ಅಲ್ಲಿಂದ ಅದೇ ದಾರಿಯಲ್ಲಿ ಕೇಶ ಮುಂಡನ, ಗಡ್ಡ-ಮೀಸೆ ಬೋಳಿಸಿ ಮತ್ತೊಮ್ಮೆ ಬಂದು ಸ್ನಾನ ಮಾಡಬೇಕು. ಆ ಬಳಿಕ ಪ್ರೇತಾರಣ್ಯದಲ್ಲಿ ನಿಂತು ಪಿತೃ ದೇವತೆಗಳಿಗೆ, ಯೋಗ್ಯ ಪುರೋಹಿತರಿಗೆ ಶಕ್ತಾö್ಯನುಸಾರ ದಾನ-ದಕ್ಷಿಣೆ ನೀಡಬೇಕು. ತೀರ್ಥ ಕ್ಷೇತ್ರದಲ್ಲಿ ಪಿಂಡ ಪ್ರದಾನವನ್ನು ಮುಖ್ಯವಾಗಿ ಮಾಡಲೇಬೇಕು. ಯಾರು ಇದನ್ನು ಮಾಡುವುದಿಲ್ಲವೊ ಅಂತವರಿಗೂ ಅವರ ಪಿತೃಗಳಿಗೂ ನರಕಯಾತನೆ ತಪ್ಪಿದ್ದಲ್ಲ. ಪುಣ್ಯ ಪದವಿಯಲ್ಲಿ ಇರುವಂತಹ ಪಿತೃಗಳು ಕೂಡ ತನ್ನ ರಕ್ತ ಸಂಬAಧಿಗಳು ಪುಣ್ಯ ಕ್ಷೇತ್ರದಲ್ಲಿ ಮಾಡುವ ಶ್ರಾದ್ಧಕ್ಕಾಗಿ ಸಂತಸ ಪಡುವಾಗ ನರಕದಲ್ಲಿರುವವರಿಗೆ ಎಷ್ಟೊಂದು ಸಂತೋಷವಾಗಬಹುದು ಎಂಬುದನ್ನು ಯೋಚಿಸಿ ನೋಡು.

ಯಮುನೆ: ಮಹಾದೇವಿಯೇ ಕೇಳು. ಅವರವರ ಪಾಪ ಪರಿಹಾರಕ್ಕೆ ಭೋಗ ಭಾಗ್ಯಕ್ಕಾಗಿ ತೀರ್ಥಸ್ನಾನ ಮಾಡುವುದಲ್ಲದೆ ಪಿತೃಗಳಿಗೆ ಪಿಂಡ ಪ್ರದಾನ ಮಾಡಬೇಕೆಂದೇನಿದೆ ಅಗತ್ಯ ? ಈ ಪಿಂಡ ಪ್ರದಾನವನ್ನು ಯಾವ ರೀತಿ ಮಾಡಬೇಕು. ಒಂದು ವೇಳೆ ಮಾಡದೇ ಹೋದಲ್ಲಿ ತೀರ್ಥ ಸ್ನಾನದ ಫಲ ಇಲ್ಲವೆ ದಯವಿಟ್ಟು ತಿಳಿಸು.

ಗಂಗೆ: ಯಮುನೆ, ಈ ವಿಷಯದಲ್ಲಿ ನಿನಗೆ ಸಂದೇಹ ಬೇಡ ತೀರ್ಥ ಕ್ಷೇತ್ರದಲ್ಲಿ ಆಮಶ್ರಾದ್ಧ, ಹಿರಣ್ಯ ಶ್ರಾದ್ಧ, ಭಕ್ತಿ ಶ್ರಾದ್ಧ ಎಂಬ ಅನೇಕ ಶ್ರಾದ್ಧಗಳಿವೆ. ತಂದೆ ಇಲ್ಲದೆ ಮಕ್ಕಳಾಗದು, ಮಕ್ಕಳಿಂದಲೇ ತಂದೆಗೆ ಸದ್ಗತಿ ದೊರೆಯಬೇಕು. ಮಹಾಕ್ಷೇತ್ರದಲ್ಲಿ ತಾನು ಸ್ಥಾನ ಮಾಡಲು ತನ್ನ ತಂದೆಯನ್ನು ನೆನೆದು ಪಿಂಡ ಪ್ರದಾನ ಮಾಡ ಬೇಕಾದುದು ಧರ್ಮ-ತರ್ಪಣದಲ್ಲೂ, ದಾನದಲ್ಲೂ ದೇವತೆಗಳು ಎಷ್ಟು ಸಂತೃಪ್ತರಾಗುವರೊ ಅದೇ ರೀತಿ ಪಿಂಡ ಪ್ರದಾನದಲ್ಲಿ ಪಿತೃಗಳಿಗೂ ತೃಪ್ತಿ ಆಗಲಿದೆ. ಮುಖ್ಯವಾಗಿ ಯಾರು ಪಿಂಡ ಪ್ರದಾನ ಮಾಡದೇ ಹೋಗುವನೊ ಅಂತವನಿಗೆ ತೀರ್ಥ ಸ್ನಾನ ಫಲ ಸಂಪೂರ್ಣ ಆಯಿತು ಎಂದು ನಂಬಬೇಡ.

