
ಮಡಿಕೇರಿ, ಜೂ. ೨೦: ಭಾರತೀಯ ವಾಯು ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊಡಗಿನ ಅಧಿಕಾರಿಯೊಬ್ಬರು ಬಡ್ತಿ ಹೊಂದಿದ್ದು, ಇದೀಗ ಗ್ರೂಪ್ ಕ್ಯಾಪ್ಟನ್ ಆಗಿ ನಿಯುಕ್ತಿಗೊಂಡಿದ್ದಾರೆ. ಮೂಲತಃ ವಿ. ಬಾಡಗ ನಿವಾಸಿಯಾಗಿರುವ ಮಳವಂಡ ಟಿ. ನಂಜಪ್ಪ (ಅಶ್ವಥ್) ಅವರು ವಿಂಗ್ ಕಮಾಂಡರ್ ಸ್ಥಾನದಿಂದ ಗ್ರೂಪ್ ಕ್ಯಾಪ್ಟನ್ ಆಗಿ ಆಯ್ಕೆಗೊಂಡಿದ್ದಾರೆ. ಇವರು ಮಳವಂಡ ತಿಮ್ಮಯ್ಯ ಹಾಗೂ ಜಾನಕಿ (ತಾಮನೆ ಚಟ್ಟಂಗಡ) ದಂಪತಿಯ ಪುತ್ರ. ಪತ್ನಿ ಬಲ್ಯಮಾಂಡ ಅಕ್ಕಮ್ಮ.