
ಮಡಿಕೇರಿ, ಜೂ. ೧೩: ಭಾರತದ ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಹುದ್ದೆಯಲ್ಲಿದ್ದು, ಪ್ರಸ್ತುತ ಭಾರತೀಯ ನೌಕಪಡೆಯ ಮೂಲಕ ಅಮೇರಿಕಾದ ನೇವಲ್ ವಾರ್ ಕಾಲೇಜಿನಲ್ಲಿ ತರಬೇತಿ ಪಡೆಯಲು ಭಾರತೀಯ ಪ್ರತಿನಿಧಿಯಾಗಿ ನಿಯುಕ್ತಿಗೊಂಡಿರುವ ಕೊಡಗಿನ ಅಧಿಕಾರಿ ಮುಕ್ಕಾಟಿರ ಸೂರಜ್ ಅಯ್ಯಪ್ಪ ಇದೀಗ ಮತ್ತೊಂದು ಸಾಧನೆ ತೋರಿದ್ದಾರೆ.
ಸೂರಜ್ ಅಯ್ಯಪ್ಪ ಅವರು ಅಮೇರಿಕಾದಲ್ಲಿ ಎಲ್ಲಾ ಜಂಟಿ ವೃತ್ತಿಪರ ಸೈನಿಕ ಶಿಕ್ಷಣ (ಜೆಪಿಎಂಇ) ಸಂಸ್ಥೆಗಳಿಗೆ ಆಯೋಜಿಸಿದ್ದ ರಾಷ್ಟಿçÃಯಮಟ್ಟದ ‘‘ಸೆಕ್ರಟರಿ ಆಫ್ ಡಿಫೆನ್ಸ್ ನ್ಯಾಷನಲ್ ಸ್ಟಾçö್ಯಟಜಿ’’ ಎಂಬ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ಮೂಲಕ ಅವರು ದೇಶಕ್ಕೆ ಕೀರ್ತಿ ತಂದಿದ್ದಾರೆ. ಈ ಸಾಧನೆಯ ಜೊತೆಗೆ ಇವರು ‘‘ಲೆಫ್ಟಿನೆಂಟ್ ಮೈಕೆಲ್ ಪಿ. ಮರ್ಫಿ ಕೌಂಟರ್ ಟೆರರಿಸಂ’’ ಹಾಗೂ ‘‘ನೇವಲ್ ಸ್ಟಾಫ್ ಕಾಲೇಜ್ ಅಂತರರಾಷ್ಟಿçÃಯ ಪ್ರಬಂಧ’’ ಎಂಬ ಎರಡು ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಇವರು ಈ ವರ್ಷದ ‘‘ಎಥಿಕ್ಸ್ ಮತ್ತು ಎಮರ್ಜಿಂಗ್ ಮಿಲಿಟರಿ ಟೆಕ್ನಾಲಜೀಸ್’’ ಪದವಿಯನ್ನೂ ಅಮೇರಿಕಾದ ನೇವಲ್ ವಾರ್ ಕಾಲೇಜಿನಿಂದ ಗಳಿಸಿದ ಏಕೈಕ ಅಂತರರಾಷ್ಟಿçÃಯ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ೨೦೧೦ ರಲ್ಲಿ ಭಾರತೀಯ ನೌಕಪಡೆಯನ್ನು ಖಡ್ಗ ಗೌರವ ಮತ್ತು ನೌಕಾಪಡೆಯ
(ಮೊದಲ ಪುಟದಿಂದ) ಮುಖ್ಯಸ್ಥರ ಚಿನ್ನದ ಪದಕದೊಂದಿಗೆ ಸೇರಿದ ಸೂರಜ್ ಅಯ್ಯಪ್ಪ ಅವರು, ಈಗಾಗಲೇ ಹಲವು ಪ್ರಮುಖ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ೨೦೧೬ರಲ್ಲಿ ಭಾರತದ ರಾಷ್ಟçಪತಿಯವರು ವಿಶಾಖಪಟ್ಟಣಕ್ಕೆ ಭೇಟಿ ನೀಡಿದಾಗ ಅವರಿಗೆ, ನೌಕಾಪಡೆಯ ಗೌರವ ರಕ್ಷೆಯನ್ನು ನೀಡುವ ತಂಡದ ಮುಖ್ಯಸ್ಥರಾಗಿ ಸೂರಜ್ ಅಯ್ಯಪ್ಪ ಗಮನ ಸೆಳೆದಿದ್ದರು. ಇದೀಗ ತಮ್ಮ ಪ್ರಮುಖ ಜವಾಬ್ದಾರಿಯಲ್ಲಿ ಅಮೇರಿಕದ ನಾವಲ್ ವಾರ್ ಕಾಲೇಜಿನಲ್ಲಿ ವಿಶ್ವದ ೫೨ ದೇಶಗಳ ನೌಕಾಪಡೆಯ ಅಧಿಕಾರಿಗಳೊಂದಿಗೆ ತಮ್ಮ ತರಬೇತಿಯನ್ನು ಪಡೆಯುತ್ತಿದ್ದಾರೆ.
ಮುಕ್ಕಾಟೀರ ನಿವೃತ್ತ ಲೆಪ್ಟಿನೆಂಟ್ ಕರ್ನಲ್ ಎಂ.ಎ.ಕಾರ್ಯಪ್ಪ (ಎಸ್.ಎಂ) ಮತ್ತು ಸರಸ್ವತಿ ಕಾರ್ಯಪ್ಪ (ತಾಮನೆ ಅಣ್ಣಳಮಾಡ) ಅವರ ಪುತ್ರರಾಗಿರುವ ಸೂರಜ್ ಅವರು, ತಮ್ಮ ವ್ಯಾಸಂಗವನ್ನು ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್ ಡೆಹರಡೂನ್ನಲ್ಲಿ ಮುಗಿಸಿ ಮುಂದೆ ನ್ಯಾವಲ್ ಆಕಾಡೆಮಿಯನ್ನು ಸೇರಿ ಅಕಾಡೆಮಿ ಕೆಡೆಟ್ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದರು.