"ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು" ಎನ್ನುವ ನಾಣ್ನುಡಿಯ ಹಾಗೆ ನಮ್ಮ ಭಾರತೀಯ ಸನಾತನ ಪದ್ಧತಿಯ ಬಲಿಷ್ಠ ತಳಹದಿಯ ಮೇಲೆ ವೈಜ್ಞಾನಿಕತೆಯ ಅದೆಷ್ಟೇ ಬೃಹತ್ ಕಟ್ಟಡ ಕಟ್ಟಿದರೂ ಸಹ ಸದೃಢ ಹಾಗೂ ಸುಭದ್ರವಾಗಿರುತ್ತದೆ. ಸುಮಾರು ಆರು ಸಾವಿರ ವರ್ಷಗಳ ಹಿಂದೆ ಸೃಷ್ಟಿಯಾದ ಪತಂಜಲಿ ಮಹರ್ಷಿಗಳ ಕನಸಿನ ಕೂಸು ಈ ಯೋಗ ಯೋಗಾಭ್ಯಾಸದ ಮಹತ್ವ ಹಾಗೂ ಲಾಭ ಅಪಾರವಾದದ್ದು. ಯೋಗ ಎಂಬ ಪದವು "ಯಂಜ್" ಎಂಬ ಸಂಸ್ಕೃತ ಪದದಿಂದ ಬಂದಿದೆ "ಯಂಜ್" ಎಂದರೆ ಸೇರಿಸು ಅಥವಾ ಜೋಡಿಸು ಎಂಬರ್ಥವನ್ನು ಕೊಡುತ್ತದೆ ದೇಹ ಮನಸ್ಸು ಮತ್ತು ಆತ್ಮ ಗಳನ್ನು ಒಂದೆಡೆ ಕೇಂದ್ರೀಕರಿಸುವ ಸಾಧಕ ಶಕ್ತಿಯೇ ಯೋಗ. ಮತ್ತೊಂದು ಅರ್ಥದಲ್ಲಿ ಹೇಳುವುದಾದರೆ ಮನುಷ್ಯನ ಜ್ಞಾನಶಕ್ತಿ, ಬುದ್ಧಿಶಕ್ತಿ ಮತ್ತು ಮನ:ಶಕ್ತಿಯನ್ನು ಸಿದ್ಧಿಸಿಕೊಳ್ಳುವ ಸಾಧನೆಯೇ ಯೋಗವಾಗಿದೆ. ಕೇವಲ ಶುಚಿ-ರುಚಿ ಹಾಗೂ ಪೌಷ್ಟಿಕಾಂಶಭರಿತ ಆಹಾರವನ್ನು ಸೇವಿಸಿದಾಗ ಮಾತ್ರ ಪೂರ್ಣಪ್ರಮಾಣದಲ್ಲಿ ಮನುಷ್ಯ ಆರೋಗ್ಯವಂತನಾಗಿರಲು ಸಾಧ್ಯವಿಲ್ಲ ಅದರ ಜೊತೆಯಲ್ಲಿ ಬೆಳಗಿನ ಬೆಳ್ಳಿಚುಕ್ಕಿ ಮೂಡುವ ಮೊದಲು ಎದ್ದು ನಿಯಮಿತವಾಗಿ ಯೋಗಾಭ್ಯಾಸವನ್ನು ಮಾಡಿ ಪ್ರಭಾತದ ಭಾಸ್ಕರನ ಪ್ರಥಮ ರಶ್ಮಿಗೆ ದೇಹ ಮತ್ತು ಮನಸ್ಸನ್ನು ಒಡ್ಡಿದಾಗ ಅದರಿಂದ ಸಿಗುವ ಲಾಭ ಅನೇಕಾನೇಕ. ದಿನನಿತ್ಯದ ಯೋಗಾಭ್ಯಾಸವು ನಿರುತ್ಸಾಹದಿಂದ ತುಂಬಿರುವ ಅಂಗಾAಗಗಳಿಗೆ ಚೈತನ್ಯವನ್ನು ತುಂಬುತ್ತದೆ. ಜಂಜಾಟದ ಬದುಕಿನ ಅಶಾಂತತೆಯಿAದ ಕೂಡಿರುವ ಮನ:ಸ್ಥಿತಿ ಗೆ ಪ್ರಶಾಂತತೆಯನ್ನು ನೀಡುತ್ತದೆ. ಯೋಗಾಭ್ಯಾಸ ದೈಹಿಕ ಆರೋಗ್ಯವನ್ನು ವೃದ್ಧಿಸುವುದೂ ಅಷ್ಟೇ ಅಲ್ಲದೆ ಮನುಷ್ಯನಲ್ಲಿ ಸುಪ್ತವಾಗಿ ಇರುವ ಬೌದ್ಧಿಕ ಆಧ್ಯಾತ್ಮಿಕ ವೈಚಾರಿಕ ಪ್ರಬುದ್ಧತೆಯನ್ನು ಜಾಗೃತಗೊಳಿಸುತ್ತದೆ ಮತ್ತು ಸದೃಢವಾಗುತ್ತವೆ. ಯೋಗ ದೇಹವನ್ನು ಬಲಿಷ್ಟಗೊಳಿಸಿದರೆ ಧ್ಯಾನ ಮನಸ್ಸನ್ನು ಬಲಿಷ್ಠಗೊಳಿಸುತ್ತದೆ. ನಿರಂತರವಾಗಿ ಯೋಗಾಭ್ಯಾಸ ಮಾಡುವುದರಿಂದ ಆತ್ಮಬಲವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಮಾನಸಿಕ ದೈಹಿಕ ಮುಂತಾದ ಮನುಷ್ಯನ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ನಿಂತು ಎಲ್ಲವನ್ನು ಎದುರಿಸುವ ಕ್ಷಮತೆಯನ್ನು ಬೆಳೆಸುತ್ತದೆ. "ರೋಗದಿಂದ ಯೋಗದ ಕಡೆಗೆ" ಎಂಬ ಧ್ಯೇಯವಾಕ್ಯವನ್ನು ಗಮನದಲ್ಲಿಟ್ಟುಕೊಂಡು ನಾವೆಲ್ಲರೂ ದಿನದ ೨೪ ಗಂಟೆಗಳಲ್ಲಿ ಕನಿಷ್ಟಪಕ್ಷ ೩೦ ನಿಮಿಷಗಳ ಸಮಯವನ್ನು ಯೋಗ ಧ್ಯಾನಕ್ಕೆ ಮೀಸಲಿಟ್ಟು ಅದರಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ಕೊರೊನಾವಷ್ಟೇ ಅಲ್ಲ ಮತ್ಯಾವ ಕೆಟ್ಟ ವೈರಸ್ ಕೂಡ ನಮ್ಮ ಹತ್ತಿರ ಸುಳಿಯುವುದಿಲ್ಲ. ಪ್ರಸ್ತುತ ದಿನಗಳಲ್ಲಿ ಧನ ಸಂಪತ್ತಿದ್ದವನು ಶ್ರೀಮಂತನಲ್ಲ, ಬದಲಾಗಿ ಆರೋಗ್ಯ ಸಂಪತ್ತಿದ್ದವನೇ ನಿಜವಾದ ಶ್ರೀಮಂತ ಎಂಬ ಮಾತು ಸಮಯೋಚಿತವಾಗಿದೆ. ಯೋಗಾಭ್ಯಾಸದ ಮಹತ್ವವನ್ನರಿತ ಅನೇಕ ರಾಷ್ಟçಗಳು ಸೇರಿ ಚರ್ಚಿಸಿ ೨೦೧೫ರಲ್ಲಿ 'ಸಂಯುಕ್ತ ರಾಷ್ಟçಗಳ ಮಹಾಸಭೆ'ಯಲ್ಲಿ "ಅಂರ್ರಾಷ್ಟಿçÃಯ ಯೋಗ ದಿನ"ವನ್ನಾಗಿ ಪ್ರತಿ ವರ್ಷ ಜೂನ್ ೨೧ರಂದು ಆಚರಿಸುವಂತೆ ತೀರ್ಮಾನಿಸಿ ಘೋಷಿಸಿದವು. ವರ್ಷದ ಎಲ್ಲಾ ದಿನಗಳಿಗಿಂತಲೂ ಜೂನ್ ೨೧ರ ದಿನ ದೀರ್ಘ ಹಗಲನ್ನು ಹೊಂದಿರುತ್ತದೆ. ಹಾಗೆಯೇ ಯೋಗಾಭ್ಯಾಸವು ಕೂಡ ದೀರ್ಘ ಆರೋಗ್ಯವನ್ನು ಕೊಡುತ್ತದೆ. ಈ ಕಾರಣದಿಂದಲೇ ಜೂನ್ ೨೧ ರಂದು ಅಂರ್ರಾಷ್ಟಿçÃಯ ಯೋಗ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಪ್ರಸ್ತುತ ದಿನಗಳಲ್ಲಿ ನಮ್ಮನ್ನು ಕಾಡುತ್ತಿರುವ ಪ್ರಕೃತಿ ವಿಕೋಪಗಳೇ ಆಗಿರಬಹುದು, ಮಾನವ ನಿರ್ಮಿತ ವಿಕೋಪಗಳೇ ಆಗಿರಬಹುದು ಇವುಗಳನ್ನು ಸಮರ್ಥವಾಗಿ ಎದುರಿಸಬೇಕಾದರೆ ಆತ್ಮಬಲ, ಮನೋಬಲಗಳು ಸದೃಢವಾಗಿರುವುದು ಅವಶ್ಯಕವಾಗಿದೆ. ಇವುಗಳ ಸದೃಢತೆಗೆ ಯೋಗ - ಧ್ಯಾನ ಅತ್ಯಂತ ಅವಶ್ಯಕವಾಗಿದೆ. ದೇಶ, ರಾಜ್ಯ, ಗ್ರಾಮಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಆರೋಗ್ಯದಿಂದಿರಬೇಕಾದರೆ ಮನುಷ್ಯ ಆರೋಗ್ಯವಾಗಿರಬೇಕು. ಆದ ಕಾರಣ ರೋಗ ಮುಕ್ತ ಸಮಾಜ ನಿರ್ಮಾಣ ಆಗಬೇಕಾದರೆ ಮನುಷ್ಯ ಆರೋಗ್ಯವಂತನಾಗಿರಬೇಕು. ಆರೋಗ್ಯ ಬಂದಮೇಲೆ ಔಷಧಿಯಿಂದ ಗುಣಪಡಿಸಿಕೊಳ್ಳಲು ಮೊದಲೇ ರೋಗ ಬಾರದಿರುವ ಹಾಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸೂಕ್ತವಲ್ಲವೇ? ಆರೋಗ್ಯವಂತ ಆಹಾರ ಪದ್ಧತಿಯ ಜೊತೆಯಲ್ಲಿ ಆರೋಗ್ಯವಂತ ಯೋಗ- ಧ್ಯಾನವನ್ನು ನಿಯಮಿತವಾಗಿ ಜೀವನದಲ್ಲಿ ಅಳವಡಿಸಿಕೊಂಡರೆ ಆರೋಗ್ಯವಂತ ಸಮಾಜವನ್ನು ನಿರ್ಮಿಸಬಹುದಾಗಿದೆ.
- ಕವಿತಾ ಪುಟ್ಟೇಗೌಡ, ಶಿಕ್ಷಕಿ ಪ್ರೌಢಶಾಲೆ ಹೆಬ್ಬಾಲೆ.