ಕುಶಾಲನಗರ, ಜೂ. ೨೦: ಕೊರೊನಾ ಮಾರಿಯಿಂದ ಕಳೆದ ೨ ವರ್ಷಗಳ ಅವಧಿಯಲ್ಲಿ ವಿಶ್ವದ ಎಲ್ಲೆಡೆ ಜನಜೀವನ ಅಸ್ತವ್ಯಸ್ತಗೊಳ್ಳುವ ಜೊತೆಗೆ ೨ನೇ ಅಲೆ ಮಾತ್ರ ಹಲವರ ಜೀವನವನ್ನೇ ತಲ್ಲಣಗೊಳಿಸಿದ ಘಟನೆಗಳು ಅಲ್ಲಲ್ಲಿ ಘಟಿಸಿಹೋಗಿವೆ.

ಕೋವಿಡ್-೧೯ ಕೆಲವರನ್ನು ಮಾನಸಿಕವಾಗಿ ಘಾಸಿಗೊಳಿಸಿದರೆ, ಇನ್ನೂ ಕೆಲವರ ಬಲಿ ತೆಗೆದುಕೊಳ್ಳುವ ಮೂಲಕ ಕೊರೊನಾ ಸೋಂಕು ಪುಟ್ಟ ಮಕ್ಕಳನ್ನು ಅನಾಥರನ್ನಾಗಿ ಬಾಳುವಂತೆ ಮಾಡಿದೆ. ಕಳೆದ ಮಾರ್ಚ್ ನಂತರದ ಅವಧಿಯಲ್ಲಿ ಕೊರೊನಾ ಹಲವರ ಜೀವವನ್ನು ಬಲಿತೆಗೆದುಕೊಂಡಿದ್ದು, ಇಡೀ ಕುಟುಂಬ ಬೀದಿ ಪಾಲಾಗುವಂತೆ ಮಾಡಿದ ಘಟನೆಗಳು ಕೂಡ ಕೆಲವೆಡೆ ನಡೆದಿದೆ. ತಂದೆ-ತಾಯಿ ಜೊತೆ ಬದುಕು ಸಾಗಿಸುತ್ತಿದ್ದ ಮಕ್ಕಳು ಅನಾಥರಾಗಿ ಬದುಕುವಂತೆ ಮಾಡಿ ಕೊರೊನಾ ತನ್ನ ಕರಾಳ ಛಾಯೆ ಬೀರಿದೆ. ಕೊಡಗು ಜಿಲ್ಲೆಯಲ್ಲಿ ಸುಮಾರು ೩೫ ಮಕ್ಕಳು ಒಬ್ಬರು ಪಾಲಕರನ್ನು ಕಳೆದುಕೊಂಡಿದ್ದರೆ ೩ ಮಕ್ಕಳು ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ.

ಕುಶಾಲನಗರದ ಸಮೀಪ ಸುಂದರನಗರದಲ್ಲಿ ಕಳೆದ ಹಲವು ವರ್ಷಗಳಿಂದ ನೆಮ್ಮದಿಯ ಬದುಕು ಕಾಣುತ್ತಿದ್ದ ಕುಟುಂಬವೊAದಕ್ಕೆ ಈ ಬಾರಿಯ ಕೊರೊನಾ ಆಘಾತ ಅಪ್ಪಳಿಸುವುದರೊಂದಿಗೆ ದಂಪತಿ ಗಳಿಬ್ಬರು ಬಲಿಯಾಗಿ ಇದೀಗ ಏಕಮಾತ್ರ ಪುತ್ರನನ್ನು ಅನಾಥನಾಗಿ ಬಾಳುವಂತೆ ಮಾಡಿರುವುದು ಕೊರೊನಾದ ಕ್ರೌರ್ಯಕ್ಕೆ ಒಂದು ಉದಾಹರಣೆಯಾಗಿದೆ. ಶಾಲೆಗೆ ತೆರಳುತ್ತಿದ್ದ ಪುತ್ರ ಇದೀಗ ತಂದೆ-ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿ ಭವಿಷ್ಯದ ಬಗ್ಗೆ ಚಿಂತಿಸುವAತಾಗಿದೆ.