ಯಮುನೆ: ದೇವಿಯೇ ಒಳ್ಳೆಯ ಮಾತುಗಳನ್ನು ಹೇಳಿದೆ. ಆಗಲಿ ಸಂಗಮದಲ್ಲಿ ಸ್ನಾನ ಮತ್ತು ಪಿಂಡ ಪ್ರದಾನ ಆದ ಬಳಿಕ ಏನೇನು ಮಾಡಬೇಕು ?

ಗಂಗೆ: ಪಿಂಡ ಪ್ರದಾನ ಮಾಡಿ ಪುರೋಹಿತನ ಮನ ಸಂತೋಷ ಗೊಳಿಸಿ, ಮಡಿ ಉಟ್ಟು, ಅಲ್ಲಿ ಅಶ್ವಥ ನಾರಾಯಣನಿಗೆ ಪ್ರದಕ್ಷಿಣೆ ಬಂದು, ಅಗಸ್ತೆö್ಯÃಶ್ವರನಿಗೆ ನಮಿಸಿ, ತ್ರಿಮೂರ್ತಿ ಸ್ಥಾನಕ್ಕೆ ಬಂದು ಭಗಂಡೇಶ್ವರನಿಗೂ, ಸುಬ್ರಹ್ಮಣ್ಯನಿಗೂ, ವಿಷ್ಣುವಿಗೂ, ಗಣಪತಿಗೂ ಶಕ್ತಾö್ಯನುಸಾರ ಪೂಜೆ-ಪುನಸ್ಕಾರ ಮಾಡಿ ಮೂಲ ಕಾವೇರಿ ಸ್ಥಾನಕ್ಕೆ ತೆರಳಲು ಅಪ್ಪಣೆ ಬೇಡಿಕೊಂಡು ಅಲ್ಲಿಂದ ನಾರಾಯಣ ಸ್ಮರಣೆ ಮಾಡುತ್ತಾ ಮೂಲ ಕಾವೇರಿ ಪುಣ್ಯಸ್ಥಳ ಇರುವಂತಹ ಬ್ರಹ್ಮಗಿರಿಗೆ ಹೋಗಬೇಕು. (ತಲಕಾವೇರಿಗೆ) ಅಲ್ಲಿ ಮಹಾದೇವಿಗೆ ನಮಿಸಿ ತೀರ್ಥ ಸ್ನಾನ ಮಾಡಿ ಪುರೋಹಿತರಿಂದ ದೇವಿಯ ಪಾರಾಯಣ ಆಲಿಸಬೇಕು. ಅಲ್ಲಿಂದ ಅದೇ ದಾರಿಯಲ್ಲಿ ಕೇಶ ಮುಂಡನ, ಗಡ್ಡ-ಮೀಸೆ ಬೋಳಿಸಿ ಮತ್ತೊಮ್ಮೆ ಬಂದು ಸ್ನಾನ ಮಾಡಬೇಕು. ಆ ಬಳಿಕ ಪ್ರೇತಾರಣ್ಯದಲ್ಲಿ ನಿಂತು ಪಿತೃ ದೇವತೆಗಳಿಗೆ, ಯೋಗ್ಯ ಪುರೋಹಿತರಿಗೆ ಶಕ್ತಾö್ಯನುಸಾರ ದಾನ-ದಕ್ಷಿಣೆ ನೀಡಬೇಕು. ತೀರ್ಥ ಕ್ಷೇತ್ರದಲ್ಲಿ ಪಿಂಡ ಪ್ರದಾನವನ್ನು ಮುಖ್ಯವಾಗಿ ಮಾಡಲೇಬೇಕು. ಯಾರು ಇದನ್ನು ಮಾಡುವುದಿಲ್ಲವೊ ಅಂತವರಿಗೂ ಅವರ ಪಿತೃಗಳಿಗೂ ನರಕಯಾತನೆ ತಪ್ಪಿದ್ದಲ್ಲ. ಪುಣ್ಯ ಪದವಿಯಲ್ಲಿ ಇರುವಂತಹ ಪಿತೃಗಳು ಕೂಡ ತನ್ನ ರಕ್ತ ಸಂಬAಧಿಗಳು ಪುಣ್ಯ ಕ್ಷೇತ್ರದಲ್ಲಿ ಮಾಡುವ ಶ್ರಾದ್ಧಕ್ಕಾಗಿ ಸಂತಸ ಪಡುವಾಗ ನರಕದಲ್ಲಿರುವವರಿಗೆ ಎಷ್ಟೊಂದು ಸಂತೋಷವಾಗಬಹುದು ಎಂಬುದನ್ನು ಯೋಚಿಸಿ ನೋಡು.

