ಮಡಿಕೇರಿ, ಜೂ. ೧೬: ಕೊಡಗು ಜಿಲ್ಲೆಯಾದ್ಯಂತ ಮಳೆ-ಗಾಳಿಯ ತೀವ್ರತೆ ಮುಂದುವರಿಯುತ್ತಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಬಹುತೇಕ ಇಡೀ ಜಿಲ್ಲೆಯಲ್ಲಿ ಈ ಪರಿಸ್ಥಿತಿ ಕಂಡುಬರುತ್ತಿದೆ. ಪ್ರಸ್ತುತದ ಮಳೆಯಿಂದಾಗಿ ನದಿ-ತೋಡು, ತೊರೆಗಳಲ್ಲಿ ನೀರಿನ ಹರಿವು ನಿಧಾನಗತಿಯಲ್ಲಿ ಹೆಚ್ಚಳವಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಳೆಯ ಬಿರುಸು ಒಂದಷ್ಟು ಹೆಚ್ಚಿರುವುದಾಗಿ ಮಡಿಕೇರಿ, ಜೂ. ೧೬: ಕೊಡಗು ಜಿಲ್ಲೆಯಾದ್ಯಂತ ಮಳೆ-ಗಾಳಿಯ ತೀವ್ರತೆ ಮುಂದುವರಿಯುತ್ತಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಬಹುತೇಕ ಇಡೀ ಜಿಲ್ಲೆಯಲ್ಲಿ ಈ ಪರಿಸ್ಥಿತಿ ಕಂಡುಬರುತ್ತಿದೆ. ಪ್ರಸ್ತುತದ ಮಳೆಯಿಂದಾಗಿ ನದಿ-ತೋಡು, ತೊರೆಗಳಲ್ಲಿ ನೀರಿನ ಹರಿವು ನಿಧಾನಗತಿಯಲ್ಲಿ ಹೆಚ್ಚಳವಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಳೆಯ ಬಿರುಸು ಒಂದಷ್ಟು ಹೆಚ್ಚಿರುವುದಾಗಿ ಮೂಲಕ ಸರಿಪಡಿಸುವ ಕೆಲಸ ಬಿರುಸಿನಿಂದ ನಡೆಯುತ್ತಿರುವುದಾಗಿ ಇಲಾಖೆಯ ಮೂಲಗಳು ತಿಳಿಸಿವೆ.

ಚೇಲಾವರ, ಇರ್ಪು, ಮಲ್ಲಳ್ಳಿ, ಅಬ್ಬಿಫಾಲ್ಸ್ ಸೇರಿದಂತೆ ಕರಿಕೆ ವಿಭಾಗ ದಲ್ಲಿ ಕಂಡುಬರುವ ಜಲಪಾತಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ.

ಜಿಲ್ಲಾಡಳಿತದ ಮಾಹಿತಿಯಂತೆ ಸೋಮವಾರಪೇಟೆ ತಾಲೂಕಿನಲ್ಲಿ ಕೆಲವು ಮನೆ-ತಡೆಗೋಡೆಗಳಿಗೆ ಹಾನಿಯುಂಟಾಗಿದೆ. ಮಡಿಕೇರಿ ಹಾಗೂ ವೀರಾಜಪೇಟೆ ವಿಭಾಗದಲ್ಲಿ ಹಾನಿಯ ಕುರಿತು ವರದಿಯಾಗಿಲ್ಲ. ಆದರೆ ಶ್ರೀಮಂಗಲ ಸೇರಿದಂತೆ ಇಲ್ಲಿನ ವಿದ್ಯುತ್ ಕೇಂದ್ರದಿAದ ಸಂಪರ್ಕ ಹೊಂದಿರುವ ವಿವಿಧ ಗ್ರಾಮಗಳಲ್ಲಿ ಮಳೆಯೊಂದಿಗೆ ವಿದ್ಯುತ್ ಸಮಸ್ಯೆ ಹೆಚ್ಚಿದ್ದು, ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಜಿಲ್ಲಾಧಿಕಾರಿ ಪರಿಶೀಲನೆ

ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ವಿವಿಧ ಅಧಿಕಾರಿಗಳ ತಂಡದೊAದಿಗೆ ಇಂದು ಮಡಿಕೇರಿ ತಾಲೂಕಿನ ಗಾಳಿಬೀಡು, ಕಾಲೂರು, ನಿಡವಟ್ಟು, ಮೇಘತ್ತಾಳು, ಆವಂಡಿ, ಮಕ್ಕಂದೂರು, ಹೆಮ್ಮೆತ್ತಾಳು, ಉದಯಗಿರಿಯಂತಹ ಗ್ರಾಮೀಣ ಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

(ಮೊದಲ ಪುಟದಿಂದ) ಉಪವಿಭಾಗಾಧಿಕಾರಿ ಈಶ್ವರ್ ಕುಮಾರ್, ತಹಶೀಲ್ದಾರ್ ಮಹೇಶ್ ಮತ್ತಿತರ ಅಧಿಕಾರಿಗಳು ಜಿಲ್ಲಾಧಿಕಾರಿಗಳೊಂದಿಗೆ ಹಾಜರಿದ್ದರು.

ಜಿಲ್ಲೆಯ ಮಳೆ ವಿವರ

ಭಾಗಮಂಡಲಕ್ಕೆ ೪, ನಾಪೋಕ್ಲು, ಶ್ರೀಮಂಗಲ, ಶಾಂತಳ್ಳಿಗೆ ತಲಾ ೩ ಇಂಚು ಮಳೆ

ಕೊಡಗು ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸರಾಸರಿ ೨.೧೭ ಇಂಚು ಮಳೆ ಸುರಿದಿದ್ದು, ಭಾಗಮಂಡಲದಲ್ಲಿ ೪.೯೨, ಶ್ರೀಮಂಗಲಕ್ಕೆ ೩.೬೬ ಹಾಗೂ ನಾಪೋಕ್ಲುವಿಗೆ ೩, ಶಾಂತಳ್ಳಿಗೆ ೩ ಇಂಚುಗಳಷ್ಟು ಮಳೆಯಾಗಿದೆ.

ಮಡಿಕೇರಿ ಕಸಬಾ ೨.೫೪ ಇಂಚು, ಸಂಪಾಜೆಗೆ ೧.೯೪ ಇಂಚು, ತಾಲೂಕು ಸರಾಸರಿ ೩.೧೦ ಇಂಚಿನಷ್ಟು ಮಳೆಯಾಗಿದೆ. ವೀರಾಜಪೇಟೆ ತಾಲೂಕಿನಲ್ಲಿ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೨.೧೪ ಇಂಚು ಮಳೆಯಾಗಿದ್ದು, ವೀರಾಜಪೇಟೆ ಕಸಬಾ ೨.೬೭, ಹುದಿಕೇರಿ ಕಸಬಾ ೨.೮೯ ಇಂಚು, ಪೊನ್ನಂಪೇಟೆ ೧.೯೩, ಅಮ್ಮತ್ತಿ ೧.೧೬, ಬಾಳೆಲೆ ೦.೫೫ ಇಂಚು ಮಳೆ ಸುರಿದಿದೆ.

ಇನ್ನು ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೧.೨೭ ಇಂಚು ಮಳೆ ಸುರಿದಿದೆ. ಸೋಮವಾರಪೇಟೆ ಕಸಬಾದಲ್ಲಿ ೧, ಶನಿವಾರಸಂತೆಯಲ್ಲಿ ೦.೭೪, ಕೊಡ್ಲಿಪೇಟೆಯಲ್ಲಿ ೧.೩೮, ಕುಶಾಲನಗರದಲ್ಲಿ ೦.೩೩, ಸುಂಟಿಕೊಪ್ಪದಲ್ಲಿ ೧.೧೮ ಇಂಚು ಮಳೆಯಾಗಿದೆ.ಮಡಿಕೇರಿಯ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ಈ ಹಿಂದೆ ಅಲ್ಲಿನ ಬೃಹತ್ ಬರೆ ಕುಸಿತಗೊಂಡಿರುವ ಸ್ಥಳದಿಂದ ಮಣ್ಣು ಮಿಶ್ರಿತ ನೀರು ಮುಖ್ಯ ರಸ್ತೆಗೆ ಹರಿದು ಬರುತ್ತಿದ್ದು, ಈ ಪ್ರದೇಶ ಕೆಸರಿನಿಂದ ಕೂಡಿದಂತಾಗಿದೆ.

