ಕುಶಾಲನಗರ, ಜೂ. ೧೪: ದಾನಿಗಳು ನೀಡಿದ ಎರಡು ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ಸ್ಥಳೀಯ ರೆಡ್ ಕ್ರಾಸ್ ಮತ್ತು ರೋಟರಿ ಸಂಸ್ಥೆಯ ಪ್ರಮುಖರು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಹಸ್ತಾಂತರಿಸಿದರು. ಕೊಪ್ಪ ಗ್ರಾ.ಪಂ. ಆಡಳಿತ ಮಂಡಳಿ ಮೂಲಕ ಆಸ್ಪತ್ರೆಯ ವೈದ್ಯರಿಗೆ ನೀಡಿದರು.

ಕುಶಾಲನಗರ ರೆಡ್ ಕ್ರಾಸ್ ಸಂಸ್ಥೆ ಕೋರಿಕೆ ಮೇರೆಗೆ ಅಜೀಮ್ ಪ್ರೇಮ್ ಜೀ ಫೌಂಡೇಶನ್ ಕೊಡುಗೆ ನೀಡಿದ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು ಎಂದು ರೆಡ್ ಕ್ರಾಸ್ ಸೋಮವಾರಪೇಟೆ ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಪಿ. ಚಂದ್ರಶೇಖರ್ ತಿಳಿಸಿದರು. ಕೊಪ್ಪ ಗ್ರಾ.ಪಂ. ಅಧ್ಯಕ್ಷೆ ರೇಣುಕ, ಉಪಾಧ್ಯಕ್ಷೆ ಸಿಂಧು ಅವರ ಮೂಲಕ ಆಸ್ಪತ್ರೆಯ ವೈದ್ಯ ಡಾ. ಶ್ರೀವಳ್ಳಿ ಅವರಿಗೆ ಹಸ್ತಾಂತರಿಸಿ ದರು. ರೆಡ್ ಕ್ರಾಸ್ ಸಂಸ್ಥೆಯ ಕಾರ್ಯಕರ್ತರಾದ ಹೆಚ್.ಎಂ. ಚಂದ್ರು, ವೆಂಕಟೇಶ್, ಕೊಪ್ಪ ಗ್ರಾ.ಪಂ. ಸದಸ್ಯ ಸುರೇಶ್, ಚಂದ್ರಶೇಖರ್ ಆರೋಗ್ಯ ಇಲಾಖೆಯ ಅಧಿಕಾರಿ ಮುಜೀಬ್ ಮತ್ತಿತರು ಇದ್ದರು.