ಸೋಮವಾರಪೇಟೆ, ಜೂ. ೧೪: ಕೊರೊನಾ ವೈರಸ್ ಸಾಂಕ್ರಾಮಿಕ ವಾಗಿ ವ್ಯಾಪಿಸುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಹಲವಷ್ಟು ಸಂಘಟನೆ ಗಳು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಸೀಲ್ಡೌನ್ ಕುಟುಂಬಗಳ ನೆರವಿಗೆ ನಿಂತಿವೆ. ಇವುಗಳಲ್ಲಿ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ಸಂಘಟನೆ ಆಹಾರ ಸಾಮಗ್ರಿಗಳ ಕಿಟ್ನೊಂದಿಗೆ ಆರೋಗ್ಯ ಕ್ಷೇತ್ರ ದತ್ತಲೂ ಗಮನ ಹರಿಸಿ, ೨ ಆಕ್ಸಿಜನ್ ಕಾನ್ಸನ್ಟ್ರೇಟರ್, ೧೦ ಆಕ್ಸೋಮೀಟರ್, ೨೦೦ಕ್ಕೂ ಅಧಿಕ ಔಷಧ ಕಿಟ್ಗಳನ್ನು ನೀಡುವ ಮೂಲಕ ಮಾದರಿಯಾಗಿದೆ.
ವೈದ್ಯಕೀಯ ಕಿಟ್ಗಳ ಜೊತೆಗೆ ಈಗಾಗಲೇ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ರೂ. ೨.೯೦ ಲಕ್ಷ ವೆಚ್ಚದಲ್ಲಿ, ಬೆಂಗಳೂರಿನ ಪ್ರಣವ್ ಫೌಂಡೇಷನ್ನ ಸಹಯೋಗ ದೊಂದಿಗೆ ೨ಆಕ್ಸಿಜನ್ ಕಾನ್ಸನ್ ಟ್ರೇಟರ್ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಇದರೊಂದಿಗೆ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಕ್ಸೋಮೀಟರ್ ವಿತರಿಸುವ ಮೂಲಕ ಆರೋಗ್ಯ ಕ್ಷೇತ್ರದ ಸುಧಾರಣೆಯತ್ತಲೂ ಸಹಾಯಹಸ್ತ ಚಾಚಿದ್ದಾರೆ.
ಕೊರೊನಾ ಸೋಂಕು ವ್ಯಾಪಕ ವಾಗಿದ್ದ ಸಂದರ್ಭ ಹಲವಷ್ಟು ಮನೆ ಗಳನ್ನು ಸೀಲ್ಡೌನ್ ಮಾಡಲಾಗಿತ್ತು. ಇಂತಹ ಕುಟುಂಬಗಳಿಗೆ ಅಗತ್ಯವಾಗಿ ಬೇಕಾಗಿದ್ದ ಔಷಧೋಪಚಾರವನ್ನು ಉಚಿತ ಸೇವೆಯ ಮೂಲಕ ಒದಗಿಸಿ ದ್ದಾರೆ. ಇದರೊಂದಿಗೆ ಸೀಲ್ಡೌನ್ ಆದ ಬಡ ಕುಟುಂಬಗಳನ್ನು ಗುರುತಿಸಿ ದಿನಸಿ ಸಾಮಗ್ರಿಗಳ ಕಿಟ್ಗಳನ್ನು ನೀಡುವ ಮೂಲಕ ಸಂಕಷ್ಟದ ಸಮಯದಲ್ಲಿ ಕೈಹಿಡಿದಿದ್ದಾರೆ.
ಇದೀಗ ಬೆಂಗಳೂರಿನಲ್ಲಿರುವ ಯಿಫಾ ಸಂಘಟನೆಯ ಸದಸ್ಯ ರಕ್ಷಿತ್ ಅವರ ಪ್ರಯತ್ನದ ಫಲವಾಗಿ, ಪ್ರಣವ್ ಫೌಂಡೇಷನ್ನ ಸಹಯೋಗ ದೊಂದಿಗೆ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ಮೂಲಕ ಕೊರೊನಾ ಸೋಂಕಿತರಿಗೆ ನೀಡ ಲಾಗುವ ಔಷಧೋಪಚಾರಗಳ ೨೦೦ ಕಿಟ್ಗಳನ್ನು ಒದಗಿಸಿದ್ದು, ಇವುಗಳನ್ನು ಸಂಘಟನೆಯ ಸದಸ್ಯರು ಗೌಡಳ್ಳಿ, ಶನಿವಾರಸಂತೆ, ಕೊಡ್ಲಿಪೇಟೆ, ಶಾಂತಳ್ಳಿ, ಮಾದಾಪುರ, ಆಲೂರು ಸಿದ್ದಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಸ್ತಾಂತರಿಸಿದ್ದಾರೆ.
