
ಈ ಹಿಂದೆ ಪ್ರಥಮ ಡೋಸ್ ಕೋವ್ಯಾಕ್ಸಿನ್ ಪಡೆದವರ ಪೈಕಿ ಇನ್ನೂ ಸುಮಾರು ೨೭೩೩ ಮಂದಿ ಎರಡನೇ ಡೋಸ್ ಪಡೆದಿಲ್ಲ. ಇದರಲ್ಲಿ ೪೫ ವಯಸ್ಸಿಗಿಂತ ಅಧಿಕ ವಯಸ್ಸಿನವರು ಸೇರಿದ್ದಾರೆ. ಕೋವ್ಯಾಕ್ಸಿನ್ಗೆ ಪ್ರಥಮ ಡೋಸ್ ಬಳಿಕ ದ್ವಿತೀಯ ಡೋಸ್ ಪಡೆಯಲು ೨೮ ದಿನಗಳ ಬಳಿಕದ ಕಾಲಾವಕಾಶ ನಿಗದಿಪಡಿಸಲಾಗಿದ್ದು ಈ ಅವಧಿ ಮುಕ್ತಾಯಗೊಂಡಿದ್ದರೂ ಜನರು ಪಡೆಯಲು ಬರುತ್ತಿಲ್ಲ. ಇದೀಗ ಕೋವ್ಯಾಕ್ಸಿನ್ ಲಸಿಕೆಗಳು ಜಿಲ್ಲೆಗೆ ಹೊಸದಾಗಿ ಬಾರದಿರುವದರಿಂದ ಅಷ್ಟು ಮಂದಿಗೆ ದ್ವಿತೀಯ ಡೋಸ್ ನೀಡಲು ಲಸಿಕೆ ಕಾಯ್ದಿರಿಸಲಾಗಿದೆ. ಇನ್ನು ಮೂರು ತಿಂಗಳು ಕಳೆದರೆ ಈ ಲಸಿಕೆಯನ್ನು ಉಪಯೋಗಿಸಲು ಸಾಧ್ಯವಿಲ್ಲ. ಈಗಾಗಲೆ ೧೩೫೭ ಮಂದಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರೂ ಅನೇಕರು ದ್ವಿತೀಯ ಡೋಸ್ ಪಡೆದುಕೊಳ್ಳಲು ಬರುತ್ತಿಲ್ಲ. ಇನ್ನೂ ಅನೇಕ ಮಂದಿಯ ಮೊಬೈಲ್ಗಳು ಸಂಪರ್ಕಕ್ಕೇ ಸಿಗುತ್ತ್ತಿಲ್ಲ. ಈ ಎಲ್ಲರೂ ಶೀಘ್ರ ಬಂದು ತಮ್ಮ ಎರಡನೇ ಡೋಸ್ ಲಸಿಕೆ ಪಡೆದು ಸಹಕರಿಸುವಂತೆÀಯೂ, ಆ ಮೂಲಕ ಅವರು ಕೊರೊನಾ ಬಾರದಂತೆ ರಕ್ಷಣೆ ಪಡೆದು ಆರೋಗ್ಯ ಕಾಪಾಡಿಕೊಳ್ಳುವಂತೆಯೂ ಲಸಿಕಾಧಿಕಾರಿ ಡಾ. ಗೋಪಿನಾಥ್ ಸುರೇಶ್ ಅವರು “ಶಕ್ತಿ” ಮೂಲಕ ಮನವಿ ಮಾಡಿದ್ದಾರೆ.
ದ್ವಿತೀಯ ಡೋಸ್ ಕೋವ್ಯಾಕ್ಸಿನ್ ಪಡೆದು ಸಹಕರಿಸಿ
(ಮೊದಲ ಪುಟದಿಂದ) ಇನ್ನು ಈ ಹಿಂದೆ ಕೋವಿಶೀಲ್ಡ್ ಪ್ರಥಮ ಡೋಸ್ ಪಡೆದವರ ಪೈಕಿ ದ್ವಿತೀಯ ಡೋಸ್ ಪಡೆಯಲು ೧೮೦೦ ಮಂದಿ ಬಾಕಿಯಿದ್ದು ಆರೋಗ್ಯ ಇಲಾಖೆಯಿಂದ ಕೋವಿಶೀಲ್ಡ್ ದ್ವಿತೀಯ ಡೋಸ್ ಪಡೆಯುವ ನಿಯಮದಂತೆ ಅವಧಿಯನ್ನು ೮೪ ದಿನಗಳು ವಿಸ್ತರಿಸಿರುವzರಿಂದ ಆ ಅವಧಿ ಮುಗಿದ ಬಳಿಕ ಅವರುಗಳು ತಮ್ಮ ದ್ವಿತೀಯ ಡೋಸ್ ಪಡೆಯಬಹುದಾಗಿದೆ ಎಂದು ಗೋಪಿನಾಥ್ ತಿಳಿಸಿದರು. ೧೮ ರ ಮೇಲ್ಪಟ್ಟ ವಯಸ್ಸಿನವರಿಗೂ ಕೋವಿಶೀಲ್ಡ್ ಲಸಿಕೆ ನೀಡಲಾಗುತ್ತಿದೆ. ಈಗಾಗಲೇ ೧೩,೫೦೦ ಕೋವಿಶೀಲ್ಡ್ ಲಸಿಕೆ ದಾಸ್ತಾನಿದೆ. ದಿನಕ್ಕೆ ಸರಾಸರಿ ೨,೫೦೦ ಕ್ಕಿಂತಲೂ ಅಧಿಕ ಮಂದಿಗೆ ಕೊವಿಶೀಲ್ಡ್ ಪ್ರಥಮ ಡೋಸ್ ಲಸಿಕೆ ನೀಡಲಾಗುತ್ತಿದೆ ಎಂದು ಡಾ. ಗೋಪಿನಾಥ್ ‘‘ಶಕ್ತಿ”ಗೆ ತಿಳಿಸಿದರು.