ವೀರಾಜಪೇಟೆ, ಜೂ. ೧೫: ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನಾಥ, ನವಜಾತ ಶಿಶುವಿನ ಮೇತದೇಹ ಪತ್ತೆಯಾಗಿದ್ದು, ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುತ್ತಣ್ಣ ಎಂಬವರ ತೋಟದ ಬೇಲಿಯ ಬಳಿ ಇರುವುದನ್ನು ಗ್ರಾಮಸ್ಥರು ಕಂಡು ದೂರು ನೀಡಿದ ಮೇರೆಗೆ ಸ್ಥಳಕ್ಕಾಗಮಿಸಿದ ಡಿವೈಎಸ್ಪಿ ಜಯಕುಮಾರ್, ಸಿಐ ಶಶಿಧರ್ ಅವರ ನಿರ್ದೇಶನದಲ್ಲಿ ನಗರ ಪೊಲೀಸ್ ಠಾಣೆಯ ಅಧಿಕಾರಿ ಜಗದೀಶ್ ದೂಳ್ ಶೆಟ್ಟಿ ಮುಂದಿನ ಕ್ರಮಕೈಗೊಂಡಿದ್ದಾರೆ.