ಕೂಡಿಗೆ, ಜೂ. ೧೭: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ೩೫೪ ದಿಡ್ಡಳ್ಳಿ ವಸತಿ ರಹಿತ ಫಲಾನುಭವಿಗಳಿಗೆ ಮನೆಗಳನ್ನು ನೀಡಲಾಗಿತ್ತು. ಆದರೆ ಈ ಕೇಂದ್ರದ ೧೦೦ಕ್ಕೂ ಹೆಚ್ಚು ಮನೆಗಳಲ್ಲಿ ನೈಜ ಫಲಾನುಭವಿಗಳು ವಾಸಿಸದೆ ಇರುವುದು ಮತ್ತು ಕೆಲ ಮನೆಗಳು ಖಾಲಿ ಇರುವುದರಿಂದ ಸಂಬAಧಿಸಿದ ಇಲಾಖೆಯ ವತಿಯಿಂದ ನೋಟೀಸ್ ನೀಡಲಾಗಿದೆ.

ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿ ಈಗಾಗಲೇ ಸರಕಾರದ ವಸತಿ ನಿಗಮ ಯೋಜನೆ ಅಡಿಯಲ್ಲಿ ಮನೆಗಳು ಆಯಾ ಫಲಾನುಭವಿಗಳ ಹೆಸರಿನಲ್ಲಿ ನಿರ್ಮಾಣಗೊಂಡಿವೆ. ಅದರೆ ಕೆಲ ಮನೆಗಳಲ್ಲಿ ನೈಜ ಫಲಾನುಭವಿಗಳು ವಾಸಿಸದೆ ಇರುವುದರಿಂದ ಮತ್ತು ಖಾಲಿ ಇರುವ ಮನೆಗಳ ಸಂಖ್ಯೆಯನ್ನು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಪರಿಶೀಲನೆ ನಡೆಸಿ ವಸತಿ ನಿಗಮದ ಯೋಜನೆಗೆ ಅಯ್ಕೆಯಾದ ಫಲಾನುಭವಿಗಳು ಮನೆಗಳಲ್ಲಿ ವಾಸಿಸದೆ ಇರುವುದರಿಂದ ಅಂತಹವರಿಗೆ ನೋಟೀಸ್ ನೀಡಲಾಗಿದೆ.

ಜಿಲ್ಲಾಡಳಿತದ, ಜಿಲ್ಲಾ ಗಿರಿಜನ ಸಮನ್ವಯ ಇಲಾಖೆಯ ಅದೇಶದಂತೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಮೂಲಕ ವಸತಿ ನಿಗಮ ಯೋಜನೆ ಸೌಲಭ್ಯಗಳನ್ನು ಪಡೆದಿರುವ ದಿಡ್ಡಳ್ಳಿ ಪುನರ್ವಸತಿ ಜನರಿಗೆ ಆಯಾ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ನೀಡಲು ಅಧಿಕಾರಿಗಳು ಕ್ರಮ ವಹಿಸಿದ್ದಾರೆ. ಮನೆಗಳಲ್ಲಿ ನೈಜ ಫಲಾನುಭವಿಗಳು ಇಲ್ಲದೆ ಬೇರೆಯವರು ಇರುವುದು ಮತ್ತು ಹಲವು ಮನೆಗಳು ಖಾಲಿ ಇರುವುದು ಇಲಾಖೆಗೆ ಕಂಡು ಬಂದಿರುವ ಹಿನ್ನೆಲೆ ಇಲಾಖೆಯ ವತಿಯಿಂದ ಹಕ್ಕುಪತ್ರವನ್ನು ನೀಡುವ ಮುನ್ನ ನೋಟೀಸ್ ನೀಡಲಾಗಿದೆ.

ಇದಕ್ಕೆ ಸಂಬAಧಿಸಿದAತೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬಾಲಕೃಷ್ಣ ರೈ ಪ್ರತಿಕ್ರಿಯೆ ಬಯಸಿದಾಗ, ಈಗಾಗಲೇ ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿ ಅನೇಕ ಮನೆಗಳು ಖಾಲಿ ಇವೆ ಮತ್ತು ನೈಜ ಫಲಾನುಭವಿಗಳಿಗೆ ವಸತಿ ನಿಗಮದ ಯೋಜನೆಯಡಿಯಲ್ಲಿ ವಾಸವಿರುವ ಎಲ್ಲಾ ೩೫೪ ಕುಟುಂಬದವರಿಗೆ ಹಕ್ಕುಪತ್ರವನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಡಳಿತ ಸೂಚನೆ ನೀಡಿದೆ. ಅದರಂತೆ ಸಮಾಜ ಕಲ್ಯಾಣ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸರ್ವೆ ಕಾರ್ಯ ಪ್ರಾರಂಭ ಮಾಡಿದೆ. ಅಲ್ಲದೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬ್ಯಾಡಗೊಟ್ಟ ಗ್ರಾಮದ ದಿಡ್ಡಳ್ಳಿ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೈಜ ಫಲಾನುಭವಿಗಳು ಮನೆಗಳಲ್ಲಿ ವಾಸ ಇಲ್ಲದೆ ಇರುವ ಮಾಹಿತಿಯನ್ನು ಪಡೆದಿದ್ದಾರೆ ಎಂದು ತಿಳಿಸಿದರು.

ಈ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಸದಸ್ಯ ಟಿ.ಪಿ. ಹಮೀದ್ ಮಾತನಾಡಿ, ದಿಡ್ಡಳ್ಳಿ ಪುನರ್ವಸತಿ ಕೇಂದ್ರಕ್ಕೆ ಆಯ್ಕೆಯಾದರೂ ಇಲ್ಲಿ ನಿರ್ಮಾಣಗೊಂಡ ಮನೆಗಳಲ್ಲಿ ವಾಸಿಸುತ್ತಿಲ್ಲ. ಬೇರೆಯವರು ಇದರ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇದರ ಬದಲು ಅರ್ಹ ಫಲಾನುಭವಿಗಳಿಗೆ ಇದರ ಸೌಲಭ್ಯಗಳು ದೊರಕಬೇಕು. ಅಲ್ಲದೆ ಅಂತಹವರು ಹಕ್ಕುಪತ್ರವನ್ನು ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೀರಾ ಕಡು ಬಡ ಕುಟುಂಬದವರಿಗೆ ಮನೆಗಳನ್ನು ಇಲಾಖೆಯವರು ನೀಡುವಂತೆ ಒತ್ತಾಯಿಸಲಾಗುತ್ತಿದೆ ಎಂದರು.