ತAದೆ ಜಾರ್ಜ್ ಮರಕೆಲಸ ಮಾಡಿಕೊಂಡು ಬದುಕು ಸಾಗಿಸು ತ್ತಿದ್ದು, ಕಳೆದ ತಿಂಗಳಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಕಾರಿ ಯಾಗದೆ ಸಾವಿಗೀಡಾದರೆ, ಇತ್ತ ತಾಯಿ ಗ್ರೇಸಿ ಕೂಡ ಅದೇ ತಿಂಗಳಲ್ಲಿ ಕೊರೊನಾ ಮಾರಿಗೆ ಬಲಿಯಾಗಿ ರೋದು ಈ ಕುಟುಂಬದ ದುರಂತ ಕಥೆ. ಸ್ಥಳೀಯ ಖಾಸಗಿ ಶಾಲೆಯೊಂದರಲ್ಲಿ ೯ನೇ ತರಗತಿ ಪಾಸಾಗಿ ಇದೀಗ

(ಮೊದಲ ಪುಟದಿಂದ) ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡ ಬೇಕಾಗಿರುವ ಶ್ಯಾಮ್ ತನ್ನ ಮುಂದಿನ ಭವಿಷ್ಯದ ಬಗ್ಗೆ ಏಕಾಂತವಾಗಿ ಚಿಂತಿಸುವAತಾಗಿದೆ. ಚಿಕ್ಕಮ್ಮ, ದೊಡ್ಡಮ್ಮ ಮತ್ತಿತರ ಆಸರೆಯೊಂದಿಗೆ ಪ್ರಸಕ್ತ ಶ್ಯಾಮ್ ದಿನದೂಡುತ್ತಿದ್ದು, ಮುಂದೇನು ಎನ್ನುವಂತಾಗಿದೆ. ಶ್ಯಾಮ್ ಶಿಕ್ಷಣದ ಜೊತೆಗೆ ಕ್ರೀಡೆಗಳಲ್ಲಿ ಆಸಕ್ತಿಯೊಂದಿಗೆ ಮುಂಚೂಣಿ ಸ್ಥಾನ ದಲ್ಲಿದ್ದು, ಮುಂದೆ ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಆಶಯವನ್ನು ‘ಶಕ್ತಿ'ಯೊಂದಿಗೆ ವ್ಯಕ್ತಪಡಿಸಿದ್ದಾನೆ.

