ಸಿದ್ದಾಪುರ, ಫೆ. ೧೪: ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಬಗ್ಗೆ ತೋಟದ ಮಾಲೀಕರುಗಳು ಹಾಗೂ ಸಂಸ್ಥೆಯ ಮುಖ್ಯಸ್ಥರು ಎಚ್ಚರವಹಿಸುವ ಮೂಲಕ ಸೋಂಕು ಹರಡದಂತೆ ಕ್ರಮವಹಿಸಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ಸೂಚನೆ ನೀಡಿದರು.

ಸಿದ್ದಾಪುರದ ಸ್ವರ್ಣಮಾಲಾ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದಾಪುರ ಭಾಗದ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕ ವರ್ಗದವರಿಗೆ ಸೋಂಕು ಪತ್ತೆ ಆಗಿದ್ದು, ಈ ಹಿನ್ನೆಲೆಯಲ್ಲಿ ಕಾರ್ಮಿಕರ ಬಗ್ಗೆ ಖಾಸಗಿ ಸಂಸ್ಥೆಯ ಕಾಫಿ ತೋಟದ ಮುಖ್ಯಸ್ಥರು ಹಾಗೂ ಮಾಲೀಕರು ಎಚ್ಚರವಹಿಸಬೇಕೆಂದರು. ೧೦ ಸೋಂಕಿತರು ಒಂದು ಭಾಗದಲ್ಲಿ ಪತ್ತೆ ಆದಲ್ಲಿ ಆ ಭಾಗವನ್ನು ಸೀಲ್‌ಡೌನ್ ಮಾಡುವಂತೆ ನಿರ್ದೇಶನ ನೀಡಿದರು.

ಸಂಬಳ ಸಹಿತ ರಜೆ

ಪ್ರತಿಯೊಂದು ತೋಟದ ಮಾಲೀಕರು ತಮ್ಮ ತೋಟಗಳಿಗೆ ಬರುವ ಕಾರ್ಮಿಕರಿಗೆ ಲಸಿಕೆಗಳನ್ನು ಕೊಡಿಸಬೇಕು ಹಾಗೂ ಗಂಟಲು ದ್ರವ ಪರೀಕ್ಷೆಯನ್ನು ಮಾಡಿಸಬೇಕೆಂದು ತೋಟದ ಮಾಲೀಕರಿಗೆ ಸೂಚನೆ ನೀಡಿದರು. ಸೋಂಕು ಪತ್ತೆಯಾದ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಹೊರಗಡೆ ಬಾರದಂತೆ ಆ ತೋಟದಲ್ಲಿರುವ ಕಾರ್ಮಿಕರಿಗೆ ೧೫ ದಿನಗಳ ರಜೆ ಹಾಗೂ ರಜೆ ಸಹಿತ ಸಂಬಳ ನೀಡಬೇಕು. ಕಾರ್ಮಿಕರನ್ನು ಬಲಾತ್ಕಾರ ಮಾಡಿ ಕೆಲಸ ಮಾಡಿಸಬಾರದೆಂದರು.

ಕಠಿಣ ಕ್ರಮ ಜರುಗಿಸಿ

ಇತ್ತೀಚೆಗೆ ಬಿಬಿಟಿಸಿ ಸಂಸ್ಥೆಗೆ ಸೇರಿದ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸೋಂಕು ಪತ್ತೆಯಾಗಿ ಈರ್ವರು ಮೃತಪಟ್ಟರೂ ಕೂಡ ಸಂಸ್ಥೆಯವರು ಕಾರ್ಮಿಕರಿಗೆ ಕೆಲಸ ನೀಡುತ್ತಿದ್ದಾರೆ. ಯಾವುದೇ ಮುಂಜಾಗ್ರತಾ ಕ್ರಮಕೈಗೊಂಡಿಲ್ಲ ವೆಂದು ಸಿದ್ದಾಪುರ ಗ್ರಾ.ಪಂ. ಸದಸ್ಯರುಗಳು ಶಾಸಕರ ಗಮನಕ್ಕೆ ತಂದರು. ಅಲ್ಲದೆ ಈ ಬಗ್ಗೆ ಟಾಸ್ಕ್ಫೋರ್ಸ್ ಸಮಿತಿ ಯವರು ಎಷ್ಟೇ ಪ್ರಯತ್ನಪಟ್ಟರೂ ಸಂಸ್ಥೆಯವರು ನಿರ್ಲಕ್ಷö್ಯ ವಹಿಸುತ್ತಿದ್ದಾರೆಂದು ದೂರಿದರು.