ಡೋಲೋ ೬೫೦ ಮಾತ್ರೆ, ಅಜಿಥೋಮೈಸಿನ್ ೫೦೦ ಎಂ.ಜಿ., ವಿಟಮಿನ್ ಸಿ ವಿತ್ ಜಿಂಕ್ ಸಪ್ಲಿಮೆಂಟ್, ಕಾಫ್ ಸಿರಪ್, ಎನ್೯೫ ಮಾಸ್ಕ್ಗಳನ್ನು ಒಳಗೊಂಡ ೨೦೦ ಕಿಟ್ಗಳನ್ನು ಸಂಘದ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ, ಕಾರ್ಯದರ್ಶಿ ಸಜನ್ ಮಂದಣ್ಣ, ಉಪಾಧ್ಯಕ್ಷ ಹರ್ಷಿತ್ ಶಿವಪ್ಪ, ಪದಾಧಿಕಾರಿಗಳಾದ ಅಭಿಷೇಕ್ ಗೋವಿಂದಪ್ಪ, ಚರಣ್ಕಾಂತ್, ಆದರ್ಶ್ ತಮ್ಮಯ್ಯ, ಅಶ್ವಿನಿ ಕೃಷ್ಣಕಾಂತ್, ಕೆ.ಡಿ. ಜೀವನ್, ಅರುಣ್ ಸೇರಿದಂತೆ ಇತರರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ ಅಲ್ಲಿನ ವೈದ್ಯರಿಗೆ ಹಸ್ತಾಂತರಿಸಿ ದ್ದಾರೆ.
ಇದರೊಂದಿಗೆ ತಾಲೂಕಿನ ದುಂಡಳ್ಳಿ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಅನುಕೂಲ ವಾಗುವಂತೆ ೩ ಆಕ್ಸೋಮೀಟರ್, ಬೆಟ್ಟದಳ್ಳಿ, ಶಾಂತಳ್ಳಿ ಗ್ರಾ.ಪಂ.ಗೆ ಸೇರಿ ೨, ತೋಳೂರುಶೆಟ್ಟಳ್ಳಿಗೆ ೧, ಸೋಮವಾರಪೇಟೆ ಪೊಲೀಸ್ ಠಾಣೆಗೆ ೧ ಆಕ್ಸೋಮೀಟರ್ ನೀಡಿದ್ದು, ಗೌಡಳ್ಳಿ ವ್ಯಾಪ್ತಿಗೆ ೨ ಆಕ್ಸೋಮೀಟರ್ ನೀಡಲಾಗುತ್ತಿದೆ.
ಸೋಮವಾರಪೇಟೆ ವ್ಯಾಪ್ತಿಯಲ್ಲಿ ಕೋವಿಡ್ ಸಂದರ್ಭ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್, ಗೃಹ ರಕ್ಷಕ ದಳದ ಸಿಬ್ಬಂದಿಗಳಿಗೆ ಯಿಫಾ ಸದಸ್ಯ ಅಭಿಷೇಕ್ ಗೋವಿಂದಪ್ಪ ಅವರು ಪ್ರತಿ ದಿನ ಸಂಜೆ ಟೀ ಮತ್ತು ಬಿಸ್ಕೆಟ್ ನೀಡುತ್ತಿದ್ದಾರೆ. ಸದಸ್ಯೆ ಅಶ್ವಿನಿ ಕೃಷ್ಣಕಾಂತ್ ಅವರು ಕೋವಿಡ್ ಲಸಿಕಾ ಕೇಂದ್ರದಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದು, ಸಂಘಟನೆಯ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ಅವರು ಸೇವಾ ಭಾರತಿಯವ ರೊಂದಿಗೆ ಕೊರೊನಾದಿಂದ ಸಾವನ್ನಪ್ಪಿದವರ ಅಂತ್ಯಸAಸ್ಕಾರದಲ್ಲಿ ಭಾಗಿಯಾಗುತ್ತಿದ್ದಾರೆ. ಇದರೊಂದಿಗೆ ಇತರ ಸಂಘ ಸಂಸ್ಥೆಗಳು ನಡೆಸುವ ಸೇವಾ ಕಾರ್ಯದಲ್ಲೂ ಯಿಫಾ ಸಂಘಟನೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ.
- ವಿಜಯ್ ಹಾನಗಲ್