ಮಡಿಕೇರಿ, ಜೂ. ೨೧: ಜಿಲ್ಲೆಯಲ್ಲಿ ಇಂದು ಹೆಚ್ಚುವರಿ ೨೯ ಲಸಿಕಾ ಕೇಂದ್ರಗಳ ಮೂಲಕ ಒಟ್ಟು ೬೮ ಕೇಂದ್ರಗಳಲ್ಲಿ ೮೮೧೬ ಮಂದಿ ಲಸಿಕೆ ಪಡೆದುಕೊಂಡರು. ಜಿಲ್ಲೆಯಲ್ಲಿ ೩೯ ಲಸಿಕಾ ಕೇಂದ್ರಗಳಿದ್ದು, ಲಸಿಕಾ ಮೇಳದ ಪ್ರಯುಕ್ತ ಹೆಚ್ಚುವರಿ ೨೯ ಕೇಂದ್ರಗಳನ್ನು ತೆರೆಯಲಾಗಿದ್ದು ೮೮೧೬ ಮಂದಿಗೆ ಲಸಿಕೆ ನೀಡಲಾಯಿತು. ಮಡಿಕೇರಿ, ಜೂ. ೨೧: ಜಿಲ್ಲೆಯಲ್ಲಿ ಇಂದು ಹೆಚ್ಚುವರಿ ೨೯ ಲಸಿಕಾ ಕೇಂದ್ರಗಳ ಮೂಲಕ ಒಟ್ಟು ೬೮ ಕೇಂದ್ರಗಳಲ್ಲಿ ೮೮೧೬ ಮಂದಿ ಲಸಿಕೆ ಪಡೆದುಕೊಂಡರು. ಜಿಲ್ಲೆಯಲ್ಲಿ ೩೯ ಲಸಿಕಾ ಕೇಂದ್ರಗಳಿದ್ದು, ಲಸಿಕಾ ಮೇಳದ ಪ್ರಯುಕ್ತ ಹೆಚ್ಚುವರಿ ೨೯ ಕೇಂದ್ರಗಳನ್ನು ತೆರೆಯಲಾಗಿದ್ದು ೮೮೧೬ ಮಂದಿಗೆ ಲಸಿಕೆ ನೀಡಲಾಯಿತು. ವೀರಾಜಪೇಟೆ, ಸೋಮವಾರಪೇಟೆ ಹಾಗೂ ಮಡಿಕೇರಿಯ ಮೈತ್ರಿ ಹಾಲ್ನಲ್ಲಿ ಲಸಿಕೆ ಪಡೆದುಕೊಂಡರು. ಮಡಿಕೇರಿಯಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ಹೆಚ್ಚಿರುವ ಕಾರಣ ಪ್ರತ್ಯೇಕವಾಗಿ ಮೈತ್ರಿ ಹಾಲ್ನಲ್ಲಿ ಸುಮಾರು ೩೨೦ ಮಂದಿಗೆ ಲಸಿಕೆ ನೀಡಲಾಯಿತು.
(ಮೊದಲ ಪುಟದಿಂದ) ಪ್ರವಾಹ ಪೀಡಿತ ಪ್ರದೇಶದಲ್ಲಿ ವಾಸಿಸುತ್ತಿರುವ ಬಹಳಷ್ಟು ಮಂದಿಯನ್ನು ಸ್ಥಳಾಂತರಗೊಳ್ಳಲು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಇಂತಹ ೧೦,೫೨೨ ಮಂದಿಯನ್ನು ಗುರುತಿಸಲಾಗಿದೆ. ಇಂತವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲು ತೀರ್ಮಾನಿಸಿದ್ದು, ಈಗಾಗಲೇ ಹಲವು ಮಂದಿ ಲಸಿಕೆ ಪಡೆದಿದ್ದಾರೆ. ಇಂದಿನ ಲಸಿಕಾ ಮೇಳದಲ್ಲಿಯೂ ಆದ್ಯತೆ ಮೇರೆಗೆ ಇವರುಗಳಿಗೆ ಲಸಿಕೆ ನೀಡಲಾಯಿತು. ಮಡಿಕೇರಿಯ ಚಾಮುಂಡೇಶ್ವರಿ ನಗರ, ಇಂದಿರಾನಗರ, ಭಾಗಮಂಡಲ, ಮಾಲ್ದಾರೆ ಹಾಗೂ ಇತರ ಗುರುತಿಸಲ್ಪಟ್ಟ ವಿಕೋಪ ಪೀಡಿತ ಸ್ಥಳಗಳಲ್ಲಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಿ ಲಸಿಕೆ ನೀಡಲಾಯಿತು ಎಂದು ಜಿಲ್ಲಾ ಲಸಿಕಾ ಅಧಿಕಾರಿ ಡಾ.ಗೋಪಿನಾಥ್ ಅವರು ಮಾಹಿತಿ ನೀಡಿದರು.
