ವೀರಾಜಪೇಟೆ, ಜೂ. ೧೪: ಸೇವಾ ಸಂಸ್ಥೆಗೆ ಸೇರಿದ ತುರ್ತು ಚಿಕಿತ್ಸಾ ವಾಹನವು ಅಪಘಾತಕ್ಕಿಡಾದ ಘಟನೆ ರಾಜ್ಯ ಗಡಿಭಾಗವಾದ ಮಾಕುಟ್ಟ ಅರಣ್ಯ ವಲಯದಲ್ಲಿ ಸಂಭವಿಸಿದೆ.
ಬೆAಗಳೂರು ನಗರದ ಹೊರವಲಯ ದಲ್ಲಿರುವ ಮಾನಸಿಕವಾಗಿ ಅಸ್ವಸ್ಥರಾಗಿ ರುವವರನ್ನು ಶುಶ್ರೂಷೆ ಮಾಡುತ್ತಿರುವ ಸೆಂಟ್ ಅಗಸ್ಟೀನ್ ಸೇವಾ ಸಂಸ್ಥೆಗೆ ಸೇರಿದ ತುರ್ತು ಚಿಕಿತ್ಸಾ ವಾಹನದಲ್ಲಿ (ಕೆಎ ೫೧ ಎಜಿ ೦೧೭೯) ಸೇವಾ ಸಂಸ್ಥೆಯ ಕನ್ಯಾ ಸ್ತಿçÃಯರಾದ ಗೀನೆಸಿವ್, ಜ್ರೇನ್ ರೋಗಿಯೋರ್ವರನ್ನು ಬೆಂಗಳೂರಿನಿAದ ಕೇರಳ ರಾಜ್ಯದ ಕೂಟುಪೊಳೆ ಎಂಬಲ್ಲಿರುವ ಆಶ್ರಮಕ್ಕೆ ದಾಖಲಿಸಿ ಬೆಂಗಳೂರಿಗೆ ಹಿಂದಿರುಗುವ ವೇಳೆಯಲ್ಲಿ ಮಾಕುಟ್ಟ ಹನುಮಾನ್ ಪಾರದೇಗುಲದ ಅನತಿ ದೂರದಲ್ಲಿ ಸಂಜೆ ಅಪರಿಚಿತ ವಾಹನ ಡಿಕ್ಕಿ ಪಡಿಸಿದೆ.
ತುರ್ತು ಚಿಕಿತ್ಸಾ ವಾಹನದಲ್ಲಿದ್ದ ಚಾಲಕ ಮಂಜುನಾಥ್ (೪೦) ಸೇರಿದಂತೆ ಈರ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಾಹನವು ನಜ್ಜುಗುಜ್ಜಾಗಿದೆ. ಗಾಯಾಳುಗಳನ್ನು ಕೇರಳ ರಾಜ್ಯದ ಇರಿಟ್ಟಿ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ.
ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಚಾಲಕ ಮಂಜುನಾಥ್ ನೀಡಿದ ದೂರಿನ ಮೇರೆಗೆ ಅಪಘಾತ ಪ್ರಕರಣ ದಾಖಲಾಗಿದೆ.
-ಕೆ.ಕೆ.ಎಸ್., ವೀರಾಜಪೇಟೆ