ಯಮುನೆ: ಮಹಾದೇವಿಯೇ ಕೇಳು. ಅವರವರ ಪಾಪ ಪರಿಹಾರಕ್ಕೆ ಭೋಗ ಭಾಗ್ಯಕ್ಕಾಗಿ ತೀರ್ಥಸ್ನಾನ ಮಾಡುವುದಲ್ಲದೆ ಪಿತೃಗಳಿಗೆ ಪಿಂಡ ಪ್ರದಾನ ಮಾಡಬೇಕೆಂದೇನಿದೆ ಅಗತ್ಯ ? ಈ ಪಿಂಡ ಪ್ರದಾನವನ್ನು ಯಾವ ರೀತಿ ಮಾಡಬೇಕು. ಒಂದು ವೇಳೆ ಮಾಡದೇ ಹೋದಲ್ಲಿ ತೀರ್ಥ ಸ್ನಾನದ ಫಲ ಇಲ್ಲವೆ ದಯವಿಟ್ಟು ತಿಳಿಸು.

ಗಂಗೆ: ಯಮುನೆ, ಈ ವಿಷಯದಲ್ಲಿ ನಿನಗೆ ಸಂದೇಹ ಬೇಡ ತೀರ್ಥ ಕ್ಷೇತ್ರದಲ್ಲಿ ಆಮಶ್ರಾದ್ಧ, ಹಿರಣ್ಯ ಶ್ರಾದ್ಧ, ಭಕ್ತಿ ಶ್ರಾದ್ಧ ಎಂಬ ಅನೇಕ ಶ್ರಾದ್ಧಗಳಿವೆ. ತಂದೆ ಇಲ್ಲದೆ ಮಕ್ಕಳಾಗದು, ಮಕ್ಕಳಿಂದಲೇ ತಂದೆಗೆ ಸದ್ಗತಿ ದೊರೆಯಬೇಕು. ಮಹಾಕ್ಷೇತ್ರದಲ್ಲಿ ತಾನು ಸ್ಥಾನ ಮಾಡಲು ತನ್ನ ತಂದೆಯನ್ನು ನೆನೆದು ಪಿಂಡ ಪ್ರದಾನ ಮಾಡ ಬೇಕಾದುದು ಧರ್ಮ-ತರ್ಪಣದಲ್ಲೂ, ದಾನದಲ್ಲೂ ದೇವತೆಗಳು ಎಷ್ಟು ಸಂತೃಪ್ತರಾಗುವರೊ ಅದೇ ರೀತಿ ಪಿಂಡ ಪ್ರದಾನದಲ್ಲಿ ಪಿತೃಗಳಿಗೂ ತೃಪ್ತಿ ಆಗಲಿದೆ. ಮುಖ್ಯವಾಗಿ ಯಾರು ಪಿಂಡ ಪ್ರದಾನ ಮಾಡದೇ ಹೋಗುವನೊ ಅಂತವನಿಗೆ ತೀರ್ಥ ಸ್ನಾನ ಫಲ ಸಂಪೂರ್ಣ ಆಯಿತು ಎಂದು ನಂಬಬೇಡ.

