಾಗೂ ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗ ಮಾಡಿದರು. (ಮೊದಲ ಪುಟದಿಂದ)

ನಾಪೋಕ್ಲು : ನಾಪೋಕ್ಲು ಇಂದಿರಾನಗರ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಿಂದ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಅಂಗನವಾಡಿ ಕಾರ್ಯಕರ್ತೆಯರಾದ ಆಶಾ, ಆಶಾಲತಾ, ಅಜಿತಾ, ಸ್ವಾತಿ, ಸೀಮಾ, ಲೀಲಾವತಿ, ಸಿಬ್ಬಂದಿ ಇದ್ದರು.

ಗುಡ್ಡೆಹೊಸೂರು: ಆರ್.ಎಸ್.ಎಸ್. ಮಂಡಲವ್ಯಾಪ್ತಿ ವತಿಯಿಂದ ವಿಶೇಷ ಯೋಗ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಇಲ್ಲಿನ ಆರ್.ಎಸ್.ಎಸ್. ಮಂಡಲ ಪ್ರಮುಖರಾದ ಬೊಟ್ಟುಮನೆ ರಮೇಶ್ ಅವರು ಸಂಘದ ಸದಸ್ಯರಿಗೆ ಯೋಗ ತರಬೇತಿ ನೀಡಿದರು. ಕಾರ್ಯಕ್ರಮವು ಇಲ್ಲಿನ ಸಮುದಾಯಭವನದಲ್ಲಿ ನಡೆಯಿತು.

ಪೊನ್ನಂಪೇಟೆ : ಸಮೀಪದ ಮುಗುಟಗೇರಿ ಗ್ರಾಮದ ರಾಷ್ಟಿçÃಯ ಸ್ವಯಂ ಸೇವಕ ಸಂಘದ ಶಾಖೆ ವತಿಯಿಂದ ಇಲ್ಲಿನ ತೊಣಕೇರಿ ಭಗವತಿ ದೇವಸ್ಥಾನದಲ್ಲಿ ವಿಶ್ವ ಯೋಗ ದಿನ ಆಚರಿಸಲಾಯಿತು. ರಾಷ್ಟಿçÃಯ ಸ್ವಯಂಸೇವಕ ಸಂಘದ ತಾಲೂಕು ಸಹ ಕಾರ್ಯವಾಹ ಕಿರಣ್ ಕುಮಾರ್ ಯೋಗ ಪ್ರವಚನ ನಡೆಸಿಕೊಟ್ಟರು.

(ಮೊದಲ ಪುಟದಿಂದ)

ಮುಳ್ಳೂರು: ವಿಶ್ವ ಯೋಗ ದಿನಾಚರಣೆಯನ್ನು ಸೋಮವಾರಪೇಟೆ ತಾಲೂಕಿನ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಅಂತರ್ಜಾಲ ಮೂಲಕ ವಿದ್ಯಾರ್ಥಿ ಕುಟುಂಬದ ಸದಸ್ಯರೊಂದಿಗೆ ಯೋಗ ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದರು. ಶಾಲಾ ವಿದ್ಯಾರ್ಥಿಗಳು ಶಿಕ್ಷಕ ಸತೀಶ್ ಆನ್‌ಲೈನ್‌ನಲ್ಲಿ ನೀಡಿದ ಮಾರ್ಗದರ್ಶನದಂತೆ ತಮ್ಮ ಮನೆಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಯೋಗ ಅಭ್ಯಾಸ ಮಾಡಿದರು. ತಾವು ಮಾಡಿದ ಯೋಗಾಸನದ ಪೋಟೋ ಮತ್ತು ವೀಡಿಯೋವನ್ನು ಶಿಕ್ಷಕ ಸತೀಶ್ ಅವರಿಗೆ ಸಾಮಾಜಿಕ ಜಾಲತಾಣ ಮೂಲಕ ಕಳುಹಿಸಿಕೊಟ್ಟರು.

ಆರ್ಟ್ ಆಫ್ ಲಿವಿಂಗ್‌ನಿAದ ದಿನಾಚರಣೆ

ಸೋಮವಾರಪೇಟೆ : ಶ್ರೀ ರವಿಶಂಕರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ಅಂರ‍್ರಾಷ್ಟಿçÃಯ ಯೋಗ ದಿನವನ್ನು ಆನ್‌ಲೈನ್ ಮೂಲಕ ಆಚರಿಸಲಾಯಿತು. ಸಂಸ್ಥೆಯ ಶಿಕ್ಷಕ ಬೆಂಗಳೂರಿನ ದೀಪಕ್ ಆರಾಧ್ಯ, ಬಂಟ್ವಾಳದ ಮುರುಳಿಕೃಷ್ಣ ಯೋಗದ ಬಗ್ಗೆ ಮಾತನಾಡಿದರು. ಆನ್‌ಲೈನ್‌ನಲ್ಲಿ ೭೦ ಮಂದಿ ಭಾಗವಹಿಸಿ ಮನೆಯಲ್ಲಿ ಯೋಗಾಭ್ಯಾಸ ಮಾಡಿದರು. ಸಂಸ್ಥೆಯ ಶಿಕ್ಷಕಿ ರಾಗಿಣಿ ಪ್ರಾಣಾಯಾಮ, ಧ್ಯಾನಗಳ ಬಗ್ಗೆ ತರಬೇತಿ ನೀಡಿದರು.