ಮಡಿಕೇರಿ, ಜೂ. ೨೧: ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಕಡಿಮೆಯಾಗಿದ್ದು, ಎಡೆಬಿಡದೆ ಸುರಿಯುತ್ತಿದ್ದ ವರುಣ ಕೊಂಚ ಬಿಡುವು ನೀಡಿದ್ದಾನೆ. ಸೋಮವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡAತೆ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ ೦.೫೭ ಇಂಚು ಮಳೆಯಾಗಿದೆ.
ನಾಪೋಕ್ಲು ಕಸಬಾ ವ್ಯಾಪ್ಯಿಯಲ್ಲಿ ೧.೪೦ ಇಂಚು, ಸಂಪಾಜೆ ವ್ಯಾಪ್ತಿಯಲ್ಲಿ ೧.೯೬ ಇಂಚು, ಭಾಗಮಂಡಲ ವ್ಯಾಪ್ಯಿಯಲ್ಲಿ ೧.೦೩ ಇಂಚು, ವತಿರುಗಾಡಿ ಭಯ ಹುಟ್ಟಿಸಿದೆ. ಗ್ರಾಮದ ವೆಂಕಪ್ಪ, ಉಷಾ, ಡಿ.ಡಿ.ಬೆಳ್ಳಿಯಪ್ಪ, ಸಂಜಯ್ ಎಂಬವರ ಜಾಗದಲ್ಲಿ ಓಡಾಡಿದೆ. ಕಾಡಾನೆಯನ್ನು ಕಂಡ ಗಣೇಶ್ ಅವರು ಇತರ ಜನರನ್ನು ಎಚ್ಚರಿಸಿದ್ದಾರೆ.
ಸೋಮವಾರ ಸಂತೆ ದಿನವಾಗಿರುವುದರಿಂದ ಪಟ್ಟಣಕ್ಕೆ ತೆರಳಲು ಜನರು ರಸ್ತೆಯಲ್ಲಿ ಸೇರಿದ್ದರು. ಈಶ್ವರ ದೇವಾಲಯದ ಮುಂಭಾಗ ಮಕ್ಕಳು ಆಟವಾಡಿಕೊಂಡಿದ್ದರು. ಐಗೂರು ರಸ್ತೆಯ ಯಡವಾರೆ ಜಂಕ್ಷನ್ನಲ್ಲಿರುವ ದಿನಸಿ ಅಂಗಡಿಯಲ್ಲಿ ಜನರು ಗುಂಪು ಇತ್ತು. ಆದರೆ ಅದೃಷ್ಟವಶಾತ್ ಕಾಡಾನೆ ಜನರ ಮೇಲೆ ಧಾಳಿ ಮಾಡಿಲ್ಲ.
Äಡಿಕೇರಿ ತಾಲೂಕಿನಲ್ಲಿ ಸರಾಸರಿ ೧.೨೨ ಇಂಚು ಮಳೆ ಸುರಿದಿದೆ.
ಶ್ರೀಮಂಗಲ ಕಸಬಾ ವ್ಯಾಪ್ತಿಯಲ್ಲಿ ೦.೦೩ ಇಂಚು, ಅಮ್ಮತ್ತಿ ೦.೧೩ ಇಂಚು ಮಳೆಯಾಗಿದ್ದು, ಹುದಿಕೇರಿ, ಪೊನ್ನಂಪೇಟೆ, ಬಾಳೆಲೆ ಕಸಬಾ ವ್ಯಾಪ್ತಿಯಲ್ಲಿ ಮಳೆಯಾದ ಬಗ್ಗೆ ವರದಿಯಾಗಿಲ್ಲ. ವೀರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ಸರಾಸರಿ ೦.೦೩ ಇಂಚು ಮಳೆಯಾಗಿದೆ.
ಶನಿವಾರಸಂತೆ ಕಸಬಾ ವ್ಯಾಪ್ತಿಯಲ್ಲಿ ೦.೪೧ ಇಂಚು, ಶಾಂತಳ್ಳಿ ೧.೫೭ ಇಂಚು, ಕೊಡ್ಲಿಪೇಟೆ ೦.೧೬ ಇಂಚು, ಕುಶಾಲನಗರ ೦.೨೫, ಸುಂಟಿಕೊಪ್ಪ ೦.೨೮ ಇಂಚು ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೦.೪೮ ಇಂಚು ಮಳೆಯಾಗಿದೆ.
ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಜಿಲ್ಲಾದ್ಯಂತ ಮಳೆ ಸೋಮವಾರದಂದು ತಗ್ಗಿತ್ತು. ತುಂಬಿ ಹರಿಯುತ್ತಿದ್ದ ನದಿ, ತೋಡು, ತೊರೆಗಳಲ್ಲಿ ನೀರಿನ ಪ್ರಮಾಣ ಕ್ಷೀಣಿಸಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಇಳಿಮುಖಗೊಂಡಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಭಾರಿ ಮಳೆಗೆ ಮರದ ಕೊಂಬೆ ಬಿದ್ದು ದುರಸ್ತಿಯಾಗಿದ್ದ ವಿದ್ಯುತ್ ಲೈನ್ಗಳನ್ನು ಸರಿಪಡಿಸುವ ಕಾರ್ಯದಲ್ಲಿ ವಿದ್ಯುತ್ ಇಲಾಖೆ ಸಿಬ್ಬಂದಿಗಳು ತೊಡಗಿಸಿಕೊಂಡಿದ್ದಾರೆ.