ಮಡಿಕೇರಿ: ಬಿಜೆಪಿ ಮಹಾ ಶಕ್ತಿ ಕೇಂದ್ರದ ಪ್ರಮುಖ್ ಪಳಗಂಡ ಅಪ್ಪಣ್ಣ ಶಕ್ತಿ ಕೇಂದ್ರ ೧ರ ಪ್ರಮುಖ್ ರವಿ, ಸಹಪ್ರಮುಖ್ ಬಿಳಿಯರ ವಿಜು ಇವರ ಸಹಕಾರದೊಂದಿಗೆ ಕೊರೊನಾ ಫ್ರಂಟ್‌ಲೈನ್ ವಾರಿಯರ್ಸ್ ಆದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಸೇಫ್ಟಿಕಿಟ್ ಮತ್ತು ದಿನಬಳಕೆ ವಸ್ತುಗಳನ್ನೊಳಗೊಂಡ ಕಿಟ್‌ಗಳನ್ನು ಮೂರ್ನಾಡು ಪಂಚಾಯಿತಿ ಉಪಾಧ್ಯಕ್ಷೆ ವಿಜಯಲಕ್ಷಿö್ಮ, ಸದಸ್ಯೆ ರೀತಾ, ಕುಶ ರೈ ಅವರ ಸಹಕಾರ ಮತ್ತು ಸಹಾಯದೊಂದಿಗೆ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ವಿತರಿಸಲಾಯಿತು.ಮಡಿಕೇರಿ: ಭುವನಂ ಫೌಂಡೇಶನ್ ವತಿಯಿಂದ ನಟರಾದ ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚ ತಂಡ ಗುಂಡ್ಲುಪೇಟೆ, ಸವಸುದ್ದಿ, ಮುದೋಳದ ಕೊರೊನಾ ಪೀಡಿತ ಕುಟುಂಬಗಳಿಗೆ ಆಹಾರ ಹಾಗೂ ಔಷಧಿ ಕಿಟ್‌ಗಳನ್ನು ವಿತರಿಸಲಾಯಿತು.*ಗೋಣಿಕೊಪ್ಪ: ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ಸೇವಾ ಭಾರತಿ ಕಾರ್ಯಕರ್ತರಿಂದ ಕೋವಿಡ್ ಸೆಂಟರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗೆ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು. ಈ ಸಂದರ್ಭ ಶಾಲೆಯ ಅಡುಗೆ ಸಿಬ್ಬಂದಿಗಳಿಗೂ ಆಹಾರ ಕಿಟ್‌ಗಳನ್ನು ನೀಡಲಾಯಿತು. ಶಾಸಕ ಕೆ.ಜಿ. ಬೋಪಯ್ಯ ಅವರು ತಿತಿಮತಿ ಕೋವಿಡ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಬಾಧಿತ ಕುಟುಂಬಗಳಿಗೆ ತರಕಾರಿ, ದಿನಸಿ ಪದಾರ್ಥ ಗಳನ್ನು ಹಂಚಿದರು. ಸೇವಾ ಭಾರತಿ ಕಾರ್ಯಕರ್ತರಾದ ಸಿದ್ದರಾಜು, ಶೇಖರ್, ರಂಜಿತ್, ಅಪ್ಪಿ, ಚಂದ್ರು, ರಮೇಶ್, ಅಮರ್, ಅಭಿ, ನಿಲನ್, ಸತೀಶ್, ಪ್ರಮೋದ್, ಅನೂಪ್‌ಕುಮಾರ್ ಇವರುಗಳು ಆಹಾರ ಕಿಟ್‌ಗಳನ್ನು ವಿತರಿಸಿದರು.ಡಿ.ವೈ.ಎಫ್.ಐ. ವೀರಾಜಪೇಟೆ ಘಟಕ

