ಮಡಿಕೇರಿ, ಜೂ. ೧೪: ಸುಂಟಿಕೊಪ್ಪ ಸಮೀಪದ ತೊಂಡೂರು ಗ್ರಾಮದ ನಿವಾಸಿ (ಈ ಹಿಂದೆ ಸುಂಟಿಕೊಪ್ಪದಲ್ಲಿ ನೆಲೆಸಿದ್ದ) ಪದ್ಮನಾಭ ಮತ್ತು ರೋಹಿಣಿ ಅವರ ಪುತ್ರ ಹರಿ ಪ್ರಸಾದ್ (೩೪) ಸೋಮವಾರ ಮಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಮೃತ ಹರಿಪ್ರಸಾದ್ ಅವರು ಕುಶಾಲನಗರದಲ್ಲಿ ವ್ಯಾಪಾರ ವಹಿವಾಟು ಮಾಡಿಕೊಂಡಿದ್ದರು.
ಆದರೆ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದು ಆತಂಕ ಮೂಡಿಸಿದೆ. ಇವರ ಮೊದಲ ಪತ್ನಿ ಕೆಲ ವರ್ಷದ ಹಿಂದೆ ಆನೆಕಾಡು ಬಳಿ ಸಂಭವಿಸಿದ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದರು. ಹರಿಪ್ರಸಾದ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು, ತೊಂಡೂರು ಸ್ವಗೃಹಕ್ಕೆ ಮೃತದೇಹ ತರಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.