ಮಡಿಕೇರಿ, ಜೂ. ೨೦: ಮೈಕ್ರೋಸಾಫ್ಟ್ ಐರ್‌ಲ್ಯಾಂಡಿನ ಡಿಜಿಟಲ್ ಕ್ರೆöÊಮ್ ಘಟಕದ ಸೈಬರ್ ಕ್ರೆöÊಮ್ ಇಂಟಲಿಜೆನ್ಸ್ ಹಾಗೂ ತನಿಖಾ ಅಧಿಕಾರಿಯಾಗಿ ಕೊಡಗಿನ ಮಾಚಿಮಾಡ ಪ್ರಜೇತ್ ಗಣಪತಿ ಆಯ್ಕೆಯಾಗಿದ್ದಾರೆ. ಈ ನೂತನ ಹುದ್ದೆಯ ಮೂಲಕ ಸುಮಾರು ೧೮೦ ದೇಶಗಳಲ್ಲಿನ ಡಿಜಿಟಲ್ ಕ್ರೆöÊಮ್ ಅಥವಾ ಸೈಬರ್ ಅಪರಾಧಗಳನ್ನು ತಡೆಯುವ ಇಲಾಖೆಗಳೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ. ಬಲ್ಯಮಂಡೂರಿನ ಮಾಚಿಮಾಡ ಗಣಪತಿ ಹಾಗೂ ದರಣಿಜ ದಂಪತಿಯ ಪುತ್ರರಾಗಿದ್ದಾರೆ.

ಗಣಪತಿ ಅವರು ನಿವೃತ್ತ ವಿಜಯ ಬ್ಯಾಂಕ್ ಉದ್ಯೋಗಿ ಹಾಗೂ ದರಣಿಜ ಅವರು ಪೊನ್ನಂಪೇಟೆ ಸಂತ ಅಂಥೋಣಿ ಪ್ರೌಢಶಾಲೆಯ ನಿವೃತ್ತ ಪ್ರಾಂಶುಪಾಲೆ. ಪ್ರಜೇತ್ ಅವರ ಪತ್ನಿ ವರ್ಷಾ ಅಯ್ಯಪ್ಪ ಐರ್‌ಲ್ಯಾಂಡಿನ ಸಾಫ್ಟ್ವೇರ್ ಸಂಸ್ಥೆಯೊAದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಜೇತ್ ಅವರು ಸಂತ ಅಂತೋಣಿ ಶಾಲೆಯಲ್ಲಿ ಶಿಕ್ಷಣ ಮುಗಿಸಿ ಪಿಯುಸಿ ವಿದ್ಯಾಭ್ಯಾಸವನ್ನು ಮೈಸೂರು ಹಾಗೂ ಇಂಜಿನಿಯರಿAಗ್ ಅನ್ನು ಮಂಗಳೂರಿನಲ್ಲಿ ಮುಗಿಸಿದ್ದರು. ಉನ್ನತ ಶಿಕ್ಷಣವನ್ನು ಐರ್‌ಲ್ಯಾಂಡ್‌ನಲ್ಲಿ ಪೂರೈಸಿದ ಇವರು ಅಮೇಜಾನ್, ಲಿಂಕ್ ಗ್ರೂಪ್ ಹಾಗೂ ಟಾಸ್ಕ್ ಅಸ್‌ನಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ್ದರು.