*ವೀರಾಜಪೇಟೆ, ಜೂ. ೨೦: ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಬಹುಭಾಷೆ ತಾರೆ, ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ನಂತರ ಕನ್ನಡದ ಸ್ಟಾರ್ ನಟರ ಜೊತೆ ನಟಿಸಿ ಸೈ ಎನಿಸಿಕೊಂಡ ರಶ್ಮಿಕಾ ನಂತರ ಕಾಲಿವುಡ್ ಸಿನಿರಂಗದಲ್ಲಿ “ಗೀತಾ ಗೋವಿಂದA” ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪ್ರವೇಶಿಸಿದರು.
ಅಲ್ಲಿಂದ ತೆಲುಗಿನ ಸ್ಟಾರ್ ನಟರ ಜೊತೆ ನಟಿಸಿದ ರಶ್ಮಿಕಾ, ಈಗ ಬರೇ ದಕ್ಷಿಣ ಭಾರತೀಯ ಚಿತ್ರರಂಗದ ನಟಿಯಾಗಿ ಉಳಿದಿಲ್ಲ. ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿರುವ ರಶ್ಮಿಕಾ ಮಂದಣ್ಣ ಈಗಾಗಲೆ ಮಿಶನ್ ಮಂಜು ಚಿತ್ರದಲ್ಲಿ ನಟಿಸುತ್ತಿದ್ದು ಜೊತೆಗೆ ಬಾಲಿವುಡಿನ ಹೆಸರಾಂತ ನಟ ಅಮಿತಾ ಬಚ್ಚನ್ ಜೊತೆಯಲ್ಲಿ ನಟನೆ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ರಶ್ಮಿಕಾ ಮಂದಣ್ಣ ಅಭಿಮಾನಿ ಬಳಗವೂ ದೊಡ್ಡದಾಗಿಯೇ ಬೆಳೆದಿದೆ.
ಹಲವು ಸಿನಿ ತಾರೆಯರಿಗೆ ಹಲವು ಬಗೆಯ ಅಭಿಮಾನಿಗಳಿರುವುದನ್ನು ಕಂಡಿದ್ದೇವೆ. ಆದರೆ ಇಲ್ಲೊಬ್ಬ ಅಭಿಮಾನಿ ಆಂಧÀ್ರಪ್ರದೇಶದ ತೆಲಂಗಾಣದಿAದ ವೀರಾಜಪೇಟೆಗೆ ಶನಿವಾರ ರಾತ್ರಿ ಬಂದಿಳಿದಿದ್ದಾರೆ. ಮೈಸೂರಿನವರೆಗೂ ರೈಲಿನಲ್ಲಿ ಬಂದು ಬಳಿಕ ಗೂಡ್ಸ್ ಆಟೋದಲ್ಲಿ ವೀರಾಜಪೇಟೆ ತಲುಪಿದ ಆತ ‘ಗೂಗಲ್ ಮ್ಯಾಪ್’ ಹಾಕಿಕೊಂಡು ಮಗ್ಗುಲ ಗ್ರಾಮದಲ್ಲಿ ಮಂದಣ್ಣ ಎನ್ನುವವರಿಗೆ ಸೇರಿದ ಜಾಗ ಇರುವುದರಿಂದ ಇಲ್ಲಿಯೇ ರಶ್ಮಿಕಾ ಮಂದಣ್ಣ ಮನೆ ಇರಬೇಕು ಅಂದುಕೊAಡು ಆಟೋದಲ್ಲಿ ಮಗ್ಗುಲ ಗ್ರಾಮಕ್ಕೆ ಬಂದಿಳಿದು ಅಕ್ಕಪಕ್ಕದ ಜನರನ್ನು ರಶ್ಮಿಕಾ ಮಂದಣ್ಣ ಮನೆಯೆಲ್ಲಿ? ಎಂದು ವಿಚಾರಿಸಿ ಬಹಳ ಹೊತ್ತು ಹುಡುಕಾಟ ನಡೆಸಿದ್ದಾರೆ.
ಇಂಗ್ಲೀಷ್ನಲ್ಲಿ ಮಾತನಾಡುತ್ತಾ ರಾತ್ರಿ ಹೊತ್ತಿನ್ನಲ್ಲಿ ರಶ್ಮಿಕಾ ಮಂದಣ್ಣನನ್ನು ಭೇಟಿಯಾಗಬೇಕು ಎಂದು ಹೇಳುತ್ತಿದ್ದನ್ನು ಕೇಳಿ ಸಾರ್ವಜನಿಕರಿಗೆ ಭಯವಾಗಿ ೧೧೨ ತುರ್ತು ಸಹಾಯವಾಣಿಗೆ ಕರೆಮಾಡಿ ತಿಳಿಸಿದಾಗ ಪೊಲೀಸರು ಬಂದು ಈತನ ಬಗ್ಗೆ ವಿಚಾರಿಸಿದಾಗ ಆತನ ಡ್ರೆöÊವಿಂಗ್ ಲೈಸೆನ್ಸ್ ತೋರಿಸಿದ ಅದರಲ್ಲಿಯೂ ತೆಲಂಗಾಣದ ವಿಳಾಸವಿತ್ತು. ಮತ್ತು ಆತನ ಹೆಸರು ಆಕಾಶ್ ತ್ರಿಪಾಠಿ ಎಂದು ಬರೆದಿತ್ತು. ನಂತರ ಪೊಲೀಸರು ಈತನ ಬಗ್ಗೆ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಾಹನದಲ್ಲಿ ಕರೆದುಕೊಂಡು ಹೋದರು. ಈ ಸುರಿವ ಮಳೆಯಲ್ಲಿ, ಅದರಲ್ಲೂ ಲಾಕ್ಡೌನ್ ಸಮಯದಲ್ಲಿ ತನ್ನ ನೆಚ್ಚಿನ ನಟಿಯನ್ನು ನೋಡಬೇಕು ಎಂದು ಇಲ್ಲಿಗೆ ಬಂದಿರುವುದನ್ನು ಕಂಡ ಸಾರ್ವಜನಿಕರು ಏನ್ ಅಭಿಮಾನಪ್ಪ ಎಂದು ಮಾತನಾಡಿಕೊಳ್ಳುತ್ತಿದ್ದರು.
-ಉಷಾ ಪ್ರೀತಂ