ಎರಡು ಕಡೆ ಬರುವ ರಸ್ತೆಯುದ್ದಕ್ಕೂ ಕೆಸರು ಮಿಶ್ರಿತ ನೀರು ಹರಿಯುತ್ತಿದ್ದು, ಲಾಕ್‌ಡೌನ್ ಸಡಿಲಿಕೆ ದಿನವಾಗಿದ್ದ ಇಂದು ಪಾದಚಾರಿಗಳು, ಅಂಗಡಿ ಮಾಲೀಕರು ಸಮಸ್ಯೆ ಎದುರಿಸಬೇಕಾಯಿತು ಎಂದು ಜಿಲ್ಲಾ ಚೇಂಬರ್‌ನ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್ ಮಾಹಿತಿಯಿತ್ತು, ಇದನ್ನು ತ್ವರಿತವಾಗಿ ಸರಿಪಡಿಸುವಂತೆ ಆಗ್ರಹಿಸಿದ್ದಾರೆ.ವೀರಾಜಪೇಟೆ: ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋರಾ ಗ್ರಾಮದಲ್ಲಿ ಕಳೆದೆರಡು ದಿನಗಳಲ್ಲಿ ಸುರಿದ ಭಾರೀ ಮಳೆಗೆ ಪಾರ್ವತಿ ಎಂಬವರ ಮನೆ ಸಂಪೂರ್ಣವಾಗಿ ಧರೆಗುರುಳಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಹೆAಚು ಮನೆಯಾಗಿದ್ದು ಮಣ್ಣಿನ ಇಟ್ಟಿಗೆಯಿಂದ ನಿರ್ಮಾಣ ಗೊಂಡಿತ್ತು. ಪಾರ್ವತಿ ಅವರು ಬಾಣಂತಿ ಮಗಳ ಹಾರೈಕೆಗೆಂದು ಕೇರಳಕ್ಕೆ ತೆರಳಿದ್ದು ಮನೆ ಬೀಳುವ ಸಂದÀರ್ಭ ಮನೆಯಲ್ಲಿ ಯಾರು ಇರಲಿಲ್ಲ ಎಂದು ತಿಳಿದು ಬಂದಿದೆ. ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಮೋದ್, ಸದಸ್ಯ ರಾಮಯ್ಯ, ಗ್ರಾಮ ಲೆಕ್ಕಿಗ ಸುಧೀರ್ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿ ಹಳೆ ಮನೆಯಾದ ಕಾರಣ ಒಂದು ಲಕ್ಷ ನಷ್ಟ ಎಂದು ಅಂದಾಜಿಸಿದ್ದಾರೆ. ಕಳೆದೆರÀಡು ದಿನಗಳಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೮ ಇಂಚು ಮಳೆ ಸುರಿದಿದೆ.ಕಳೆದ ಮೂವರು ದಿನಗಳಿಂದ ಆರ್ಭಟಿಸುತ್ತಿದ್ದ ವರುಣ ಇಂದು ಕೊಂಚ ಬಿಡುವು ನೀಡಿದ್ದು, ಪಟ್ಟಣ ವ್ಯಾಪ್ತಿಯಲ್ಲಿ ವರ್ಷಾಧಾರೆಯ ಆರ್ಭಟ ತಗ್ಗಿದೆ. ಆದರೆ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದ ಗ್ರಾಮಗಳಲ್ಲಿ ವರ್ಷಾಧಾರೆ ಮುಂದುವರೆದಿದೆ.

ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮ ವ್ಯಾಪ್ತಿಯಲ್ಲಿ ಇಂದು ಬೆಳಗ್ಗಿನಿಂದಲೂ ಆಗಾಗ್ಗೆ ಬಿಡುವು ನೀಡಿ ಮಳೆ ಸುರಿಯಿತು. ಕೆಲವೊಮ್ಮೆ ಬಿಸಿಲಿನ ವಾತಾವರಣ ಕಂಡುಬAತು. ಲಾಕ್‌ಡೌನ್‌ನಲ್ಲಿ ಸಡಿಲಿಕೆ ಇದ್ದುದರಿಂದ ಪಟ್ಟಣದಲ್ಲಿ ಮಧ್ಯಾಹ್ನದವರೆಗೆ ವ್ಯಾಪಾರ ವಹಿವಾಟು ನಡೆಯಿತು.

