ಶನಿವಾರಸAತೆ, ಜೂ. ೨೧: ಪೊಲೀಸ್ ಠಾಣಾ ವ್ಯಾಪ್ತಿಯ ಹಾರೆ ಹೊಸೂರು ಗ್ರಾಮದ ಅಶೋಕ್ ಅವರ ಕಾಫಿ ತೋಟದಲ್ಲಿ ಪ್ಲಾಸ್ಟಿಕ್ ಮತ್ತು ಶೀಟ್ ಹೊದಿಕೆ ಅಳವಡಿಸಿ ಅಕ್ರಮವಾಗಿ ಹಣ ವನ್ನು ಪಣವಾಗಿ ಇಟ್ಟುಕೊಂಡು ಜೂಜಾಡು ತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಶನಿವಾರಸಂತೆ ಠಾಣಾಧಿಕಾರಿ ದೇವರಾಜ್, ಎಎಸ್‌ಐಗಳಾದ ಎಂ.ಎನ್. ಶಿವಲಿಂಗ, ಹೆಡ್‌ಕಾನ್ಸ್ಟೇಬಲ್ ರವಿಚಂದ್ರ, ಲೋಕೇಶ್, ಸಂತೋಷ್‌ಕುಮಾರ್, ಹರೀಶ್, ಧನಂಜಯ್, ವಿನಯ್‌ಕುಮಾರ್ ಅವರೊಂದಿಗೆ ಜೂಜಾಟದ ಸ್ಥಳಕ್ಕೆ ದಾಳಿ ನಡೆಸಿ, ೭ ಜನರನ್ನು ವಶಕ್ಕೆ ತೆಗೆದುಕೊಂಡಿರುತ್ತಾರೆ.

ಜೂಜಾಟದ ಪಕ್ಕದ ಸ್ಥಳದಲ್ಲಿ ನಿಲ್ಲಿಸಿದ್ದ ೬ ಬೈಕ್‌ಗಳನ್ನು ಹಾಗೂ ರೂ. ೧೨೨೦ ಹಣ, ಊಟಕ್ಕೆ ಬಳಸಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ೭ ಜನ ಆರೋಪಿಗಳು ಹಾಗೂ ತಲೆಮರೆಸಿಕೊಂಡ ೬ ಜನರ ಮೇಲೆ ಕಾನೂನು ಕ್ರಮ ಕೈಗೊಂಡಿದ್ದಾರೆ. ವೃತ್ತ ನಿರೀಕ್ಷಕ ಪರಶಿವಮೂರ್ತಿ ಅವರ ಮಾರ್ಗದರ್ಶನದ ಮೇರೆಗೆ ಈ ದಾಳಿ ನಡೆದಿದೆ.