ಮಡಿಕೇರಿ, ಜೂ. ೧೩: ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊಡಗು ಜಿಲ್ಲೆಯ ಮತ್ತೋರ್ವ ಅಧಿಕಾರಿ ಇದೀಗ ಬಡ್ತಿ ಹೊಂದಿದ್ದು, ಲೆಫ್ಟಿನೆಂಟ್ ಕರ್ನಲ್ ಆಗಿ ನಿಯುಕ್ತಿಗೊಂಡಿದ್ದಾರೆ. ಈ ತನಕ ಮೇಜರ್ ಆಗಿ ಅಧಿಕಾರದಲ್ಲಿದ್ದ ಇಟ್ಟೀರ ಗಗನ್ ತಿಮ್ಮಯ್ಯ ಇದೀಗ ಲೆಫ್ಟಿನೆಂಟ್ ಕರ್ನಲ್ ಆಗಿ ಆಯ್ಕೆಗೊಂಡಿದ್ದಾರೆ. ಇವರು ಗೋಣಿಕೊಪ್ಪಲುವಿನ ನಿವಾಸಿ, ಮಾಜಿ ಪ್ರಾಂಶುಪಾಲ ಹಾಗೂ ಅಖಿಲ ಕೊಡವ ಸಮಾಜದ ಕಾರ್ಯಾಧ್ಯಕ್ಷರಾಗಿರುವ ನಿವೃತ್ತ ಪ್ರೊಫೆಸರ್ ಇಟ್ಟೀರ ಬಿದ್ದಪ್ಪ ಮತ್ತು ಪ್ರೊ. ಕಮಲಾಕ್ಷಿ ದಂಪತಿಯ ಪುತ್ರ, ಪತ್ನಿ ಡಾ|| ನಮ್ರತ (ತಾಮನೆ ನೆಲ್ಲೀರ