ಆದರೆ ಪಶ್ಚಿಮಘಟ್ಟ ಪ್ರದೇಶಗಳನ್ನು ಒಳಗೊಂಡಿರುವ ಪುಷ್ಪಗಿರಿ ಬೆಟ್ಟಶ್ರೇಣಿಯ ತಟಭಾಗದ ಗ್ರಾಮಗಳಲ್ಲಿ ದಿನದ ೨೪ ಗಂಟೆಯೂ ಮಳೆ ಸುರಿಯಿತು. ವರುಣನೊಂದಿಗೆ ಗಾಳಿಯ ಆರ್ಭಟವೂ ಜೋರಾಗಿದ್ದು, ಸಣ್ಣಪುಟ್ಟ ನದಿತೊರೆಗಳಲ್ಲಿ ನೀರಿನ ಹರಿವು ಹೆಚ್ಚಾಯಿತು.

ಬೆಟ್ಟಶ್ರೇಣಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಕುಮಾರಧಾರ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಇದರೊಂದಿಗೆ ಕುಡಿಗಾಣ ಗ್ರಾಮದ ಹೊಳೆಯೂ ತುಂಬಿ ಹರಿಯುತ್ತಿದ್ದು, ಭಾರೀ ಮಳೆ ಮುಂದುವರೆದರೆ ಸೇತುವೆ ಮುಳುಗುವ ಆತಂಕವೂ ಎದುರಾಗಿದೆ.

ಶಾಂತಳ್ಳಿ, ಕುಂದಳ್ಳಿ, ನಗರಳ್ಳಿ, ಕೂತಿ, ಹೆಮ್ಮನಗದ್ದೆ, ಬೀದಳ್ಳಿ, ಬೆಂಕಳ್ಳಿ, ನಾಡ್ನಳ್ಳಿ, ತಡ್ಡಿಕೊಪ್ಪ, ಮಲ್ಲಳ್ಳಿ, ಕೊತ್ನಳ್ಳಿ, ಕುಡಿಗಾಣ ವ್ಯಾಪ್ತಿಯಲ್ಲಿ ಬಿರುಸಿನ ಮಳೆಯಾಗುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಸೂರ್ಲಬ್ಬಿ, ಗರ್ವಾಲೆ, ಕೋಟೆಬೆಟ್ಟ, ಹರಗ, ಕಿಕ್ಕರಳ್ಳಿ, ಬೆಟ್ಟದಕೊಪ್ಪ ವ್ಯಾಪ್ತಿಯಲ್ಲೂ ಮಳೆಯಾಗುತ್ತಿದೆ. ಕೋಟೆಬೆಟ್ಟ ಪ್ರದೇಶದಲ್ಲಿ ಮಳೆಯೊಂದಿಗೆ ಗಾಳಿಯ ಆರ್ಭಟವೂ ಹೆಚ್ಚಾಗಿದ್ದು, ಮುಟ್ಲು, ಚಾಮೇರಮನೆ ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಮನೆಗಳಿಗೆ ಹಾನಿ: ಭಾರೀ ಮಳೆಯಿಂದ ಕೊಡ್ಲಿಪೇಟೆ ಚಿಕ್ಕಭಂಡಾರ ಗ್ರಾಮದ ವಿಜಯಲಕ್ಷಿö್ಮÃ ಅವರ ಮನೆಯ ಮೇಲೆ ಮರಬಿದ್ದು, ಶೇ.೪೦ರಷ್ಟು ಹಾನಿಯಾಗಿದೆ. ಯಡೂರು ಗ್ರಾಮದ ನೇತ್ರಾವತಿ ಅವರ ವಾಸದ ಮನೆ ಮೇಲೆ ಸಿಲ್ವರ್ ಮರ ಬಿದ್ದು ಶೇ.೨೦ ರಷ್ಟು ಹಾನಿಯಾಗಿದೆ. ತಣ್ಣೀರುಹಳ್ಳ ಗ್ರಾಮದ ರಾಜೇಶ್ ಅವರ ಮನೆಯ ಗೋಡೆ ಅತೀ ಶೀತದಿಂದ ಕುಸಿದು ಹಾನಿ ಯಾಗಿದೆ. ಮಸಗೋಡು ಗ್ರಾಮದ ಲೀಲಾ ಅವರ ವಾಸದ ಮನೆಯ ಮೇಲೆ ಮರ ಬಿದ್ದು, ಶೇ. ೧೮ ರಷ್ಟು ಹಾನಿಯಾಗಿದ್ದು, ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ಕಳ್ಳಿ ಗ್ರಾಮದ ಮ್ಯಾಥ್ಯೂ ವರ್ಗೀಸ್ ಅವರ ಮನೆಯ ಸಮೀಪ ಬರೆ ಕುಸಿದಿದ್ದು, ವಾಸದ ಮನೆಗೆ ಅಪಾಯ ತಂದೊಡ್ಡಿದೆ.ವೀರಾಜಪೇಟೆ ವಿಭಾಗದಲ್ಲಿ ಕಳೆದ ೫ ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಈ ವಿಭಾಗದ ಗದ್ದೆಗಳು ನೆಲ ಮಟ್ಟದಲ್ಲಿ ಜಲಾವೃತ್ತವಾಗುತ್ತಿರುವುದರಿಂದ ಕೃಷಿ ಚಟುವಟಿಕೆ ಆರಂಭಿಸಲು ಅಮ್ಮತ್ತಿ ವಿಭಾಗದ ರೈತರು ಸಿದ್ಧತೆ ನಡೆಸಿದ್ದಾರೆ.

ವೀರಾಜಪೇಟೆ ವಿಭಾಗದ ಐಮಂಗಲ, ಬಿಳುಗುಂದ, ಕೊಮ್ಮೆತೋಡು, ಮಗ್ಗುಲ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಈ ಭಾಗದಲ್ಲಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ. ಐಮಂಗಲ, ಕೊಮ್ಮೆತೋಡು, ಬಿಳುಗುಂದ ಭಾಗದಲ್ಲಿ ಭಾರೀ ಮಳೆಯನ್ನು ಗಮನದಲ್ಲಿಟ್ಟುಕೊಂಡು ಕೃಷಿಗಾಗಿ ಮೊದಲ ಹಂತದ ಉಳುಮೆ ಮಾಡಲಾಗಿದೆ. ಮಳೆ ಇದೇ ರೀತಿ ಮುಂದುವರೆದರೆ ಕೃಷಿ ಚಟುವಟಿಕೆ ಗಳನ್ನು ಮುಂದುವರೆಸುವುದಾಗಿ ರೈತರು ತಿಳಿಸಿದ್ದಾರೆ.

ವೀರಾಜಪೇಟೆ ವಿಭಾಗಕ್ಕೆ ನಿನ್ನೆ ದಿನ ರಾತ್ರಿ ಬಿದ್ದ ಮಳೆಯ ಪರಿಣಾಮವಾಗಿ ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ಗೌರಿಕೆರೆಯಿಂದ ಪೊಲೀಸ್ ಕ್ವಾಟರ್ಸ್ಗೆ ತೆರಳುವ ರಸ್ತೆಯಲ್ಲಿ ರಸ್ತೆ ಬದಿಯ ತಡೆಗೋಡೆಯೊಂದು ಕುಸಿದಿದೆ. ಇದರಿಂದ ಪಟ್ಟಣ ಪಂಚಾಯಿತಿಗೆ ಸುಮಾರು ರೂ. ೨ ಲಕ್ಷ ನಷ್ಟ ಸಂಭವಿಸಿದೆ. ಇದೇ ಮಳೆಗೆ ಇಲ್ಲಿನ ಚಿಕ್ಕಪೇಟೆ ಜಂಕ್ಷನ್‌ನಲ್ಲಿರುವ ಕುಡಿಯುವ ನೀರಿನ ಬಾವಿ ಭಾಗಶ: ಕುಸಿದಿದ್ದು ರೂ. ೫೦,೦೦೦ ನಷ್ಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಶ್ರೀಮಂಗಲ: ದಕ್ಷಿಣ ಕೊಡಗಿನ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ವ್ಯಾಪ್ತಿಯ ಲಕ್ಷö್ಮಣ ತೀರ್ಥ, ಕಕ್ಕಟ್ಟ್ ಪೊಳೆ, ಕೊಂಗಣ ಪೊಳೆ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ಶ್ರೀಮಂಗಲ, ಟಿ. ಶೆಟ್ಟಿಗೇರಿ, ಬಿರುನಾಣಿ, ಹುದಿಕೇರಿ, ಕುಟ್ಟ, ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿರಂತವಾಗಿ ಕಳೆದ ೪೮ ಗಂಟೆಗಳಲ್ಲಿ ಭಾರಿ ಪ್ರಮಾಣದ ಮಳೆಯಾಗಿದೆ.

