ಸೋಮವಾರಪೇಟೆ, ಜೂ. ೧೪: ೧೯ ವರ್ಷ ಪ್ರಾಯದ ಯುವಕನೋರ್ವ ಮನೆಯಿಂದ ನಾಪತ್ತೆಯಾಗಿರುವ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಟ್ಟಣ ಸಮೀಪದ ಹಾನಗಲ್ಲು ಗ್ರಾಮ ನಿವಾಸಿ ಧನುಷ್ ಎಂಬಾತ ತಾ. ೧೦ರಿಂದ ಕಾಣೆಯಾಗಿರುವದಾಗಿ ಆತನÀ ಸೋದರಮಾವ ರಾಜೇಂದ್ರ ದೂರು ನೀಡಿದ್ದಾರೆ. ೧೨ ವರ್ಷಗಳ ಹಿಂದೆ ಸಹೋದರಿ ಮೃತಪಟ್ಟಿದ್ದು, ಆಕೆಯ ಪುತ್ರ ಧನುಷ್ನನ್ನು ತಾನೇ ಸಲಹುತ್ತಿದ್ದು, ತಾ. ೧೦ರಂದು ಮನೆಯಲ್ಲಿ ಮಲಗಿದ್ದವನು ರಾತ್ರಿ ಎದ್ದು ತೆರಳಿದ್ದಾನೆ. ಇಲ್ಲಿಯವರೆಗೆ ಮನೆಗೆ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
೫ ಅಡಿ ಎತ್ತರ, ಗೋಧಿ ಮೈ ಬಣ್ಣ, ತೆಳ್ಳನೆ ಶರೀರ, ತಮಿಳು, ಕನ್ನಡ, ಮಲೆಯಾಳಂ ಭಾಷೆ ಬಲ್ಲವನಾಗಿದ್ದು, ಪತ್ತೆಯಾದಲ್ಲಿ ಸೋಮವಾರಪೇಟೆ ಪೊಲೀಸ್ ಠಾಣೆ ೦೮೨೭೬-೨೮೨೦೪೦ಗೆ ಮಾಹಿತಿ ನೀಡಲು ಪ್ರಕಟಣೆ ತಿಳಿಸಿದೆ.