ಸುಂಟಿಕೊಪ್ಪ, ಜೂ. ೧೭: ಸಮೀಪದ ಹÀರದೂರು ಗ್ರಾಮ ಪಂಚಾಯಿತಿಯ ಅಂಬೇಡ್ಕರ್ ಕಾಲೋನಿಯ ಸಮೀಪದ ರಸ್ತೆ ಬದಿಯಲ್ಲಿ ಚರಂಡಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹರದೂರು ಗ್ರಾ. ಪಂ. ವ್ಯಾಪ್ತಿಯ ಬಿ.ಎನ್.ಕುಮಾರಪ್ಪ ಅವರ ಮನೆಯ ಸಮೀಪದಲ್ಲಿ ಕೊಳಚೆ ನೀರು ಹರಿಯಲು ಪೈಪ್ ಅಳವಡಿಸುವ ಸಲುವಾಗಿ ಚರಂಡಿ ತೆಗೆದು ಪೈಪ್ ಅಳವಡಿಸದೆ ಮಳೆಗಾಲದಲ್ಲಿ ನೀರು ನಿಂತು ಸೊಳ್ಳೆಗಳ ಕಾಟದೊಂದಿಗೆ ಕೆಸರಿನ ಕೊಂಪೆಯಾಗಿದೆ. ಚರಂಡಿ ತೆಗೆದು ಕಾಮಗಾರಿ ಅರೆಬರೆ ಆದ ಪರಿಣಾಮ ನೀರು ಶೇಖರಣೆಯಾಗಿ ನಡೆದಾಡಲು ಸಾಧ್ಯವಾಗುತ್ತಿಲ್ಲ. ಸಮಸ್ಯೆ ಪರಿಹರಿಸಿ ಎಂದು ಪಂಚಾಯಿತಿಗೆ ಮನವಿ ಸಲ್ಲಿಸಿದಾಗ ಇದಕ್ಕೆ ಉತ್ತರಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ಈಗ ಪಂಚಾಯಿತಿಯಲ್ಲಿ ಅನುದಾನದ ಕೊರತೆಯಿದೆ. ಆದ್ದರಿಂದ ಕೆಲಸ ಮಾಡಲು ಸಾದ್ಯವಾಗುತ್ತಿಲ್ಲ ಎಂಬ ಉತ್ತರ ನೀಡಿರುತ್ತಾರೆ. ಆದರೆ ಯಾವುದೇ ಕಾಮಗಾರಿ ನಡೆಸುವ ಮೊದಲು ಪೂರ್ವಭಾವಿ ಸಿದ್ದತೆ ನಡೆಸದೆ ಅನುದಾನ ಕೊರತೆಯ ನಡುವೆ ಮಳೆಗಾಲದಲ್ಲಿ ಕೆÀಲಸ ಮಾಡಿ ಅರ್ಧಕ್ಕೆ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ಯಾಗುವ ರೀತಿಯಲ್ಲಿ ಗ್ರಾಮ ಪಂಚಾಯಿತಿಯ ಕ್ರಮದ ಬಗ್ಗೆ ಸಾರ್ವಜನಿಕರ ಆಕ್ಷೇಪ ವ್ಯಕ್ತವಾಗಿದೆ. ಶಾಸಕರು, ಹಿರಿಯ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ಈ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದು ಈ ಭಾಗದ ಗ್ರಾಮಸ್ಥರು ಒತ್ತಾಯಿಸಿದ್ಧಾರೆ.