ಈ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ೩ ದಿನಗಳಿಂದ ವಿದ್ಯುತ್ ಕಡಿತ ಉಂಟಾಗಿದ್ದು, ಮಳೆ-ಗಾಳಿ ಹಿನ್ನಲೆ ವಿದ್ಯುತ್ ಮಾರ್ಗದಲ್ಲಿ ವಿದ್ಯುತ್ ಕಂಬ ಮೀರಿದು ಬಿದ್ದಿದ್ದು ಶ್ರೀಮಂಗಲ-ಬಿರುನಾಣಿ ೧೧ ಕೆ.ವಿ. ವಿದ್ಯುತ್ ಮಾರ್ಗದಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ.

ತುರ್ತು ದುರಸ್ತಿಗೆ ಲೈನ್‌ಮ್ಯಾನ್‌ಗಳ ಕೊರತೆ ಉಂಟಾಗಿದೆ. ಗಾಳಿ ಮಳೆಗೆ ಮರಗಳು ಮುರಿದು ಬಿದ್ದು, ತೋಟಗಾರಿಕಾ ಬೆಳೆಗಳಿಗೆ ಹಾನಿ ಉಂಟಾಗಿರುವ ವರದಿಯಾಗಿದೆ.ಶ್ರೀಮಂಗಲ: ದಕ್ಷಿಣ ಕೊಡಗಿನ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ವ್ಯಾಪ್ತಿಯ ಲಕ್ಷö್ಮಣ ತೀರ್ಥ, ಕಕ್ಕಟ್ಟ್ ಪೊಳೆ, ಕೊಂಗಣ ಪೊಳೆ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ಶ್ರೀಮಂಗಲ, ಟಿ. ಶೆಟ್ಟಿಗೇರಿ, ಬಿರುನಾಣಿ, ಹುದಿಕೇರಿ, ಕುಟ್ಟ, ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿರಂತವಾಗಿ ಕಳೆದ ೪೮ ಗಂಟೆಗಳಲ್ಲಿ ಭಾರಿ ಪ್ರಮಾಣದ ಮಳೆಯಾಗಿದೆ.

ಈ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ೩ ದಿನಗಳಿಂದ ವಿದ್ಯುತ್ ಕಡಿತ ಉಂಟಾಗಿದ್ದು, ಮಳೆ-ಗಾಳಿ ಹಿನ್ನಲೆ ವಿದ್ಯುತ್ ಮಾರ್ಗದಲ್ಲಿ ವಿದ್ಯುತ್ ಕಂಬ ಮೀರಿದು ಬಿದ್ದಿದ್ದು ಶ್ರೀಮಂಗಲ-ಬಿರುನಾಣಿ ೧೧ ಕೆ.ವಿ. ವಿದ್ಯುತ್ ಮಾರ್ಗದಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ.

ತುರ್ತು ದುರಸ್ತಿಗೆ ಲೈನ್‌ಮ್ಯಾನ್‌ಗಳ ಕೊರತೆ ಉಂಟಾಗಿದೆ. ಗಾಳಿ ಮಳೆಗೆ ಮರಗಳು ಮುರಿದು ಬಿದ್ದು, ತೋಟಗಾರಿಕಾ ಬೆಳೆಗಳಿಗೆ ಹಾನಿ ಉಂಟಾಗಿರುವ ವರದಿಯಾಗಿದೆ.ಎರಡನೇ ಮೊಣ್ಣಂಗೇರಿ ಗ್ರಾಮಕ್ಕೆ ಭೇಟಿ ನೀಡಿ ಅತಿವೃಷ್ಟಿಯಿಂದ ಬಾಧಿತವಾಗುವ ಪ್ರದೇಶಗಳನ್ನು ವೀಕ್ಷಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ, ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್, ಮಡಿಕೇರಿ ತಹಶೀಲ್ದಾರ್ ಮಹೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಚಿತ್ರ, ವರದಿ: ವಿಜಯ್ ಹಾನಗಲ್, ಕೆ.ಡಿ. ಸುನಿಲ್, ಡಿ.ಎಂ.ಆರ್., ಪ್ರಭಾಕರ್, ಹರೀಶ್ ಮಾದಪ್ಪ, ಪ್ರವೀಣ್ ಚಂಗಪ್ಪ, ನಾಗರಾಜಶೆಟ್ಟಿ, ಉಷಾ ಪ್ರೀತಂ, ನರೇಶ್‌ಚಂದ್ರಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಪ್ರಸಿದ್ಧ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತ ಮೈದಳೆದಿದ್ದು ಹಾಲ್ನೊರೆ ಸೂಸುತ್ತಾ ಧುಮ್ಮಿಕ್ಕುತ್ತಿದೆ.

