ವೀರಾಜಪೇಟೆ, ಜೂ. ೨೦: ಮಡಿಕೇರಿಯ ಕೋಟೆ ಅರಮನೆ, ಶತಮಾನಗಳ ಹಿಂದಿನ ರಾಜರ ಗದ್ದುಗೆ ಸ್ಮಾರಕವಾಗಿ ರಕ್ಷಣೆ ಮಾಡಲು ಅಧಿಕಾರಿಗಳು ನಿರ್ಲಕ್ಷö್ಯತೆ ವಹಿಸುತ್ತಿರುವುದರಿಂದ ವಿವಾದದ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯ ಸಂಬAಧಿಸಿದ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತು. ಮಡಿಕೇರಿಯ ಕೋಟೆ ಅರಮನೆ, ಗದ್ದುಗೆಯ ಕಾಮಗಾರಿಯನ್ನು ಹಂತ ಹಂತವಾಗಿ ಮುಕ್ತಾಯಗೊಳಿಸುವುದಾಗಿ ಪುರಾತತ್ವ ಇಲಾಖೆಯ ಹಾಗೂ ಸರಕಾರದ ಪರ ವಕೀಲರಾದ ವಿಜಯ್ ಕುಮಾರ್ ಪಾಟೀಲ್ ವಿಭಾಗೀಯ ಪೀಠಕ್ಕೆ ತಿಳಿಸಿದ್ದನ್ನು ಪುರಾತತ್ವ ಇಲಾಖೆಯ ಪರ ಹಾಜರಿದ್ದ ಮಧುಕರ್ ದೇಶಪಾಂಡೆಯವರು ಸಮರ್ಥಿಸಿಕೊಂಡರು.

ರಿಟ್ ಅರ್ಜಿದಾರರಾದ ಮಾಹಿತಿ ಆಯೋಗದ ನಿವೃತ್ತ ಆಯುಕ್ತ ಜೆ.ಎಸ್. ವಿರುಪಾಕ್ಷಯ್ಯ ಅವರ ಪರವಾಗಿ ವಾದಿಸಿದ ವಕೀಲ ಎನ್. ರವೀಂದ್ರನಾಥ್ ಕಾಮತ್ ಅವರು, ಕೊಡಗಿನಲ್ಲಿ ಈಗಾಗಲೇ ಮುಂಗಾರು ಮಳೆ ಆರಂಭವಾಗಿದ್ದು ಕೋಟೆ ಅರಮನೆಯಲ್ಲಿ ನಿರಂತರ ಸೋರಿಕೆ ಉಂಟಾಗಿರುವುದರಿAದ ಅರಮನೆ ಇನ್ನಷ್ಟು ಹಾನಿಯಾಗುವ ಸಾಧ್ಯತೆ ಇದೆ. ರಾಜ್ಯ ಸರಕಾರವು ಇದರ ದುರಸ್ತಿಗಾಗಿ ರೂ. ೧೦.೭ ಕೋಟಿ ಮಂಜೂರು ಮಾಡಿದ್ದರೂ, ಅಧಿಕಾರಿಗಳು ಕೇವಲ ಎರಡೂವರೆ ಕೋಟಿಗೆ ಮಾತ್ರ ಟೆಂಡರ್ ಕರೆದಿದ್ದಾರೆ. ಇದರಿಂದ ಕಾಮಗಾರಿ ಪೂರ್ಣಗೊಳ್ಳಲು ಸಾಧ್ಯವಿಲ್ಲ. ಪುರಾತನ ಗದ್ದುಗೆ ರಕ್ಷಣೆಗೆ ಸಂಬAಧಿಸಿದAತೆ ಮಡಿಕೇರಿ ತಾಲೂಕು ತಹಶೀಲ್ದಾರ್ ಜಾಗದ ಸರ್ವೆ ಮಾಡಿದ್ದು, ಈ ಜಾಗದಲ್ಲಿ ಮದರಸ ಸಂಸ್ಥೆಯೊAದು ಜಾಗ ಅತಿಕ್ರಮಣ ಮಾಡಿ ಅನಧಿಕೃತವಾಗಿ ಕಟ್ಟಡವನ್ನು ನಿರ್ಮಿಸಿದ್ದು ಹಾಗೂ ಇದರೊಂದಿಗೆ ಸುಮಾರು ೫ ಎಕರೆ ಜಾಗವನ್ನು ೨೦ ಮಂದಿ ಅತಿಕ್ರಮಣ ಮಾಡಿದ್ದಾರೆ ಎಂದು ತಹಶೀಲ್ದಾರ್ ಸರ್ವೆ ವರದಿಯಲ್ಲಿ ಹೆಸರು ಸಮೇತ ವಿವರವಾಗಿ ತಿಳಿಸಲಾಗಿದೆ.

