*ಸಿದ್ದಾಪುರ, ಜೂ.೨೦: ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ ವ್ಯಕ್ತಿಯೊಬ್ಬರ ಸಂಚಾರಕ್ಕೆ ಮೀಸಲಾಗಿದ್ದ ಏಕೈಕ ಕಾಲುದಾರಿಯನ್ನು ಚರಂಡಿಯನ್ನಾಗಿ ಪರಿವರ್ತಿಸಿದ ಪ್ರಕರಣ ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯ ಅಭ್ಯತ್ಮಂಗಲ ಒಂಟಿಯAಗಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಗ್ರಾ.ಪA. ೧೫ನೇ ಹಣಕಾಸು ಯೋಜನೆಯಡಿ ಚರಂಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಸಂದರ್ಭ ಒಂಟಿಯAಗಡಿ ಗ್ರಾಮದ ನಿವಾಸಿ ಕರುಣ ಎಂಬವರ ಮನೆಯ ಬಳಿ ಇದ್ದ ಕಾಲುದಾರಿಯನ್ನು ಅಗೆದು ಚರಂಡಿ ನಿರ್ಮಿಸಿದ್ದಾರೆ. ಇದೊಂದು ದಾರಿ ಬಿಟ್ಟರೆ ಇವರಿಗೆ ಸಂಚಾರಕ್ಕೆ ಬೇರೆ ಮಾರ್ಗವೇ ಇಲ್ಲ. ಮನೆಯ ಹಿಂಬದಿಯಲ್ಲಿ ಹೊಳೆ ಹರಿಯುತ್ತಿದೆ, ಮುಂದೆ ಚರಂಡಿ ನಿರ್ಮಿಸಲಾಗುತ್ತಿದೆ. ವಿಶೇಷಚೇತನ ನಾಗಿರುವ ತನ್ನ ಸ್ಥಿತಿ ಅತಂತ್ರವಾಗಿದ್ದು, ತಾನು ನೆಂಟರ ಮನೆಗೆ ಹೋಗಿ ಬರುವಷ್ಟರಲ್ಲಿ ಕಾಲುದಾರಿ ಇಲ್ಲದ ಹಾಗೆ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.