ಕುಶಾಲನಗರ, ಜೂ. ೧೬: ಕೋವಿಡ್ ಪರೀಕ್ಷೆ ಮಾಡಿಸಿಕೊಂಡರೆ ಮಾತ್ರ ಆಹಾರ ಕಿಟ್ ನೀಡುವ ಬಗ್ಗೆ ಅಧಿಕಾರಿಗಳು ಷರತ್ತು ವಿಧಿಸಿರುವುದಾಗಿ ಬಸವನಹಳ್ಳಿಯ ದಿಡ್ಡಲ್ಲಿ ಪುನರ್ವಸತಿ ಜನರು ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಕೂಲಿ ಕೆಲಸ ಇಲ್ಲದೆ ಅತಂತ್ರರಾಗಿ ಜೀವನ ಸಾಗಿಸುತ್ತಿರುವ ಬಸವನ ಹಳ್ಳಿಯಲ್ಲಿ ನೆಲೆಸಿರುವ ಆದಿವಾಸಿ ಜನತೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸರ್ಕಾರದಿAದ ತಮಗೆ ತಲುಪಬೇಕಾದ ಆಹಾರ ಪದಾರ್ಥಗಳನ್ನು ಅಂಗನವಾಡಿಯಿAದ ನೀಡಬೇಕಾದ ಅಧಿಕಾರಿಗಳು ಕೊರೊನಾ ಪರೀಕ್ಷೆ ಮಾಡಿಸಿಕೊಂಡ ಬಳಿಕವಷ್ಟೇ ಆಹಾರ ಪದಾರ್ಥಗಳನ್ನು ನೀಡಲಾಗುವುದೆಂದು ಸ್ಥಳೀಯ ಅಂಗನವಾಡಿ ಅಧಿಕಾರಿಗಳು ತಿಳಿಸಿದ್ದು, ಇದರಿಂದ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವಯಸ್ಸಾದವರು, ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಆಹಾರ ಪದಾರ್ಥಗಳಿಲ್ಲದೆ ತೊಂದರೆ ಅನುಭವಿಸುತ್ತಿರುವುದಾಗಿ ಹಾಡಿ ಪ್ರಮುಖ ಸ್ವಾಮಿ ತಿಳಿಸಿದ್ದಾರೆ. ಸರ್ಕಾರ ಈ ಕೂಡಲೇ ನಮಗೆ ಆಹಾರ ಪದಾರ್ಥಗಳನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ.