ಮಡಿಕೇರಿ: ಗ್ರೀನ್ ಸಿಟಿ ಫೋರಂ ವತಿಯಿಂದ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ೨೦ ಪಿಗ್ಮಿ ಸಂಗ್ರಹಗಾರರಿಗೆ ಒಂದು ತಿಂಗಳಿಗೆ ಅಗತ್ಯವಾದ ದಿನಸಿ ಸಾಮಗ್ರಿ ವಿತರಿಸಲಾಯಿತು.

ಗ್ರೀನ್ ಸಿಟಿ ಫೋರಂ ಹಲವಾರು ಸಮಾಜಮುಖಿ ಕೆಲಸ ಮಾಡುತ್ತಿದೆ. ಇದುವರೆಗೂ ಗುರುತಿಸದಿರುವವರಿಗೆ ನಮ್ಮಿಂದ ಸಣ್ಣ ಸಹಾಯ ಮಾಡಲು ನಿರ್ಧರಿಸಿರುವುದಾಗಿ ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಪಿ. ಕೃಷ್ಣಮೂರ್ತಿ ಹೇಳಿದರು.

ನಗರಸಭೆ ಮತ್ತು ಗ್ರೀನ್ ಸಿಟಿ ಫೋರಂ ವತಿಯಿಂದ ನಗರಸಭೆಯಲ್ಲಿ ಅಭಯವಾಣಿ ಆರಂಭಿಸಲಾಗಿದೆ. ಭುವನಂ ಫೌಂಡೇಶನ್ ಸಹಕಾರದೊಂದಿಗೆ ಅಭಯವಾಣಿಗೆ ಕೋರಿಕೆ ಬಂದ ೨೦೦ ಜನರಿಗೆ ಕಿಟ್ ವಿತರಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಎಸ್.ವಿ. ರಾಮದಾಸ್, ಗ್ರೀನ್ ಸಿಟಿ ಫೋರಂ ಸ್ಥಾಪಕಾಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ ಹೇಳಿದರು.

ಪಿಗ್ಮಿ ಸಂಗ್ರಹಗಾರರ ಸಂಘದ ಅಧ್ಯಕ್ಷ ಎಂ.ಡಿ. ನಾಣಯ್ಯ, ಗ್ರೀನ್ ಸಿಟಿ ಫೋರಂ ಮಾಜಿ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ನಿರ್ದೇಶಕರಾದ ಮೋಂತಿ ಗಣೇಶ್, ಸವಿತಾ ಭಟ್, ಪೂಳಕಂಡ ರಾಜೇಶ್, ವ್ಯಾಂಡಮ್ ದಾಮೋದರ್, ಅಜ್ಜಮಾಡ ರಮೇಶ್ ಕುಟ್ಟಪ್ಪ ಇದ್ದರು.ಸೋಮವಾರಪೇಟೆ: ಇಲ್ಲಿನ ವಕೀಲರು ಹಾಗೂ ನೋಟರಿ ಈಶ್ವರಚಂದ್ರ ಸಾಗರ್ ಅವರು ಸೋಮವಾರಪೇಟೆ ತಾಲೂಕಿನ ಪತ್ರಕರ್ತರಿಗೆ ಫೇಸ್‌ಶೀಲ್ಡ್ನ್ನು ಕೊಡುಗೆಯಾಗಿ ನೀಡಿದರು.

ಕೊರೊನಾ ಸಮಯದಲ್ಲೂ ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರು ತಮ್ಮ ಆರೋಗ್ಯ ರಕ್ಷಣೆಯತ್ತಲೂ ಹೆಚ್ಚಿನ ಗಮನ ಹರಿಸಬೇಕೆಂದು ಕಿವಿಮಾತು ನುಡಿದರು.