*ವೀರಾಜಪೇಟೆ: ಕೋವಿಡ್ ಸಮಯದಲ್ಲಿ ಸಂಕಷ್ಟದಲ್ಲಿರುವ ಸುಮಾರು ಎಂಭತ್ತು ಕುಟುಂಬದ ಸದಸ್ಯರಿಗೆ ದಿನಸಿ ಕಿಟ್ ನೀಡುವ ಕಾರ್ಯಕ್ರಮಕ್ಕೆ ಡಿ.ವೈ.ಎಫ್.ಐ. ಚಾಲನೆ ನೀಡಿತು. ಈ ಸಂದರ್ಭ ಘಟಕದ ಕಾರ್ಯದರ್ಶಿ ನೌಷಿರ್, ವೀರಾಜಪೇಟೆ ನಗರದ ಅಧ್ಯಕ್ಷ ವಿನಯ್, ಸಂಚಾಲಕ ನವಾಜ್, ಸಹ ಕಾರ್ಯದರ್ಶಿ ಪಾಯಿಜ್, ಶಕೀರ್ ಭಾಗವಹಿಸಿದ್ದರು. ವೀರಾಜಪೇಟೆ ನಗರದ ಟೈಲರ್, ಪೋಟೊಗ್ರಾಫರ್, ಬಸ್ ಕಾರ್ಮಿಕರು ಸೇರಿದಂತೆ ಅನೇಕ ಕುಟುಂಬದ ಸದಸ್ಯರಿಗೆ ಕಿಟ್ ವಿತರಿಸಲಾಯಿತು.ಸಿದ್ದಾಪುರ: ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಡುಬಡ ಕುಟುಂಬಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಅಗತ್ಯ ವಸ್ತುಗಳ ಕಿಟ್‌ಗಳನ್ನು ವಿತರಿಸಿದರು. ಈ ಸಂದರ್ಭ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯಿತ್ರಿ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಮೇಕೇರಿರ ಅರುಣ್, ರತನ್, ವಿಜು, ಗೀತಾ, ಬಿ.ಜೆ.ಪಿ. ಪಕ್ಷದ ಪದಾಧಿಕಾರಿಗಳಾದ ರದೀಶ್, ಹೊಸೊಕ್ಲು ಹರೀಶ್, ವಿನು ಹಾಗೂ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ರವಿಕುಶಾಲಪ್ಪ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ ಇನ್ನಿತರರು ಇದ್ದರು.ವೀರಾಜಪೇಟೆ: ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಿಜನ ಕಾಲೋನಿಯಲ್ಲಿ ಕಡು ಬಡ ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ಶಾಸಕ ಕೆ.ಜಿ. ಬೋಪಯ್ಯ ವಿತರಿಸಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ಪಶ್ಚಿಮಘಟ್ಟ ಅರಣ್ಯ ಸಂರಕ್ಷಣಾ ಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಟ್ರಪಂಡ ರಘು ನಾಣಯ್ಯ, ಬೇಟೋಳಿ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಅಚ್ಚಪಂಡ ಹರೀಶ್, ಮುಖಂಡರಾದ ಚುಪ್ಪ ನಾಗರಾಜ್, ಬಿ.ಜೆ. ಬೋಪಣ್ಣ, ವಿಷ್ಣು, ಬೇಟೋಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಬೋಪಣ್ಣ, ಸನ್ನು ಚಂಗಪ್ಪ, ರಂಜು, ಗೀತಾ, ಅಲೀಮ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.