ಮಡಿಕೇರಿ, ಜೂ. ೧೬: ನಗರದ ಸ್ಟೋನ್ಹಿಲ್ ಬಳಿ ಇರುವ ನೀರು ಶುದ್ಧಿಕರಣ ಘಟಕದಿಂದ ನಗರಕ್ಕೆ ಮಣ್ಣು ಮಿಶ್ರಿತ ನೀರು ಸರಬರಾಜು ಆಗುತ್ತಿದೆ ಎಂದು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಪಂಪ್ ಹೌಸ್ಗೆ ಭೇಟಿ ನೀಡಿ ಅಲ್ಲಿ ನಡೆಯುತಿರುವ ಫಿಲ್ಟರ್ಹೌಸ್ ಟ್ಯಾಂಕ್ಗಳ ಸ್ವಚ್ಛತೆಯನ್ನು ಆದಷ್ಟು ಶೀಘ್ರದಲ್ಲಿ ಮುಗಿಸಿ ನಗರದ ನಾಗರಿಕರಿಗೆ ಶುದ್ಧ ನೀರನ್ನು ಪೊರೈಸುವಂತೆ ಸ್ಥಳದಲ್ಲಿದ್ದ ಅಭಿಯಂತರರಿಗೆ ನಗರ ಸಭಾ ಸದಸ್ಯರುಗಳಾದ ಮಹೇಶ್ಜೈನಿ ಮತ್ತು ಉಮೇಶ್ ಸುಬ್ರಮಣಿ ಸೂಚಿಸಿದರು. ಟ್ಯಾಂಕಿನ ಸ್ವಚ್ಛತಾ ಕಾರ್ಯ ನಡೆಯುತಿದ್ದು, ಇಂಜಿನಿಯರ್ ನಾಗರಾಜ್ ಸಿಬ್ಬಂದಿ ಗಳಾದ ಸುಬ್ರಮಣಿ, ಬೋಪಣ್ಣ ಮತ್ತು ನಾಗೇಶ್ ಸ್ಥಳದಲ್ಲಿದ್ದರು.