*ಗೋಣಿಕೊಪ್ಪ, ಜೂ. ೧೬: ತಿತಿಮತಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ವ್ಯಾಪಕವಾಗಿ ಹರಡಿಕೊಂಡಿದ್ದು, ಕೂಲಿ ಕಾರ್ಮಿಕರು ಹಾಗೂ ಬುಡಕಟ್ಟು ಜನರ ಸುಲಿಗೆ ಯತ್ನ ನಡೆಯುತ್ತಿದೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.

ತಿತಿಮತಿಯಲ್ಲಿ ಅತಿ ಹೆಚ್ಚು ಕೂಲಿ ಕಾರ್ಮಿಕರು ಮತ್ತು ಬುಡಕಟ್ಟು ಸಮುದಾಯದವರು ನೆಲೆಸಿದ್ದಾರೆ. ಇವರನ್ನೇ ಬಂಡವಾಳವಾಗಿಸಿಕೊAಡ ಮದ್ಯವರ್ತಿಗಳು ದುಪ್ಪಟ್ಟು ಬೆಲೆಗೆ ಮದ್ಯ ಮಾರಾಟ ಮಾಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಅಬಕಾರಿ ಇಲಾಖೆಯ ಅಧಿಕಾರಿಗಳೇ ಇದಕ್ಕೆ ಬೆಂಬಲವಾಗಿರುವುದರಿAದ ಮದ್ಯ ಮಾರಾಟ ನಡೆಯುತ್ತಿದೆ. ವಾರದ ಮೂರು ದಿನದಲ್ಲಿ ಮದ್ಯ ವ್ಯಾಪಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಆದರೂ ಮದ್ಯದಂಗಡಿ ಮುಚ್ಚಿದ ನಂತರ ಇತರ ಸಮಯದಲ್ಲಿ ಅಕ್ರಮ ಮದ್ಯ ವ್ಯಾಪಾರ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ತಿತಿಮತಿ ವ್ಯಾಪ್ತಿಯ ಕರಡಿಕೊಪ್ಪ, ನಾಟ ಸಂಗ್ರಹದ ಸಮೀಪ, ಕೊಪ್ಪ, ಮರೂರು, ನೊಖ್ಯ, ಹೆಬ್ಬಾಲೆ ಪಟ್ಟಣ ಸೇರಿದಂತೆ ಹಲವು ಸ್ಥಳಗಳಲ್ಲಿ ದುಪ್ಪಟ್ಟು ಬೆಲೆಗೆ ಕಡಿಮೆ ಬೆಲೆಯ ಮದ್ಯ ಮಾರಾಟ ನಡೆಯುತ್ತಿದೆ. ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಈ ಅಕ್ರಮ ವ್ಯಾಪಾರದಿಂದ ಕಮಿಷನ್ ರೂಪದಲ್ಲಿ ಹಣ ಸಂದಾಯವಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದು, ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕೆAದು ಒತ್ತಾಯಿಸಿದ್ದಾರೆ.

-ಎನ್.ಎನ್. ದಿನೇಶ್