*ಗೋಣಿಕೊಪ್ಪ: ಕೊರೊನಾ ವಿರುದ್ಧ ಹೋರಾಟದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಸೇವೆ ದೇಶಕ್ಕೆ ಶ್ರೇಷ್ಠತೆಯನ್ನು ತಂದುಕೊಟ್ಟಿದೆ ಎಂದು ಪದ್ಮಶ್ರೀ ಪುರಸ್ಕöÈತ ಎಂ.ಪಿ. ಗಣೇಶ್ ಮುಂಚೂಣಿ ಕಾರ್ಯಕರ್ತರ ಸೇವೆಯನ್ನು ಶ್ಲಾಘಿಸಿದರು. ತಿತಿಮತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಮೂಲತಃ ಕೊಡಗಿನವರಾದ ಬೆಂಗಳೂರಿನ ಉದ್ಯಮಿ ನಂಬುಡುಮಾಡ ನರೇನ್ ಸುಬ್ಬಯ್ಯ ಅವರ ಫೈಯರ್ ಪ್ರೋ ಸಿಸ್ಟಮ್ಸ್ ಪ್ರೆöÊವೆಟ್ ಲಿಮಿಟೆಡ್ ವತಿಯಿಂದ ಮುಂಚೂಣಿ ಕಾರ್ಯಕರ್ತರಿಗೆ ಔಷಧಿ ಹಾಗೂ ಮಳೆಗಾಲದ ಪರಿಕರಗಳ ವಿತರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಪಾಲ್ಗೊಂಡಿದ್ದರು. ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ಅಂಗನವಾಡಿ ಆಶಾ ಕಾರ್ಯಕರ್ತರು, ಕಿರಿಯ ಆರೋಗ್ಯ ಸಹಾಯಕಿಯರು ಮತ್ತು ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಶುಶ್ರೂಷಕಿಯರಿಗೆ ಮಳೆಗಾಲದಲ್ಲಿ ಸಮಸ್ಯೆ ಎದುರಾಗಬಾರದು ಎಂಬ ದೂರಾಲೋಚನೆಯಿಂದ ನಂಬುಡುಮಾಡ ನರೇನ್ ಅವರು ಕೊಡುಗೆಯಾಗಿ ನೀಡಿದ ರೈನ್ ಕೋಟ್, ಕೊಡೆ, ಎನ್-೯೫ ಮಾಸ್ಕ್ ಮತ್ತು ವಿಟಮಿನ್ ಸಿ ಮತ್ತು ಪ್ಯಾರಸಿಟಮಲ್ ಮಾತ್ರೆಗಳನ್ನು ಎಂ.ಪಿ. ಗಣೇಶ್ ವಿತರಿಸಿದರು. ಬೆಳೆಗಾರ ಚೆಪುö್ಪಡೀರ ಕಾರ್ಯಪ್ಪ ಮಾತನಾಡಿದರು. ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ಮುಂಚೂಣಿ ಕಾರ್ಯಕರ್ತರು, ಅಜ್ಜಿಕುಟ್ಟೀರ ಕರುಣ್, ಆರೋಗ್ಯ ಕೇಂದ್ರದ ವೈದ್ಯಾಧೀಕಾರಿ ಹೊಸಮನಿ, ಆಡಳಿತಾಧಿಕಾರಿ ಸಚಿನ್ ಸೇರಿದಂತೆ ಸಿಬ್ಬಂದಿಗಳು, ತಿತಿಮತಿ ಸೇವಾ ಭಾರತಿ ಸ್ವಯಂಸೇವಕರು ಹಾಜರಿದ್ದರು. *ವೀರಾಜಪೇಟೆ: ವೀರಾಜಪೇಟೆಯ ಆರ್ಥಿಕ ಸ್ಪಂದನ ಸಂಘ ಹಾಗೂ ದಾನಿಗಳ ನೆರವಿನಿಂದ ಸುಮಾರು ೧೪೦ ಆಹಾರ ಕಿಟ್‌ಗಳನ್ನು ವಿತರಣೆ ಮಾಡಲಾಯಿತು. ನಗರದ ಸುಂಕದ ಕಟ್ಟೆಯ ಪಂಪ್ ಕೆರೆ ಮೈದಾನದಲ್ಲಿ ೧೪೦ ಕುಟುಂಬದವರಿಗೆ ಕಿಟ್ ನೀಡಲಾಯಿತು.