ವಕೀಲ ಪವನ್ ಸಾಗರ್ ಅವರು ೫೦ ಫೇಸ್‌ಶೀಲ್ಡ್ಗಳನ್ನು ಸಂಘಕ್ಕೆ ಹಸ್ತಾಂತರಿಸಿದರು. ಈ ಸಂದರ್ಭ ಪತ್ರಕರ್ತರ ಒಕ್ಕೂಟದ ರಾಷ್ಟಿçÃಯ ಮಂಡಳಿ ಸದಸ್ಯ ಎಸ್.ಎ. ಮುರುಳೀಧರ್, ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ್ ಹಾನಗಲ್, ನಿರ್ದೇಶಕ ವಿಶ್ವ ಕುಂಬೂರು ಅವರುಗಳು ಹಾಜರಿದ್ದರು.ಪೊನ್ನಂಪೇಟೆ: ಕಣ್ಣಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಶೇಷಚೇತನರಿಗೆ ಮತ್ತು ಕೋವಿಡ್ ಕಾಲದಲ್ಲಿ ಸಂಕಷ್ಟ ಎದುರಿಸುತ್ತಿರುವವರಿಗೆ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಅವರು ಪ್ರಾಯೋಜಿಸಿರುವ ಆಹಾರ ಸಾಮಗ್ರಿಗಳನ್ನು ಒಳಗೊಂಡ ಕಿಟ್‌ಗಳನ್ನು ಅಲ್ಲಿನ ಚಾಮುಂಡಿ ಪೈಸಾರಿಯ ವಿಶೇಷಚೇತನ ಅರ್ಹ ಫಲಾನುಭವಿಗಳಿಗೆ ಕೆಪಿಸಿಸಿ ಕಿಸಾನ್ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ನೇತೃತ್ವದ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳ ತಂಡ ಹಸ್ತಾಂತರಿಸಿತು.

ಕಣ್ಣAಗಾಲ ಗ್ರಾ.ಪಂ. ಅಧ್ಯಕ್ಷ ಟಿ.ವಿ. ಗಣೇಶ, ಉಪಾಧ್ಯಕ್ಷೆ ಗ್ರೀಷ್ಮ, ಸದಸ್ಯರಾದ ವಿ.ಪಿ. ಜೀವನ್, ವಿ.ಪಿ. ಕಲ್ಪೇಶ್, ಶಾಂತಿ, ರಜನಿ ಕುಟ್ಟಪ್ಪ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.ಪೊನ್ನಂಪೇಟೆ: ಕಣ್ಣಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಶೇಷಚೇತನರಿಗೆ ಮತ್ತು ಕೋವಿಡ್ ಕಾಲದಲ್ಲಿ ಸಂಕಷ್ಟ ಎದುರಿಸುತ್ತಿರುವವರಿಗೆ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಅವರು ಪ್ರಾಯೋಜಿಸಿರುವ ಆಹಾರ ಸಾಮಗ್ರಿಗಳನ್ನು ಒಳಗೊಂಡ ಕಿಟ್‌ಗಳನ್ನು ಅಲ್ಲಿನ ಚಾಮುಂಡಿ ಪೈಸಾರಿಯ ವಿಶೇಷಚೇತನ ಅರ್ಹ ಫಲಾನುಭವಿಗಳಿಗೆ ಕೆಪಿಸಿಸಿ ಕಿಸಾನ್ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ನೇತೃತ್ವದ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳ ತಂಡ ಹಸ್ತಾಂತರಿಸಿತು.

ಕಣ್ಣAಗಾಲ ಗ್ರಾ.ಪಂ. ಅಧ್ಯಕ್ಷ ಟಿ.ವಿ. ಗಣೇಶ, ಉಪಾಧ್ಯಕ್ಷೆ ಗ್ರೀಷ್ಮ, ಸದಸ್ಯರಾದ ವಿ.ಪಿ. ಜೀವನ್, ವಿ.ಪಿ. ಕಲ್ಪೇಶ್, ಶಾಂತಿ, ರಜನಿ ಕುಟ್ಟಪ್ಪ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.ಸುಂಟಿಕೊಪ್ಪ: ಕೆದಕಲ್ ಗ್ರಾಮ ಪಂಚಾಯಿತಿ ವತಿಯಿಂದ ಕೆದಕಲ್ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುವ ಅಂಗನವಾಡಿ ಕಾರ್ಯಕರ್ತೆಯರು, ಶುಶ್ರೂಷಕಿಯರು, ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ಟನ್ನು ಕೆದಕಲ್ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ವಿಶ್ಮಿತ ಅವರು ಪಂಚಾಯಿತಿ ಆವರಣದಲ್ಲಿ ವಿತರಿಸಿದರು.

ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್, ಉಪಾಧ್ಯಕ್ಷ ಸಂಜು ಪೊನ್ನಪ್ಪ, ಸದಸ್ಯರಾದ ಪಾರ್ವತಿ ಸೋಮಯ್ಯ, ಹೆಚ್. ಆನಂದ, ಬಿದ್ದಪ್ಪ ಹಾಗೂ ಗ್ರಾಮಸ್ಥರಾದ ಗ್ಯಾಬ್ರಿಯಲ್ ಡಿಸೋಜ ಸೇರಿದಂತೆ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.ಚೆಟ್ಟಳ್ಳಿ ಗ್ರಾಮ ಪಂಚಾಯಿತಿ

ಚೆಟ್ಟಳ್ಳಿ: ಕಾಫಿ ಬೋರ್ಡ್ ವಾರ್ಡ್ನಲ್ಲಿ ಕೋವಿಡ್‌ನಿಂದ ಹೋಂ ಕ್ವಾರೆಂಟೈನ್‌ನಲ್ಲಿದ್ದ ನಾಗರಾಜು ಅವರಿಗೆ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಪಡಿತರ ಕಿಟ್ ಹಾಗೂ ಮಾಸ್ಕ್, ಸ್ಯಾನಿಟೈಸರ್ ಅನ್ನು ನೀಡಲಾಯಿತು. ಈ ಸಂದರ್ಭ ಅಧ್ಯಕ್ಷ ಮುತ್ತಪ್ಪ, ವಾರ್ಡಿನ ಸದಸ್ಯರುಗಳಾದ ಪೇರಿಯನ ನಂದಿನಿ, ಬಲ್ಲಾರಂಡ ಕಂಠಿ ಕಾರ್ಯಪ್ಪ ಹಾಗೂ ಸ್ಥಳೀಯರಾದ ಪೇರಿಯನ ಉದಯ ಹಾಜರಿದ್ದರು.ಮಡಿಕೇರಿ: ಕೆ.ಪಿ.ಸಿ.ಸಿ. ಪ್ರಮುಖ ಎ.ಎಸ್. ಪೊನ್ನಣ್ಣ ಅವರು ನೀಡಿರುವ ಆಹಾರದ ಕಿಟ್ ಮತ್ತು ಆಕ್ಸಿಜನ್ ಕಾನ್ಸನ್‌ಟ್ರೇಟರ್‌ನ್ನು ಕಾಂಗ್ರೆಸ್ ಪ್ರಮುಖರು ಸಂಪಾಜೆಯಲ್ಲಿ ವಿತರಿಸಿದರು.

ಪೊನ್ನಣ್ಣ ಅವರ ಪರವಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು ಹಾಗೂ ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಹನೀಫ್ ಸಂಪಾಜೆ ಅವರುಗಳು ಸಂಪಾಜೆ ಚೆಕ್‌ಪೋಸ್ಟ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಆಹಾರದ ಕಿಟ್‌ಗಳನ್ನು ವಿತರಿಸಿದರು.

ನಂತರ ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ನ್ನು ವೈದ್ಯಾಧಿಕಾರಿ, ಆರೋಗ್ಯಾಧಿಕಾರಿ ಹಾಗೂ ಸಿಬ್ಬಂದಿಗಳ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.ಕುಶಾಲನಗರ: ಕುಶಾಲನಗರ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಸಂಘದ ಕೊರೊನಾ ಸೋಂಕಿತ ಸದಸ್ಯರ ಕುಟುಂಬಗಳಿಗೆ ಪೌಷ್ಟಿಕಾಂಶ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು. ಸಂಘದ ೧೭ನೇ ವಾರ್ಷಿಕೋತ್ಸವದ ಅಂಗವಾಗಿ ಕುಶಾಲನಗರ ಸರಕಾರಿ ಆಸ್ಪತ್ರೆಯ ಡಿ ಗ್ರೂಪ್ ನೌಕರರಿಗೆ ಅಗತ್ಯ ವಸ್ತುಗಳ ಕಿಟ್‌ಗಳನ್ನು ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ವಿತರಿಸಿದರು.

ಈ ಸಂದರ್ಭ ಸಂಘದ ಆಂತರಿಕ ಲೆಕ್ಕ ಪರಿಶೋಧಕ ಚಂದ್ರಶೇಖರ್, ವ್ಯವಸ್ಥಾಪಕ ಶ್ರೀಜೇಶ್, ಆರ್. ರಾಜು ಮತ್ತು ಸಿಬ್ಬಂದಿಗಳು ಇದ್ದರು.