ಕೂಡಿಗೆ, ಜೂ. ೨೦: ಮಳೆಗಾಲದಿಂದ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವ ಹಿನ್ನೆಲೆ, ಕಾವೇರಿ ನದಿ ತೀರದ ನಿವಾಸಿಗಳಿಗೆ ಮುಂಜಾಗ್ರತಾ ದೃಷ್ಟಿಯಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕೆAದು ಹಾಗೂ ಯಾವುದೇ ಅನಾಹುತಗಳಿಗೆ ಎಡೆಮಾಡಿಕೊಂಡದAತೆ ಮುನ್ನೆಚ್ಚರಿಕೆ ವಹಿಸುವಂತೆ ಕಂದಾಯ ಇಲಾಖೆಯ ವತಿಯಿಂದ ತಗ್ಗು ಪ್ರದೇಶದ ಗ್ರಾಮಗಳಿಗೆ ತಿಳುವಳಿಕೆ ಪತ್ರವನ್ನು ನೀಡಲಾಯಿತು.
ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ, ಹೆಬ್ಬಾಲೆ, ಕೂಡುಮಂಗಳೂರು, ಬಸವನತ್ತೂರು, ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ, ಮದಲಾಪುರ, ಹುದುಗೂರು, ಮಾವಿನಹಳ್ಳ ಗ್ರಾಮದ ತಗ್ಗು ಪ್ರದೇಶದ ನಿವಾಸಿಗಳಿಗೆ ಕಂದಾಯ ಇಲಾಖೆಯ ವತಿಯಿಂದ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ತಿಳುವಳಿಕೆಯ ಪತ್ರವನ್ನು ನೀಡಲಾಗುತ್ತಿದೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ರಾಕೇಶ್, ಸಂತೋಷ್, ಅಯಿಷಾ, ಕಂದಾಯ ಇಲಾಖೆಯ ಲೆಕ್ಕಾಧಿಕಾರಿ ಗುರುದರ್ಶನ್, ಪಿಯರ್ ಮಹಮ್ಮದ್ ಸೇರಿದಂತೆ ಆಯಾ ವಾರ್ಡ್ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಇದ್ದರು.