ಪಾಲಿಬೆಟ್ಟ, ಜೂ. ೧೬: ಪಾಲಿಬೆಟ್ಟ ವಲಯ ಕಾಂಗ್ರೆಸ್ ಪಕ್ಷದ ವತಿಯಿಂದ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಪಾಲಿಬೆಟ್ಟದ ಪೆಟ್ರೋಲ್ ಬಂಕ್ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲಿಬೆಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷ ಎಂ.ಎA. ಸಾಬು ಕಾಳಪ್ಪ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರಕಾರವು ಅಧಿಕಾರಕ್ಕೆ ಬಂದ ನಂತರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆಯನ್ನು ಆಗಿಂದಾಗ್ಗೆ ಏರಿಕೆ ಮಾಡುತ್ತಿದ್ದು, ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂದು ಆರೋಪಿಸಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರು. ಪಾಲಿಬೆಟ್ಟ ಗ್ರಾ.ಪಂ. ಅಧ್ಯಕ್ಷೆ ನೇತ್ರಾ, ಸದಸ್ಯರುಗಳಾದ ಎಂ.ಬಿ. ಅಬ್ದುಲ್ ನಾಸರ್, ಹೆಚ್.ಕೆ. ವೆಂಕಟೇಶ್, ಹೊಸರ್, ರತ್ನ, ಕುಸುಮಾ ಹಾಗೂ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳಾದ ಶಮೀಲ್, ರಾಮದಾಸ, ಕೆ.ಹೆಚ್. ಅಭಿದ್, ರಶೀದ್, ಹ್ಯಾರೀಸ್, ಹಾಸಿಮ್, ಫಾರೂಕ್, ಪೌಲ್ಸನ್‌ವಾಜ್ ಇನ್ನಿತರರು ಪಾಲ್ಗೊಂಡಿದ್ದರು.

ಸAಪಾಜೆ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಕ್ಷಣ ಇಳಿಕೆ ಮಾಡಬೇಕೆಂದು ಒತ್ತಾಯಿಸಿ ಸಂಪಾಜೆ ಹಾಗೂ ಚೆಂಬು ವಲಯ ಕಾಂಗ್ರೆಸ್ ಸಮಿತಿ ಸಂಪಾಜೆ ಪೆಟ್ರೋಲ್ ಬಂಕ್ ಬಳಿ ಪ್ರತಿಭಟನೆ ನಡೆಸಿತು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ನಿರಂತರ ಬೆಲೆ ಏರಿಕೆಯ ಮೂಲಕ ಜನರನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಾನುವಾರುಗಳನ್ನು ಪ್ರದರ್ಶಿಸಿದ ಪ್ರಮುಖರು ತೈಲೋತ್ಪನ್ನಗಳು ಹಾಗೂ ಅಗತ್ಯ ವಸ್ತುಗಳ ಬೆಲೆಯನ್ನು ತಕ್ಷಣ ಇಳಿಕೆ ಮಾಡದಿದ್ದಲ್ಲಿ ಕಾಂಗ್ರೆಸ್ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ಎಚ್ಚರಿಕೆ ನೀಡಿದರು.

ಪಕ್ಷದ ಕಿಸಾನ್ ಘಟಕದ ಅಧ್ಯಕ್ಷ ನೆರವಂಡ ಉಮೇಶ್ ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಪಿ.ಎಲ್.ಸುರೇಶ್, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೆ.ಕೆ.ರಾಜೇಶ್ವರಿ, ಜಿ.ಪಂ ಮಾಜಿ ಸದಸ್ಯ ಮೊಯ್ದೀನ್ ಕುಂಞ, ಯುವ ಘಟಕದ ಮಾಜಿ ಅಧ್ಯಕ್ಷ ಹನೀಫ್ ಸಂಪಾಜೆ, ಮಾಜಿ ವಲಯಾಧ್ಯಕ್ಷ ದೇವಪ್ಪ ದೇವಜನ, ಪ್ರಮುಖರಾದ ವಾಸು ಎಂ.ಪಿ, ಉಮೇಶ್ ನೀಡುಬೆ, ವಿಜಯ ಕನ್ಯಾನ, ರಾಜೇಶ್ ಕುದ್ಕುಳಿ, ರಿತಿನ್ ಡೆಮ್ಮಲೆ, ಶಶಿಕುಮಾರ್, ಸುಂದರ, ಉಮೇಶ, ಮಾಧವ, ತಿಲಕ, ಮನಮೋಹನ, ತಿಮ್ಮಪ್ಪ, ಯಶವಂತ ಅಳಿಕೆ, ಹೊನ್ನಪ್ಪ, ಮದೆ ಗ್ರಾ.ಪಂ ಸದಸ್ಯ ಸೈಯದ್, ಚೆಂಬು ಸದಸ್ಯರಾದ ಕಮಲ, ವಲಯದ ಪ್ರಮುಖ ಗುಂಡ್ಯ ದಿನಕರ, ಕೇಶವ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.