ಮಡಿಕೇರಿ, ಜೂ. ೧೬: ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸರಕಾರದ ವಕೀಲರಾಗಿ ಆಯ್ಕೆ ಆಗಿರುವ ತಂಡದಲ್ಲಿ ಕೊಡಗಿನ ಇಬ್ಬರು ಸ್ಥಾನ ಪಡೆದಿದ್ದಾರೆ.

ಮಡಿಕೇರಿ ತಾಲೂಕು ಕಾರುಗುಂದ ಮೂಲದ ಚರಣ್ ಕುಂಜಿಲನ ಮತ್ತು ಮುತ್ತಾರ್ಮುಡಿ ಮೂಲದ ಪಾರೆಮಜಲು ಉಮೇಶ್ ಅವರನ್ನು ಆಯ್ಕೆ ಮಾಡಿ ಕೇಂದ್ರ ಕಾನೂನು ಸಚಿವಾಲಯ ಆದೇಶ ಹೊರಡಿಸಿದೆ.

ಬೆಂಗಳೂರಿನ ಕರ್ನಾಟಕ ಉಚ್ಚ ನ್ಯಾಯಾಲಯ, ಧಾರವಾಡ ಮತ್ತು ಗುಲ್ಬರ್ಗಾ ಹೈಕೋರ್ಟ್ ಪೀಠ ಹಾಗೂ ಸಿಎಟಿ ಬೆಂಗಳೂರು ಪೀಠದಲ್ಲಿ ರೈಲ್ವೆ ಮತ್ತು ತೆರಿಗೆ ಇಲಾಖೆ ಹೊರತುಪಡಿಸಿ ಕೇಂದ್ರ ಸರಕಾರಕ್ಕೆ ಸಂಬAಧಿಸಿದ ವ್ಯಾಜ್ಯಗಳನ್ನು ಇವರುಗಳು ಪ್ರತಿನಿಧಿಸಲಿದ್ದಾರೆ.

ಮಡಿಕೇರಿಯಲ್ಲಿ ವೃತ್ತಿ ಆರಂಭಿಸಿ, ಮಡಿಕೇರಿ ವಕೀಲರ ಸಂಘದ ಸದಸ್ಯರು ಗಳಾಗಿದ್ದ ಈ ಈರ್ವರು ವಕೀಲರು ಇದೀಗ ಕೇಂದ್ರ ಸರಕಾರದ ವಕೀಲರಾಗಿ ಆಯ್ಕೆಯಾಗಿರುವುದು ಹೆಮ್ಮೆಯೆನಿಸಿದೆ ಎಂದು ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕೆ.ಡಿ. ದಯಾನಂದ ತಿಳಿಸಿದ್ದಾರೆ.