ಮಡಿಕೇರಿ, ಜೂ. ೧೩: ವೀರಾಜಪೇಟೆ ನಗರ ಪೊಲೀಸರಿಂದ ಹಲ್ಲೆಗೊಳಗಾಗಿ ಮೃತಪಟ್ಟಿದ್ದ ರಾಯ್ ಡಿಸೋಜ ಅವರ ಮರಣೋತ್ತರ ಪರೀಕ್ಷೆ ತಾಲೂಕು ದಂಡಾಧಿಕಾರಿ ಸಮ್ಮುಖದಲ್ಲಿ ನಡೆಯಿತು.

ನಗರದ ಜಿಲ್ಲಾಸ್ಪತ್ರೆಯಲ್ಲಿ ಇಬ್ಬರು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದರು. ಪರೀಕ್ಷೆಯ ಸಂಪೂರ್ಣ ವೀಡಿಯೋ ಚಿತ್ರೀಕರಣ ಕೂಡ ಮಾಡಿಕೊಳ್ಳಲಾಗಿದ್ದು, ತಾ.೧೨ರ ರಾತ್ರಿ ೧೦.೪೫ಕ್ಕೆ ದೇಹವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ವೀರಾಜಪೇಟೆ ಕ್ರೆöÊಸ್ತರ ರುದ್ರಭೂಮಿಯಲ್ಲಿ ಕ್ರೆöÊಸ್ತ ಧರ್ಮದ ವಿಧಿವಿಧಾನದಂತೆ ತಾ. ೧೩ ರಂದು ಅಂತ್ಯಕ್ರಿಯೆ ನೆರವೇರಿತು.

ಕ್ರೆöÊಸ್ತ ಸಮಾಜದ ಪ್ರಮುಖರು, ಧರ್ಮಗುರುಗಳು, ಜನಪ್ರತಿನಿಧಿಗಳು ಅಂತ್ಯಸAಸ್ಕಾರದಲ್ಲಿ ಪಾಲ್ಗೊಂಡಿದ್ದರು. ರಾಯ್ ಡಿಸೋಜ ಸಾವಿಗೆ ಕಾರಣ ವಾದವರಿಗೆ ಸೂಕ್ತ ಶಿಕ್ಷೆಯಾಗಬೇಕೆಂದು ಈ ಸಂದರ್ಭ ಸಮಾಜದ ಪ್ರಮುಖರು ಒತ್ತಾಯಿಸಿದರು.

ಧರ್ಮಗುರು ರೆವರೆಂಡ್ ಫಾದರ್ ಮದಲೈ ಮುತ್ತು, ಕ್ರೆöÊಸ್ತ ಸೇವಾ ಸಮಾಜದ ಅಧ್ಯಕ್ಷ ಬೇಬಿ ಮ್ಯಾಥ್ಯು, ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಉಪಾಧ್ಯಕ್ಷ ಜಾನ್ಸನ್ ಪಿಂಟೋ, ಕಾರ್ಯದರ್ಶಿ ಮರ್ವಿನ್ ಲೋಬೋ, ಪ.ಪಂ ಸದಸ್ಯ ಬೆನ್ನಿ ಅಗಸ್ಟಿನ್, ಪೃಥ್ವಿನಾಥ್, ಮಹಮ್ಮದ್ ರಾಫಿ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಸಮಾಜದ ಪ್ರಮುಖರಾದ ಕೆ.ಜೆ. ಪೀಟರ್, ಗಿಲ್ಬರ್ಟ್ ಲೋಬೋ ಸೇರಿದಂತೆ ಇನ್ನಿತರರು ಇದ್ದರು.

ಹೆಚ್.ಡಿ.ಕೆ. ಸಾಂತ್ವನ

ವೀರಾಜಪೇಟೆಯ ರಾಯ್ ಡಿಸೋಜ ಅವರ ಮನೆಗೆ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್, ಪಕ್ಷದ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ಮತ್ತಿತರ ಪ್ರಮುಖರು ಭೇಟಿ ನೀಡಿ ಮೃತರ ತಾಯಿ ಮೆಟೆಲ್ಡಾ ಲೋಬೊ ಹಾಗೂ ಸಹೋದರ ರಾಬಿನ್ ಡಿಸೋಜಾ ಅವರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭ ಫೋನ್ ಮೂಲಕ ತಾಯಿಯೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಘಟನೆಗೆ ವಿಷಾದ ವ್ಯಕ್ತಪಡಿಸಿದರು. ಪ್ರಕರಣಕ್ಕೆ ಸಂಬAಧಿಸಿದAತೆ ಉನ್ನತ ಮಟ್ಟದಲ್ಲಿ ಚರ್ಚಿಸಿ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ

ನೀಡಿದರು. ಪೊಲೀಸರನ್ನು ಅಮಾನತು ಮಾಡಿದರೆ ಸಾಲದು ಹುದ್ದೆಯಿಂದ ವಜಾಗೊಳಿಸಬೇಕೆಂದು ಮೆಟಿಲ್ಡಾ ಒತ್ತಾಯಿಸಿದರು. ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಕುಮಾರಸ್ವಾಮಿ ಕುಟುಂಬಸ್ಥರಿಗೆ ತಿಳಿಸಿದರು. ಈ ಸಂದರ್ಭ ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಮತೀನ್, ತಾಲೂಕು ಅಧ್ಯಕ್ಷ ಮಂಜುನಾಥ್, ಯುವ ಜೆಡಿಎಸ್ ಕಾರ್ಯದರ್ಶಿ ಜಾಶಿರ್ ಸೇರಿದಂತೆ ಇನ್ನಿತರರು ಇದ್ದರು.