ಕೋವ್ಯಾಕ್ಸಿನ್ ಮೊದಲನೆಯ ಡೋಸ್ ಲಭ್ಯ
ಕೋವ್ಯಾಕ್ಸಿನ್ ಕೊರತೆ ಯಿಂದಾಗಿ ಎರಡನೆಯ ಡೋಸ್ ಮಾತ್ರ ನೀಡಲಾಗುತ್ತಿದ್ದು, ಇದೀಗ ಸುಮಾರು ೪,೦೦೦ ಕೋವ್ಯಾಕ್ಸಿನ್ ಜಿಲ್ಲೆಯಲ್ಲಿದ್ದು ಮೊದಲನೆಯ ಡೋಸ್ಗಳನ್ನೂ ನೀಡಲಾಗುತ್ತಿದೆ ಮಾಲ್ದಾರೆ ಹಾಗೂ ಇತರ ಗುರುತಿಸಲ್ಪಟ್ಟ ವಿಕೋಪ ಪೀಡಿತ ಸ್ಥಳಗಳಲ್ಲಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಿ ಲಸಿಕೆ ನೀಡಲಾಯಿತು ಎಂದು ಜಿಲ್ಲಾ ಲಸಿಕಾ ಅಧಿಕಾರಿ ಡಾ.ಗೋಪಿನಾಥ್ ಅವರು ಮಾಹಿತಿ ನೀಡಿದರು.
ಕೋವ್ಯಾಕ್ಸಿನ್ ಮೊದಲನೆಯ ಡೋಸ್ ಲಭ್ಯ
ಕೋವ್ಯಾಕ್ಸಿನ್ ಕೊರತೆ ಯಿಂದಾಗಿ ಎರಡನೆಯ ಡೋಸ್ ಮಾತ್ರ ನೀಡಲಾಗುತ್ತಿದ್ದು, ಇದೀಗ ಸುಮಾರು ೪,೦೦೦ ಕೋವ್ಯಾಕ್ಸಿನ್ ಜಿಲ್ಲೆಯಲ್ಲಿದ್ದು ಮೊದಲನೆಯ ಡೋಸ್ಗಳನ್ನೂ ನೀಡಲಾಗುತ್ತಿದೆ ಎಂದು ಡಾ.ಗೋಪಿನಾಥ್ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ೧,೪೦೦ ರಷ್ಟು ಕೋವಿಶೀಲ್ಡ್ ಲಸಿಕಾ ಡೋಸ್ಗಳಿರುವುದಾಗಿಯೂ ಅವರು ತಿಳಿಸಿದ್ದಾರೆ.
ಕುಶಾಲನಗರ: ಕುಶಾಲನಗರ ಆರೋಗ್ಯ ಇಲಾಖೆ ವತಿಯಿಂದ ಕೋವಿಡ್-೧೯ ಲಸಿಕಾ ಮೇಳದಲ್ಲಿ ೫೦೦ ಕ್ಕೂ ಅಧಿಕ ಮಂದಿಗೆ ಲಸಿಕೆ ನೀಡುವ ಕಾರ್ಯಕ್ರಮ ನಡೆಯಿತು. ಸಮುದಾಯ ಆರೋಗ್ಯ ಕೇಂದ್ರ ಪಟ್ಟಣ ಪಂಚಾಯಿತಿ ಮತ್ತು ಇತರೆ ಇಲಾಖೆಗಳ ಸಮನ್ವಯದೊಂದಿಗೆ ಕುಶಾಲನಗರ ರೈತ ಸಹಕಾರ ಭವನದಲ್ಲಿ ಆಯೋಜಿಸಲಾಗಿದ್ದ ಮೇಳದಲ್ಲಿ ೧೮-೪೪ ವರ್ಷದೊಳಗಿನ ಆಧ್ಯತೆ ಗುಂಪು ಮತ್ತು ಮುಂಚೂಣಿ ಗುಂಪಿನ ಹಾಗೂ ಪ್ರವಾಹ ಪೀಡಿತ ಸ್ಥಳಗಳ ಫಲಾನುಭವಿಗಳಿಗೆ ಲಸಿಕೆ ನೀಡಲಾಯಿತು. ೪೫ ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿ ಸಿಬ್ಬಂದಿಗಳ ಕುಟುಂಬ ಸದಸ್ಯರಿಗೂ ಕೂಡ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.