ಮಡಿಕೇರಿ, ಜೂ. ೧೪: ಪೊಲೀಸರ ದೌರ್ಜನ್ಯದಿಂದ ಮೃತಪಟ್ಟಿದ್ದಾರೆ ಎನ್ನಲಾಗಿರುವ ರಾಯ್ ಡಿಸೋಜಾ ಅವರ ಮರಣೋತ್ತರ ಪರೀಕ್ಷೆಯಲ್ಲಿ ವ್ಯಕ್ತಿಯ ದೇಹದ ಹಲವು ಕಡೆ ಭಾರೀ ಪೆಟ್ಟಾಗಿರುವುದು ತಿಳಿದು ಬಂದಿದ್ದು, ಮರಣೋತ್ತರ ಪರೀಕ್ಷೆಯ ವರದಿ ಅಪರಾಧ ತನಿಖಾ ವಿಭಾಗದ (ಸಿಐಡಿ) ಅಧಿಕಾರಿಗಳ ಕೈ ಸೇರಿದೆ.
ತಾ. ೧೨ರ ರಾತ್ರಿ ತಹಶೀಲ್ದಾರ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಇಬ್ಬರು ವೈದ್ಯರು ಪರೀಕ್ಷೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ವೀಡಿಯೋದಲ್ಲಿ ರಾಯ್ ಡಿಸೋಜ ಮೇಲೆ ಮೃಗೀಯ ರೀತಿ ಹಲ್ಲೆ ಮಡಿಕೇರಿ, ಜೂ. ೧೪: ಪೊಲೀಸರ ದೌರ್ಜನ್ಯದಿಂದ ಮೃತಪಟ್ಟಿದ್ದಾರೆ ಎನ್ನಲಾಗಿರುವ ರಾಯ್ ಡಿಸೋಜಾ ಅವರ ಮರಣೋತ್ತರ ಪರೀಕ್ಷೆಯಲ್ಲಿ ವ್ಯಕ್ತಿಯ ದೇಹದ ಹಲವು ಕಡೆ ಭಾರೀ ಪೆಟ್ಟಾಗಿರುವುದು ತಿಳಿದು ಬಂದಿದ್ದು, ಮರಣೋತ್ತರ ಪರೀಕ್ಷೆಯ ವರದಿ ಅಪರಾಧ ತನಿಖಾ ವಿಭಾಗದ (ಸಿಐಡಿ) ಅಧಿಕಾರಿಗಳ ಕೈ ಸೇರಿದೆ.
ತಾ. ೧೨ರ ರಾತ್ರಿ ತಹಶೀಲ್ದಾರ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಇಬ್ಬರು ವೈದ್ಯರು ಪರೀಕ್ಷೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ವೀಡಿಯೋದಲ್ಲಿ ರಾಯ್ ಡಿಸೋಜ ಮೇಲೆ ಮೃಗೀಯ ರೀತಿ ಹಲ್ಲೆ ಶವಪಂಚನಾಮೆ ವರದಿ ಸಿಐಡಿ ಅಧಿಕಾರಿಗಳಿಗೆ ತಲುಪಿದ್ದು, ಕುಟುಂಬಸ್ಥರು ಹಾಗೂ ೩ ಮಂದಿ ಸಾಕ್ಷಿದಾರರ ಹೇಳಿಕೆಯನ್ನು ದಾಖಲಿಸಿ ಅಧಿಕಾರಿಗಳಿಗೆ ನೀಡಲಾಗಿದೆ. ಶವ ಪಂಚನಾಮೆಯಲ್ಲಿ
(ಮೊದಲ ಪುಟದಿಂದ) ಗಾಯಗಳ ಬಗ್ಗೆ ವರದಿ ನೀಡಲಾಗಿದೆ ಎಂದು ತಹಶೀಲ್ದಾರ್ ಮಹೇಶ್ ‘ಶಕ್ತಿ’ಗೆ ತಿಳಿಸಿದ್ದಾರೆ.
ಇಂದು ಕುಟುಂಬಸ್ಥರ ಹೇಳಿಕೆ ಪಡೆಯಲಿರುವ ಅಧಿಕಾರಿಗಳು
ಪ್ರಕರಣಕ್ಕೆ ಸಂಬAಧಿಸಿದAತೆ ಸಿಐಡಿ ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ. ಘಟನೆ ಸಂಬAಧ ಹೇಳಿಕೆ ಪಡೆಯಲು ಮೃತ ರಾಯ್ ಡಿಸೋಜ ಅವರ ಮನೆಗೆ ಅಧಿಕಾರಿಗಳು ತೆರಳಿದ್ದರು. ತಾ. ೧೫ ರಂದು (ಇಂದು) ಅಧಿಕಾರಿಗಳಿರುವ ಸ್ಥಳಕ್ಕೆ ಬಂದು ಹೇಳಿಕೆ ನೀಡುವಂತೆ ತಿಳಿಸಿದ್ದು, ನಿಮ್ಮೊಂದಿಗೆ ನಾವಿದ್ದೇವೆ ಎಂದು ಆತ್ಮಸ್ಥೆöÊರ್ಯ ತುಂಬಿದ್ದಾರೆ.
ಸಾರ್ವಜನಿಕ ಹಿತರಕ್ಷಣಾ ಸಮಿತಿ ಖಂಡನೆ
ರಾಯ್ ಡಿಸೋಜ ಸಾವಿನ ಪ್ರಕರಣವನ್ನು ಕೊಡಗು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಖಂಡಿಸಿದ್ದು, ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ವಿಧಿಸಬೇಕೆಂದು ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಒತ್ತಾಯಿಸಿದ್ದಾರೆ.
ಮಾನಸಿಕ ಅಸ್ವಸ್ಥನ ಮೇಲೆ ಮೃಗೀಯ ರೀತಿ ಹಲ್ಲೆ ನಡೆಸಿರುವುದು ಖಂಡನೀಯ. ಪೊಲೀಸರು ಹಲ್ಲೆ ಮಾಡುವ ಬದಲು ಆತನನ್ನು ಸಮಾಧಾನಪಡಿಸಬೇಕಿತ್ತು. ಈ ರೀತಿಯ ದೌರ್ಜನ್ಯ ಪೊಲೀಸ್ ಇಲಾಖೆಯನ್ನು ತಲೆತಗ್ಗಿಸುವಂತೆ ಮಾಡಿದೆ. ಸಿಐಡಿ ಪ್ರಕರಣದ ತನಿಖೆ ಕೈಗೆತ್ತ್ತಿಕೊಂಡಿರುವುದು ಸ್ವಾಗತರ್ಹ. ಆದರೆ, ತನಿಖೆ ಬಳಿಕ ಸೂಕ್ತ ಶಿಕ್ಷೆ ವಿಧಿಸಬೇಕೆಂದು ಕಟ್ಟಿ ಮಂದಯ್ಯ ಒತ್ತಾಯಿಸಿದ್ದಾರೆ.