ಕೂಡಿಗೆ, ಜೂ. ೨೦: ಹಾರಂಗಿ ಯಲ್ಲಿರುವ ವಲಯದ ತೋಟಗಾರಿಕಾ ಇಲಾಖೆಯ ವತಿಯಿಂದ ಬೆಳೆಸಲಾದ ತೆಂಗಿನ ಗಿಡಗಳನ್ನು ತಾ.೨೩ ರಿಂದ ಕ್ಷೇತ್ರದ ಆವರಣದಲ್ಲಿ ಜಿಲ್ಲೆಯ ರೈತರಿಗೆ ವಿತರಣೆ ಮಾಡಲಾಗುವುದು

ತೆಂಗಿನ ಗಿಡಗಳನ್ನು ಪಡೆಯಲು ರೈತರು ತಮ್ಮ ಜಮೀನಿನ ಆರ್‌ಟಿಸಿಯ ಪ್ರತಿ ಮತ್ತು ಅಧಾರ್ ಕಾರ್ಡ್ನ ಪ್ರತಿ ಒದಗಿಸಬೇಕು. ಒಂದು ಗಿಡಕ್ಕೆ ಸರಕಾರ ರೂ. ೭೦ ನಿಗದಿಮಾಡಿದೆ ಎಂದು ಹಾರಂಗಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ವರದರಾಜ್ ತಿಳಿಸಿದ್ದಾರೆ.

ಈ ಕ್ಷೇತ್ರದಲ್ಲಿ ರೈತರಿಗೆ ವಿತರಣೆ ಮಾಡಲು ೧೩,೭೩೦ ಗಿಡಗಳನ್ನು ಬೆಳೆಸಲಾಗಿದೆ. ರೈತರಿಗೆ ಕನಿಷ್ಟ ೩೦ರಿಂದ ಗರಿಷ್ಟ ೬೦ ಗಿಡಗಳನ್ನು ನೀಡಲಾಗುವುದು ಎಂದು ವರದರಾಜ್ ತಿಳಿಸಿದ್ದಾರೆ.