ಕೂಡಿಗೆ, ಜೂ. ೨೦: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭವಾಗಿ ಮೂರು ವರ್ಷಗಳು ಕಳೆದರೂ ಸರಿಯಾಗಿ ಒಂದು ವರ್ಷವೂ ಸಹ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಹಾಳಾಗಿದೆ ಇದನ್ನು ಸರಿಪಡಿಸುವಂತೆ ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್ ಎಸ್ ಮಂಜುನಾಥ್ ಆಗ್ರಹಿಸಿದ್ದಾರೆ.
ಈ ಘಟಕದಲ್ಲಿ ಪ್ರಾರಂಭದ ದಿನದಿಂದ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಗ್ರಾಮದವರಿಂದ ನಿಗದಿತ ಹಣವನ್ನು ಕಟ್ಟಿಸಿಕೊಂಡು ಕಾರ್ಡ್ ನೀಡಲಾಗಿದೆ. ಆದರೆ ಘಟಕ ಹಾಳಾಗಿ ೮ ತಿಂಗಳುಗಳು ಕಳೆದರೂ ದುರಸ್ತಿ ಆಗಿಲ್ಲ. ನೀಡಿರುವ ಕಾಡ್Àð ನಿರುಪಯುಕ್ತವಾಗಿದೆ ಎಂದು ಕಾರ್ಡ್ದಾರರ ಆರೋಪವಾಗಿದೆ.
ಸಂಬAಧಪಟ್ಟ ತಾಲೂಕು ಪಂಚಾಯಿತಿ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಅಧಿಕಾರಿ ಗಳು ಸ್ಥಳ ಪರಿಶೀಲನೆ ನಡೆಸಬೇಕು ಅಲ್ಲದೆ ಈಗಿರುವ ಕಾರ್ಡ್ ಬದಲು ನಾಣ್ಯ ಹಾಕಿ ನೀರು ಪಡೆಯಲು ಅನುಕೂಲವಾಗುವಂತೆ ಮಾಡಬೇಕೆಂದು ಗ್ರಾಮ ಪಂಚಾಯತಿ ಮಾಸಿಕ ಸಭೆಯಲ್ಲಿ ತೀರ್ಮಾನಿಸ ಲಾಗಿದೆ ಆದ್ದರಿಂದ ಗ್ರಾಮಸ್ಥರಿಗೆ ನಾಣ್ಯ ಹಾಕಿ ಕುಡಿಯುವ ನೀರನ್ನು ಪಡೆಯುವ ಅವಕಾಶವನ್ನು ಕಲ್ಪಿಸಬೇಕೆಂಬ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಒತ್ತಾಯವಾಗಿದೆ.