ಇದಕ್ಕೆ ಉತ್ತರಿಸಿದ ಶಾಸಕರು, ತಾ. ೨೧ರ ವರೆಗೆ ಯಾವ ತೋಟದ ಮಾಲೀಕರು ಕೂಡ ವಾಹನಗಳಲ್ಲಿ ಕಾರ್ಮಿಕರನ್ನು ಕಾಲೋನಿಗಳಿಂದ ಕರೆತರಬಾರದು. ಸರಕಾರದ ಮಾರ್ಗಸೂಚಿ ಪಾಲಿಸುವ ಮೂಲಕ ತಾ. ೨೧ರೊಳಗೆ ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕೆಂದು ತಿಳಿಸಿದರು. ವಾಹನಗಳಲ್ಲಿ ಕಾರ್ಮಿಕರನ್ನು ಕರೆತಂದಲ್ಲಿ ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೆ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಿದರು.

ಅಕ್ರಮ ಮದ್ಯ ಮಾರಾಟ

ಇದೇ ಸಂದರ್ಭದಲ್ಲಿ ಕೆಲವು ತೋಟದ ವ್ಯವಸ್ಥಾಪಕರುಗಳು ಮಾತನಾಡಿ, ಕರಡಿಗೋಡು, ಪಾಲಿಬೆಟ್ಟ, ಗುಹ್ಯ ಭಾಗದ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ. ಕಾರ್ಮಿಕರಿಗೆ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕರು, ಪೊಲೀಸರು ತನಿಖೆ ನಡೆಸಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮಕೈಗೊಳ್ಳಲು ನಿರ್ದೇಶನ ನೀಡಿದರು.

ಬಲಾತ್ಕಾರ ಸಾಲ ವಸೂಲಾತಿ ಇಲ್ಲ

ಗ್ರಾ.ಪಂ. ಸದಸ್ಯರುಗಳು ಮಾತನಾಡಿ, ಮಹಿಳಾ ಸಂಘಗಳಿಗೆ ಖಾಸಗಿ ಫೈನಾನ್ಸ್ರವರು ನೀಡಿರುವ ಸಾಲಗಳನ್ನು ಬಲಾತ್ಕಾರವಾಗಿ ವಸೂಲಿ ಮಾಡಲು ಬರುತ್ತಿದ್ದು, ಇವರ ಕಿರುಕುಳದಿಂದಾಗಿ ಬಹುತೇಕ ಕಾರ್ಮಿಕರು ದೂರದ ಊರಿಗೆ ಕೂಲಿ ಕೆಲಸಕ್ಕೆ ತೆರಳಿ ಸಾಲವನ್ನು ಪಾವತಿಸಲು ಮುಂದಾಗುತ್ತಿದ್ದಾರೆAದು ಮಾಹಿತಿ ನೀಡಿದರು.

ಶಾಸಕರು ಈ ಕುರಿತು ಈಗಾಗಲೇ ಸಂಘ-ಸAಸ್ಥೆಗಳ ಸಾಲ ಮರು ಪಾವತಿಗೆ ಕಾಲಾವಕಾಶ ನೀಡಿದ್ದು, ಬಲಾತ್ಕಾರ ಸಾಲ ವಸೂಲಾತಿಗೆ ಬರುವವರ ವಿರುದ್ಧ ಪೊಲೀಸ್ ಪುಕಾರು ನೀಡುವಂತೆ ತಿಳಿಸಿದರು. ಸಿದ್ದಾಪುರ ವ್ಯಾಪ್ತಿಯಲ್ಲಿ ಕೊರೊನಾ ವೈರಸನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಟಾಟಾ, ಬಿಬಿಟಿಸಿ, ಚಿಕ್ಕನಳ್ಳಿ ಎಸ್ಟೇಟ್‌ನ ವ್ಯವಸ್ಥಾಪಕರು ತಮ್ಮ ಕಾಫಿ ತೋಟಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಲಕ್ಷಿö್ಮ ಚಂದ್ರಶೇಖರ್, ಕಂದಾಯ ಇಲಾಖಾಧಿಕಾರಿಗಳು ಪ್ರತಿಯೊಂದು ಭಾಗಕ್ಕೆ ಹಾಗೂ ಕಾಫಿ ತೋಟಗಳಿಗೆ ತೆರಳಿ ಸೋಂಕಿತರ ಮಾಹಿತಿ ಪಡೆಯಬೇಕು. ಇಂದಿನಿAದಲೇ ಈ ಬಗ್ಗೆ ಕಾರ್ಯಪ್ರವೃತ್ತರಾಗಿ ೧೦ ಸೋಂಕಿತರು ಕಂಡುಬAದಲ್ಲಿ ಆ ಭಾಗವನ್ನು ಸೀಲ್‌ಡೌನ್ ಮಾಡಬೇಕೆಂದರು. ಅಲ್ಲದೆ ಖಾಸಗಿ ಸಂಸ್ಥೆಯ ಕಾಫಿ ತೋಟದಲ್ಲಿ ಕಾರ್ಮಿಕರಿಗೆ ಸೋಂಕು ಪತ್ತೆಯಾದಲ್ಲಿ ಅವರಿಗೆ ಅದೇ ಜಾಗದಲ್ಲಿ ಊಟದ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು.