ಆರ್ಥಿಕ ಸ್ಪಂದನ ಸಂಘದಿAದ ೬೦ ಕಿಟ್, ಸ್ಥಳೀಯ ದಾನಿಗಳಿಂದ ೮೦ ಕಿಟ್‌ಗಳನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶ್ಮಿತಾ ಮಹೇಶ್, ಬಿ.ಜಿ.ಪಿ. ಪಕ್ಷದ ಮುಖಂಡ ಸುಜಾ ಕುಶಾಲಪ್ಪ ಹಾಗೂ ಅಂರ‍್ರಾಷ್ಟಿçÃಯ ರಗ್ಬಿ ಆಟಗಾರ ತಿಮ್ಮಯ್ಯ ಆಹಾರ ಕಿಟ್ ವಿತರಣೆ ಮಾಡಿದರು. ಈ ಸಂದರ್ಭ ಪ.ಪಂ. ನಾಮ ನಿರ್ದೇಶನ ಸದಸ್ಯ ಸಚಿನ್, ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಅನಿಲ್ ಕುಮಾರ್, ಸಂಘದ ಕಾರ್ಯದರ್ಶಿ ಸುಜಾತ, ಅರುಣ್, ಕ.ರ.ವೇ. ಆಟೋ ಚಾಲಕರ ಸಂಘದ ಅಧ್ಯಕ್ಷ ಸತೀಶ್ ಮತ್ತು ಮಹೇಶ್ ಹಾಜರಿದ್ದರು.ಸೋಮವಾರಪೇಟೆ: ಕೊರೊನಾ ವೈರಸ್ ಸೋಂಕಿಗೆ ಒಳಗಾಗಿ ಸೀಲ್‌ಡೌನ್ ಆಗಿರುವ ಕಾಗಡಿಕಟ್ಟೆ ಅಯ್ಯಪ್ಪ ಕಾಲೋನಿಯ ಕುಟುಂಬಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಯೋಜನೆಯ ಮೂಲಕ ನೀಡಿದ ಕಿಟ್‌ಗಳನ್ನು ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ ತಿಮ್ಮಯ್ಯ ವಿತರಿಸಿದರು. ಈ ಸಂದರ್ಭ ಯೋಜನಾಧಿಕಾರಿ ಜಯಂತಿ, ಮೇಲ್ವಿಚಾರಕ ಸಂತೋಷ್, ಸೇವಾ ಪ್ರತಿನಿಧಿ ನಿಖಿತಾ, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.*ಗೋಣಿಕೊಪ್ಪ: ತಿತಿಮತಿ ಕೃಷಿ ಪತ್ತಿನ ಸಹಕಾರ ಸಭಾಂಗಣದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ಆಹಾರ ಸಾಮಗ್ರಿಗಳನ್ನು ಮುಂಚೂಣಿ ಕಾರ್ಯಕರ್ತರಿಗೆ ವಿತರಿಸಲಾಯಿತು.

ಮಹಾಶಕ್ತಿ ಕೇಂದ್ರದ ಪ್ರಮುಖ್ ಸಣ್ಣುವಂಡ ಸುರೇಶ್, ಗ್ರಾ.ಪಂ. ಅಧ್ಯಕ್ಷೆ ಆಶಾ, ಸದಸ್ಯರುಗಳಾದ ವಿಜಯ, ಶ್ಯಾಮಲಾ ತಿತಿಮತಿ ಶಕ್ತಿ ಕೇಂದ್ರದ ಪ್ರಮುಖ್ ಎನ್.ಎನ್. ಅನೂಪ್‌ಕುಮಾರ್, ಮಾಯಮುಡಿ ಶಕ್ತಿ ಕೇಂದ್ರದ ಪ್ರಮುಖ್ ಚೆಪ್ಪುಡಿರ ಪ್ರದೀಪ್, ಕಾಫಿ ಬೆಳೆಗಾರ ಚೆಪ್ಪುಡಿರ ಕಾರ್ಯಪ್ಪ ಹಾಜರಿದ್ದರು.ವೀರಾಜಪೇಟೆ: ನೆಹರು ನಗರದಲ್ಲಿ ನೆಹರು ನಗರ ಅಭಿವೃದ್ಧಿ ಸಂಘದಿAದ ಬಡ ನಿರ್ಗತಿಕ ಕುಟುಂಬಗಳಿಗೆ ಕಿಟ್ ವಿತರಿಸಲಾಯಿತು. ಈ ಸಂದರ್ಭ ಅಭಿವೃದ್ಧಿ ಸಂಘದ ಅಧ್ಯಕ್ಷ ಆಗಸ್ಟೀನ್ ಕ್ಸೇವಿಯರ್, ಸಂಘದ ಉಪಾಧ್ಯಕ್ಷರುಗಳಾದ ಜಮಾಲ್ ಮತ್ತು ಜಾರ್ಜ್, ಕಾರ್ಯದರ್ಶಿ ಶ್ರೀಜಿತ್ ಕುಟ್ಟನ್, ಸಂಘಟನಾ ಕಾರ್ಯದರ್ಶಿ ಸಂತೋಷ್, ಕೋಶಾಧಿಕಾರಿ ಉಬೈದು, ಗೌರವ ಅಧ್ಯಕ್ಷರುಗಳಾದ ಚೆನ್ನಪ್ಪ ಮತ್ತು ಹ್ಯಾರೀಸ್ ಹಾಗೂ ಸದಸ್ಯರುಗಳು ಹಾಜರಿದ್ದರು.