ಈ ವರದಿಯನ್ನು ವಿಭಾಗೀಯ ಪೀಠದ ಮುಂದೆ ಸರಕಾರದ ಪರ ವಕೀಲರು ಸಲ್ಲಿಸಿದನ್ನು ನ್ಯಾಯಮೂರ್ತಿಗಳ ಗಮನಕ್ಕೆ ತರಲಾಯಿತು. ಮಡಿಕೇರಿಯ ಕೋಟೆ ಅರಮನೆಯನ್ನು ಜಿಲ್ಲಾಧಿಕಾರಿಯವರು ಪರಿಶೀಲನೆ ಮಾಡುವಂತೆ ವಿಭಾಗೀಯ ಪೀಠ ಈ ಹಿಂದೆ ನಿರ್ದೇಶಿಸಿದ್ದರೂ ಅಧಿಕಾರಿಗಳು ಈ ತನಕ ಪರಿಶೀಲಿಸದೆ ವರದಿ ನೀಡಿಲ್ಲ ಎಂದು ದೂರಿದರು.

(ಮೊದಲ ಪುಟದಿಂದ) ರಾಜರ ಗದ್ದುಗೆ ಜಾಗವನ್ನು ಅತಿಕ್ರಮಣ ಮಾಡಿದವರ ವಿರುದ್ಧ ನ್ಯಾಯಾಲಯ ಕೈಗೊಳ್ಳುವ ಕ್ರಮವನ್ನು ಚಾಚು ತಪ್ಪದೆ ಪಾಲಿಸುವುದಾಗಿ ವಿಭಾಗೀಯ ಪೀಠದ ಮುಂದೆ ಸರಕಾರದ ವಕೀಲ ವಿಜಯ್ ಕುಮಾರ್ ಪಾಟೀಲ್ ತಿಳಿಸಿದರು. ಇಲಾಖೆಯ ವಕೀಲ ಮಧುಕರ್ ದೇಶಪಾಂಡೆಯವರು ವಾದ ಮಂಡಿಸಿ ರಾಜ್ಯ ಪುರಾತತ್ವ ಇಲಾಖೆ ಹಾಗೂ ಮಡಿಕೇರಿಯ ರಾಜರ ಸ್ಮಾರಕ ಗದ್ದುಗೆಯನ್ನು ಕೇಂದ್ರ ಸರಕಾರ ವಶಕ್ಕೆ ವಹಿಸುವ ಪ್ರಕ್ರಿಯೆ ಮುಂದುವರೆದಿರುವುದಾಗಿ ವಿಭಾಗೀಯ ಪೀಠಕ್ಕೆ ತಿಳಿಸಿದರು.

ಗದ್ದುಗೆ ಜಾಗದ ಪೈಕಿ ೫ ಎಕರೆ ಜಾಗವನ್ನು ೨೦ ಮಂದಿ ಅತಿಕ್ರಮಣ ಮಾಡಿದವರ ಅಹವಾಲುಗಳನ್ನು ವಿಭಾಗೀಯ ಪೀಠ ವಿಚಾರಣೆ ನಡೆಸಬೇಕೆಂಬ ವಕೀಲ ಕಾಶೀನಾಥ್ ಅವರ ಮನವಿಯನ್ನು ವಿಭಾಗೀಯ ಪೀಠ ತಿರಸ್ಕರಿಸಿತು.

ವಿಭಾಗೀಯ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ಹಾಗೂ ಸೂರಜ್‌ಗೋವಿಂದರಾಜ್ ವಿಚಾರಣೆ ನಡೆಸಿದರು. ಮುಂದಿನ ವಿಚಾರಣೆಯನ್ನು ಜುಲೈ ೧೬ಕ್ಕೆ ಮುಂದೂಡಲಾಯಿತು.