ಕುಶಾಲನಗರ, ಜೂ. ೧೩: ಚಾಲಕನ ಹತೋಟಿ ತಪ್ಪಿ ಮಿನಿ ಲಾರಿಯೊಂದು ರಸ್ತೆ ಬದಿಯ ಅಂಗಡಿ ಒಂದಕ್ಕೆ ನುಗ್ಗಿದ ಘಟನೆ ಕುಶಾಲನಗರ ಸಮೀಪ ತಾವರೆಕೆರೆ ಬಳಿ ಭಾನುವಾರ ಸಂಜೆ ನಡೆದಿದೆ.
ಸ್ಥಳೀಯ ಕೋಳಿ ವ್ಯಾಪಾರಿಗೆ ಸೇರಿದ ಪಿಕಪ್ ಲಾರಿ (ಎಂ-೪೫ -೮೩೦೪) ಮಾದಾಪಟ್ಟಣ ಕಡೆಯಿಂದ ಕುಶಾಲನಗರ ಕಡೆಗೆ ಬರುತ್ತಿದ್ದಾಗ ಲಾರಿ ಚಾಲಕನ ನಿಯಂತ್ರಣ ತಪ್ಪಿ ಗೂಡಂಗಡಿಗೆ ನುಗ್ಗಿದೆ. ಲಾಕ್ ಡೌನ್ ಕಾರಣ ಅಂಗಡಿ ಬಂದ್ ಆಗಿದ್ದು, ಯಾರೂ ಇಲ್ಲದ್ದರಿಂದ ಅನಾಹುತ ತಪ್ಪಿದೆ. ಲಾರಿ ಚಾಲಕ ಪರಾರಿಯಾಗಿದ್ದಾನೆ. ಕುಶಾಲನಗರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.