ಮಲ್ಲಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಈವರೆಗೆ ೨೫ ಇಂಚಿನಷ್ಟು ಮಳೆ ಸುರಿದಿದ್ದು, ಕಳೆದ ನಾಲ್ಕು ದಿನಗಳಿಂದ ೧೨ ಇಂಚು ಮಳೆಯಾಗಿದೆ. ಮಲ್ಲಳ್ಳಿ, ಕುಡಿಗಾಣ, ನಾಡ್ನಳ್ಳಿ, ಕೊತ್ನಳ್ಳಿ, ಹೆಗ್ಗಡಮನೆ ಭಾಗದಲ್ಲೂ ಮಳೆ ಭೋರ್ಗರೆಯುತ್ತಿದೆ.ನಾಪೋಕ್ಲು: ತಲಕಾವೇರಿ, ಭಾಗಮಂಡಲ ಸೇರಿದಂತೆ ಕಾವೇರಿ ತಪ್ಪಲಿನಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ನಾಪೋಕ್ಲು ಬಳಿ ಕಾವೇರಿ ನದಿಯಲ್ಲಿ ನೀರಿನ ಮಟ್ಟದಲ್ಲಿ ಹೆಚ್ಚಿನ ಏರಿಕೆ ಕಂಡು ಬಂದಿದೆ.

ಇದೇ ರೀತಿ ಮುಂದುವರಿದಲ್ಲಿ ಇನ್ನೆರಡು ದಿನಗಳಲ್ಲಿ ಈ ಭಾಗದಲ್ಲಿ ಕಾವೇರಿ ನದಿ ಪ್ರವಾಹದಿಂದಾಗಿ ಮೂರ್ನಾಡು-ನಾಪೋಕ್ಲು ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಕಂಡು ಬರುತ್ತಿದೆ. ಉಳಿದಂತೆ ಈ ಭಾಗದ ಎಲ್ಲಾ ಹೊಳೆ, ತೊರೆ, ಹಳ್ಳಕೊಳ್ಳಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗಿನಿಂದ ಸಂಜೆಯವರೆಗೂ ನಿರಂತರ ಬೀಸುವ ಗಾಳಿ ಸಹಿತ ಜಡಿಮಳೆ ಸುರಿಯಿತು. ಎಲ್ಲೆಡೆ ಒಂದು ಇಂಚಿಗೂ ಅಧಿಕ ಮಳೆಯಾಗಿದೆ. ಮೈನಡುಗಿಸುವ ಚಳಿಯೊಂದಿಗೆ ಅಧಿಕ ಶೀತ ಕೃಷಿ ಕೆಲಸಕ್ಕೆ ಅಡ್ಡಿಪಡಿಸಿದೆ.

ಮಳೆಯೇನೂ ಚೆನ್ನಾಗಿ ಸುರಿಯುತ್ತಿದೆ. ಭತ್ತದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಉತ್ಸಾಹ ತೋರಿದ ರೈತನಿಗೆ ಮಾತ್ರ ಬಿತ್ತನೆ ಬೀಜದ ದರ ಏರಿಕೆ ಅಸಮಾಧಾನ ಮೂಡಿಸಿದೆ. ೩ ಕೆ.ಜಿ. ಬಿತ್ತನೆ ಬೀಜ ತುಂಬಿದ ಚೀಲಕ್ಕೆ ೧೧೦೦ ರೂಪಾಯಿ. ಎಕರೆವಾರು ಗದ್ದೆಗೆ ಬಿತ್ತನೆ ಭತ್ತ ಖರೀದಿಸಲು ಹಣ ಖರ್ಚು ಮಾಡಿದರೆ ಉಳಿದ ಕೆಲಸಕ್ಕೆ, ಕೂಲಿ ಕಾರ್ಮಿಕರಿಗೆ ಸಂಬಳ ಕೊಡಲು ಏನು ಮಾಡುವುದು ಎಂದು ಕಾಜೂರಿನ ಕೃಷಿಕ ಚಂದ್ರಣ್ಣ ಬೇಸರ ವ್ಯಕ್ತಪಡಿಸಿದರು.