ಮಡಿಕೇರಿ, ಜೂ. ೧೭: ಕೊಡವ ಕೂಟಾಳಿಯಡ ಕೂಟ ಸಂಘಟನೆ ಆಯೋಜಿಸಿದ್ದ ಕೊಡಗ್'ರ ಚುಪ್ಪಿ ಕೋಗಿಲೆಯ ಗಾಯನ ಸ್ಪರ್ಧೆಯಲ್ಲಿ ನೆಚ್ಚಾರಂಡ ಸಾದ್ವಿ ಮಂದಣ್ಣ ಅವರು ಪ್ರಥಮ ಸ್ಥಾನ ಗಳಿಸಿ ಕೊಡಗ್'ರ ಚುಪ್ಪಿ ಕೋಗಿಲೆ ಎನ್ನುವ ಬಿರುದು ಪಡೆದುಕೊಂಡಿದ್ದಾರೆ ಎರಡನೇ ಸ್ಥಾನದಲ್ಲಿ ಬೊಳ್ಳಚೆಟ್ಟಿರ ಶರೀನ್ ಚೆಂಗಪ್ಪ ಮತ್ತು ಮೂರನೆ ಸ್ಥಾನವನ್ನು ತಾಪಂಡ ಹರ್ಷಿತ್ ಪೊನ್ನಪ್ಪ ಗಳಿಸಿದ್ದಾರೆ.

ಈ ಸ್ಪರ್ಧೆಯ ತೀರ್ಪುಗಾರಿಕೆಯನ್ನು ಗಾಯಕರಾದ ಕಾಂಗೀರ ಸಂತೋಷ್ ದೇವಯ್ಯ ಮತ್ತು ಬೊಟ್ಟೋಳಂಡ ಆಶಿತಾ ಬೋಪಣ್ಣ ಅವರು ನಿಭಾಯಿಸಿದರು. ಗಾಯಕಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ ಅವರು ಗಾಯನ ಸ್ಪರ್ಧೆಯ ಬಹುಮಾನ ಪ್ರಾಯೋಜಕರಾಗಿದ್ದರು.

ಎರಡು ಸುತ್ತುಗಳಲ್ಲಿ ನಡೆದ ಗಾಯನ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆಯಲ್ಲದೆ ಹೊರಜಿಲ್ಲೆ, ಹೊರರಾಜ್ಯಗಳಿಂದ ೧೫೧ ಕೊಡವ ಮಕ್ಕಳು ಭಾಗವಹಿಸಿದ್ದರು ಎಂದು ಸಂಘಟನೆಯ ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ ಅವರು ತಿಳಿಸಿದ್ದಾರೆ.