ಸೂಕ್ತ ತನಿಖೆಗೆ ಧರ್ಮಾಧ್ಯಕ್ಷರ ಒತ್ತಾಯ - ಮುಖ್ಯಮಂತ್ರಿಗೆ ಪತ್ರ

ರಾಯ್ ಡಿಸೋಜ ಸಾವಿನ ಪ್ರಕರಣಕ್ಕೆ ಸಂಬAಧಿಸಿದAತೆ ಸೂಕ್ತ ತನಿಖೆಯಾಗಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕೆಂದು ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ. ಕೆ.ಎ. ವಿಲಿಯಂ ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಪೊಲೀಸರ ಕಟ್ಟುಕಥೆ : ಎ.ಎಸ್.ಪೊನ್ನಣ್ಣ

ವೀರಾಜಪೇಟೆಯ ಮಾನಸಿಕ ಅಸ್ವಸ್ಥ ರಾಯ್ ಡಿಸೋಜ ಅವರ ಸಾವು ಪೊಲೀಸರ ಹಲ್ಲೆಯಿಂದಲೇ ನಡೆದಿದೆ ಎಂದು ಆರೋಪಿಸಿರುವ ಕೆಪಿಸಿಸಿ ವಕ್ತಾರ ಹಾಗೂ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ, ನ್ಯಾಯ ಸಿಗುವವರೆಗೂ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇತ್ತೀಚಿನ ದಿನಗಳಲ್ಲಿ ಕೊಡಗಿನಲ್ಲಿ ಪೊಲೀಸರಿಂದ ದೌರ್ಜನ್ಯ ಹೆಚ್ಚಾಗಿದೆ. ಈ ವಿಚಾರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದ್ದಾರೆ.

ಜನರನ್ನು ರಕ್ಷಣೆ ಮಾಡಬೇಕಾದ ಪೊಲೀಸರೇ ದೌರ್ಜನ್ಯ ನಡೆಸುತ್ತಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ. ರಾಯ್ ಡಿಸೋಜ ಸಾವಿನ ಪ್ರಕರಣದಲ್ಲಿ ನಿಷ್ಪಕ್ಷಪಾತÀ ತನಿಖೆ ನಡೆದು ಸತ್ಯ ಹೊರಬರಬೇಕು. ನ್ಯಾಯ ಸಿಗುವವರೆಗೂ ಹೋರಾಟ ನಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ತಮ್ಮ ರಕ್ಷಣೆಗೋಸ್ಕರ ಪೊಲೀಸರು ಕಟ್ಟುಕಥೆ ಕಟ್ಟಿದ್ದಾರೆ. ಕೆಲವು ಪೊಲೀಸರ ಅಮಾನತಿನಿಂದ ನ್ಯಾಯ ದೊರಕುವುದಿಲ್ಲ. ಹಿರಿಯ ಅಧಿಕಾರಿಗಳು ಕೂಡ ಇದಕ್ಕೆ ಜವಾಬ್ದಾರರು ಎಂದು ಅವರು ಟೀಕಿಸಿದ್ದಾರೆ. ಡಿ.ಜಿ-ಐ.ಜಿ.ಪಿ ಪ್ರವೀಣ್ ಸೂದ್ ಅವರೊಂದಿಗೆ ಪ್ರಕರಣದ ಕುರಿತು ಚರ್ಚೆ ಮಾಡಿದ್ದೇನೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ, ಯಾರನ್ನೂ ರಕ್ಷಿಸುವ ಪ್ರಯತ್ನ ನಡೆಯಲ್ಲ ಎಂಬ ಭರವಸೆ ನೀಡಿದ್ದಾರೆ ಎಂದು ಪೊನ್ನಣ್ಣ ತಿಳಿಸಿದ್ದಾರೆ.

ಹೋರಾಟಕ್ಕೆ ಬೆಂಬಲ

ಈಗ ಇಲಾಖೆಯು ಕೆಲವು ಪೊಲೀಸರನ್ನು ಅಮಾನತ್ತಿನಲ್ಲಿರಿಸಿದೆ. ಆದರೆ ನಿಷ್ಪಕ್ಷಪಾತ ತನಿಖೆ ನಡೆಸಿ ಅಮಾಯಕನೊಬ್ಬನ ಸಾವಿಗೆ ಕಾರಣರಾದ ಪೋಲಿಸರಿಗೆ ಸೂಕ್ತ ಶಿಕ್ಷೆ ಕೊಡಬೇಕೆಂದು ವೀರಾಜಪೇಟೆ ನಾಗರಿಕ ಸಮಿತಿ ಒತ್ತಾಯಿಸಿದೆ. ಪೊಲೀಸರ ವರ್ತನೆಯ ಮೇಲೆ ಹಿಡಿತವಿಡಬೇಕೆಂದೂ, ಅವರು ಜನಸಾಮಾನ್ಯರ ಮೇಲೆ ವನ್ಯ ಮೃಗಗಳ ಮಾದರಿಯಲ್ಲಿ ಹಾರಿ ಬೀಳದಂತೆ ನಿರ್ಬಂಧ ಹೇರಬೇಕೆಂದೂ ಅನಾಗರಿಕವಾಗಿ ವರ್ತಿಸುವ ಅವರಿಗೆ ನಾಗರಿಕತೆಯ ಪಾಠ ತಿಳಿಹೇಳಬೇಕೆಂದೂ ಹೇಳಿರುವ ನಾಗರಿಕ ಸಮಿತಿ ಸಂಚಾಲಕ ಇ.ರ. ದುರ್ಗಾಪ್ರಸಾದ್, ಪೊಲೀಸ್ ದೌರ್ಜನ್ಯದ ವಿರುದ್ಧ ನಡೆಯುವ ಎಲ್ಲಾ ಹೋರಾಟಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.