ಸೋಂಕು ಪತ್ತೆಯಾದವರು ಗುಣಮುಖವಾಗಿದ್ದರೂ ಕೂಡ ೨೪ ದಿನಗಳವರೆಗೆ ಅವರನ್ನು ಹೊರಗಡೆ ಕೆಲಸಕ್ಕೆ ಕಳುಹಿಸಬಾರದು; ಬ್ಲಾಕ್ ಫಂಗಸ್ ಪತ್ತೆ ಆಗುವ ಸಾಧ್ಯತೆ ಇದ್ದು; ಈ ಬಗ್ಗೆ ಎಚ್ಚರ ವಹಿಸಬೇಕೆಂದರು. ಅಲ್ಲದೆ ಎರಡು ಮಾಸ್ಕ್ ಧರಿಸಬೇಕೆಂದು ಸಲಹೆ ನೀಡಿದರು. ಈ ಬಾರಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಹಾಗೂ ಲಸಿಕೆಯನ್ನು ಪಡೆದುಕೊಳ್ಳುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಸೋಂಕು ಪತ್ತೆಯಾದವರು ಮನೆಬಿಟ್ಟು ಅನಗತ್ಯವಾಗಿ ಓಡಾಟ ಮಾಡಿದರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳುವಂತೆ ಟಾಸ್ಕ್ ಫೋರ್ಸ್ಗೆ ಸೂಚನೆ ನೀಡಿದರು. ಮುಂದಿನ ೨೧ ರೊಳಗೆ ಕೊಡಗು ಜಿಲ್ಲೆಯನ್ನು ಹಸಿರು ವಲಯಕ್ಕೆ ತರಲು ಎಲ್ಲರೂ ಸಹಕಾರ ನೀಡಬೇಕೆಂದರು.

ಗ್ರಾ.ಪA. ಸದಸ್ಯರುಗಳು ಮಾತನಾಡಿ, ಹಲವಾರು ಮಂದಿ ಲಸಿಕೆಯನ್ನು ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆಂದರು. ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು ಯಾರು ಕೂಡ ಲಸಿಕೆಗೆ ಭಯಪಡುವ ಅಗತ್ಯವಿಲ್ಲ ಎಂದರು. ನದಿ ತೀರದ ನಿವಾಸಿಗಳು ಎಲ್ಲರೂ ಲಸಿಕೆ ಪಡೆಯಬೇಕೆಂದರು.

ಇದೇ ಸಂದರ್ಭ ಸಿದ್ದಾಪುರದ ಆದಿಚುಂಚನಗಿರಿ ವಿದ್ಯಾಸಂಸ್ಥೆಯಿAದ ಕೊರೊನಾ ವಾರಿಯರ್ಸ್ಗಳಿಗೆ ಮೆಡಿಸನ್ ಕಿಟ್‌ಗಳನ್ನು ಪಂಚಾಯಿತಿಗೆ ಹಸ್ತಾಂತರಿಸಿದರು. ನಂತರ ಸಂಜೀವಿನಿ ಸ್ವಸಹಾಯ ಸಂಘದವರು ತಯಾರಿಸಿದ ಮಾಸ್ಕ್ಗಳನ್ನು ಶಾಸಕರು ಕೊರೊನಾ ವಾರಿಯರ್ಸ್ಗೆ ವಿತರಿಸಿದರು.

ಸಭೆಯಲ್ಲಿ ವೀರಾಜಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ, ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ತಾಲೂಕು ಐಟಿಡಿಪಿ ಅಧಿಕಾರಿ ಗುರುಶಾಂತಪ್ಪ, ಮಡಿಕೇರಿ ವೃತ್ತ ನಿರೀಕ್ಷಕ ಪಿ.ವಿ. ವೆಂಕಟೇಶ್, ಠಾಣಾಧಿಕಾರಿ ಮೋಹನ್ ರಾಜ್, ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ರೀನಾ ತುಳಸಿ, ಉಪಾಧ್ಯಕ್ಷ ಮಹೇಶ್ ಕುಮಾರ್, ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕಿ ಭಾನುಪ್ರಿಯ, ಗ್ರಾಮಲೆಕ್ಕಿಗ ಓಮಪ್ಪ ಬಣಾಕರ್, ಸಿದ್ದಾಪುರ ಪಿಡಿಓ ವಿಶ್ವನಾಥ್, ವೈದ್ಯಾಧಿಕಾರಿ ಡಾ. ರಾಘವೇಂದ್ರ ಸೇರಿದಂತೆ ವಿವಿಧ ಇಲಾಖಾಧಿಕಾರಿ ಗಳು ಹಾಗೂ ಗ್ರಾ.ಪಂ. ಸದಸ್ಯರುಗಳು, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧುದೇವಯ್ಯ ಉಪಸ್ಥಿತರಿದ್ದರು.

-ವಾಸು ಎ.ಎನ್.