ವೀರಾಜಪೇಟೆ, ಜೂ. ೧೪: ಕೂಲಿ ಅರಸಿಕೊಂಡು ಬಂದು ಕಾಂಕ್ರಿಟ್ ಕಂಪೆನಿಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಟ್ಟಂಗಾಲ ಗ್ರಾಮದಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ, ಹೆಬ್ಬಳ್ಳಿ ಗ್ರಾಮದ ನಿವಾಸಿ ರಾಜೇಶ್ (೨೮) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಬಿಟ್ಟಂಗಾಲ-ಶೆಟ್ಟಿಗೇರಿ ತೆರಳುವ ಮಾರ್ಗದ ಸನಿಹದಲ್ಲಿರುವ ನವೀನ್ಚಂದ್ರ ಸುವರ್ಣ ಎಂಬವರ ಮಾಲೀಕತ್ವದ ವಿದ್ಯುತ್ ಕಂಬ ತಯಾರಿಸುವ ಘಟಕ ಕಾಂಕ್ರಿಟ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ನಿನ್ನೆ ಮನೆಯ ಮೇಲ್ಚಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂಸ್ಥೆಯ ವ್ಯವಸ್ಥಾಪಕ ದೇವಯ್ಯ ಅವರು ನೀಡಿದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವು ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.