ಸರ್ಕಾರ ಮತ್ತು ಸಂಘ-ಸAಸ್ಥೆಗಳು ಗಮನಿಸಿ ಇಂತಹ ಮಕ್ಕಳ ಭವಿಷ್ಯ ರೂಪಿಸುವ ಬಗ್ಗೆ ಚಿಂತನೆ ಹರಿಸಬೇಕಾಗಿದೆ. ಇದೇ ರೀತಿಯ ಇನ್ನೊಂದು ಆಘಾತಕಾರಿ ಘಟನೆ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕಾಣಬಹುದು. ರಥಬೀದಿಯಲ್ಲಿ ಕಾಫಿ ಪುಡಿ ಅಂಗಡಿಯೊAದನ್ನು ನಡೆಸಿ ಜೀವನ ಸಾಗಿಸುತ್ತಿದ್ದ ಉದ್ಯಮಿ ವೆಂಕಟ ನಾಗೇಶ್ ಕಳೆದ ೯ ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿ ದ್ದರು. ಈ ಆಘಾತಕಾರಿ ಬೆಳವಣಿಗೆ ನಡುವೆ ಪುಟ್ಟ ಮಗುವೊಂದರ ಜೊತೆಗೆ ತಾಯಿ ಛಾಯ ಅಶ್ವಿನಿ ಬದುಕು ಸಾಗಿಸುತ್ತಿದ್ದ ಬೆನ್ನಲ್ಲೇ ಕೊರೊನಾ ಸೋಂಕಿಗೆ ಛಾಯ ಬಲಿಯಾಗ ಬೇಕಾಯಿತು. ಏಕ ಮಾತ್ರ ಪುತ್ರಿ ನಾಗ ಅಶ್ವಿನಿ ಇದೀಗ ಅನಾಥೆ ಯಾಗಿ ತನ್ನ ಭವಿಷ್ಯವನ್ನು ರೂಪಿಸಿ ಕೊಳ್ಳ ಬೇಕಾಗಿದೆ. ಸದÀ್ಯ ಅಜ್ಜಿ ರಾಮ ಲಕ್ಷö್ಮಮ್ಮ ಅವರ ಆರೈಕೆಯಲ್ಲಿರುವ ಯುವತಿ ನಾಗ ಅಶ್ವಿನಿ ತನ್ನ ಪೋಷಕರಿಲ್ಲದ ಕೊರಗಿನೊಂದಿಗೆ ಕಾಲೇಜು ಶಿಕ್ಷಣ ಮುಂದುವರೆಸ ಬೇಕಾಗಿದೆ. ಇದರೊಂದಿಗೆ ಜೀವನ ರೂಪಿಸಲು ಅವಶ್ಯವಿರುವ ವ್ಯವಸ್ಥೆ ಕಲ್ಪಿಸಿಕೊಳ್ಳಬೇಕಾಗಿದೆ.

ತನ್ನ ತಂದೆ ಮಾಡಿರುವ ಲಕ್ಷಾಂತರ ಸಾಲ ಮರುಪಾವತಿ ಹಿನ್ನೆಲೆಯಲ್ಲಿ ಈಗಾಗಲೇ ಕೆಲವರು ಮನೆಯ ಕದ ತಟ್ಟುತ್ತಿರುವುದು ಈ ಕುಟುಂಬಕ್ಕೆ ಒಂದು ರೀತಿಯ ಮಾನಸಿಕ ಹಿಂಸೆಯಾದAತಾಗುತ್ತಿದೆ ಎನ್ನುವುದು ಅವರ ಕೊರಗು. ಸದÀ್ಯ ಪಿಯುಸಿ ತರಗತಿಯಲ್ಲಿರುವ ತಾನು ಹೆಚ್ಚಿನ ವ್ಯಾಸಂಗ ಮಾಡುವುದ ರೊಂದಿಗೆ ಇರುವ ಅಂಗಡಿಯನ್ನು ನೋಡಿಕೊಳ್ಳುತ್ತೇನೆ ಎನ್ನುತ್ತಾಳೆ ಬಾಲಕಿ ನಾಗ ಅಶ್ವಿನಿ.

ಸಮುದಾಯದ ಮೂಲಕ ಅಲ್ಪ-ಸ್ವಲ್ಪ ಸಹಕಾರ ನೀಡುವ ಭರವಸೆಯನ್ನು ಸ್ಥಳೀಯ ಆರ್ಯ ವೈಶ್ಯ ಮಂಡಳಿಯ ಪದಾಧಿಕಾರಿಗಳು ನೀಡಿದ್ದಾರೆ. ಆದರೆ ಜೀವನ ಪರ್ಯಂತ ಪೋಷಕರಿಲ್ಲದ ಕೊರಗಿನೊಂದಿಗೆ ಬದುಕು ಸಾಗಿಸುವ ಅನಾಥ ಮಕ್ಕಳಿಗೆ ಸರ್ಕಾರದ ಹಾಗೂ ಸಂಘ ಸಂಸ್ಥೆಗಳ ಶಾಶ್ವತ ನೆರವಿನ ಅಗತ್ಯ ಇದ್ದೇ ಇದೆ.