ಯಮುನೆ: ದೇವಿಯೇ ಒಳ್ಳೆಯ ಮಾತುಗಳನ್ನು ಹೇಳಿದೆ. ಆಗಲಿ ಸಂಗಮದಲ್ಲಿ ಸ್ನಾನ ಮತ್ತು ಪಿಂಡ ಪ್ರದಾನ ಆದ ಬಳಿಕ ಏನೇನು ಮಾಡಬೇಕು ?

ಗಂಗೆ: ಪಿಂಡ ಪ್ರದಾನ ಮಾಡಿ ಪುರೋಹಿತನ ಮನ ಸಂತೋಷ ಗೊಳಿಸಿ, ಮಡಿ ಉಟ್ಟು, ಅಲ್ಲಿ ಅಶ್ವಥ ನಾರಾಯಣನಿಗೆ ಪ್ರದಕ್ಷಿಣೆ ಬಂದು, ಅಗಸ್ತೆö್ಯÃಶ್ವರನಿಗೆ ನಮಿಸಿ, ತ್ರಿಮೂರ್ತಿ ಸ್ಥಾನಕ್ಕೆ ಬಂದು ಭಗಂಡೇಶ್ವರನಿಗೂ, ಸುಬ್ರಹ್ಮಣ್ಯನಿಗೂ, ವಿಷ್ಣುವಿಗೂ, ಗಣಪತಿಗೂ ಶಕ್ತಾö್ಯನುಸಾರ ಪೂಜೆ-ಪುನಸ್ಕಾರ ಮಾಡಿ ಮೂಲ ಕಾವೇರಿ ಸ್ಥಾನಕ್ಕೆ ತೆರಳಲು ಅಪ್ಪಣೆ ಬೇಡಿಕೊಂಡು ಅಲ್ಲಿಂದ ನಾರಾಯಣ ಸ್ಮರಣೆ ಮಾಡುತ್ತಾ ಮೂಲ ಕಾವೇರಿ ಪುಣ್ಯಸ್ಥಳ ಇರುವಂತಹ ಬ್ರಹ್ಮಗಿರಿಗೆ ಹೋಗಬೇಕು. (ತಲಕಾವೇರಿಗೆ) ಅಲ್ಲಿ ಮಹಾದೇವಿಗೆ ನಮಿಸಿ ತೀರ್ಥ ಸ್ನಾನ ಮಾಡಿ ಪುರೋಹಿತರಿಂದ ದೇವಿಯ ಪಾರಾಯಣ ಆಲಿಸಬೇಕು. ಮಹಾದೇವಿಯಾದಂತಹ ಕಾವೇರಿಯೆ ಸ್ನಾನದ ವಿಧಾನ ಹೇಳಿ ಕೊಟ್ಟ ನನಗೂ ಆಲಿಸಿದ ಈ ಯಮುನೆಗೂ ಒಳಿತನ್ನು ಮಾಡು ಎಂದು ಬೇಡಿಕೊಳ್ಳುತ್ತೇನೆ.

ಯಮುನೆ: ಗಂಗಾ ದೇವಿಯೇ ನಿನ್ನ ದಯೆಯಿಂದ ಶ್ರೀ ಕಾವೇರಿ ಉದ್ಭವ ತೀರ್ಥ ಮಹಿಮೆ, ಸ್ನಾನದ ವಿಧಿಗಳನ್ನು ಅರಿತುಕೊಂಡ ನಾನೇ ಭಾಗ್ಯವತಿ. ಆದರೆ ಮಹಾದೇವಿಯಾದಂತಹ ಕಾವೇರಿಯನ್ನು ಪ್ರತ್ಯಕ್ಷ ಕಂಡೂ, ತೀರ್ಥ ಮಿಂದು ಬರಬೇಕೆಂದು ಬಹಳ ಆಸೆ ಇರುವುದರಿಂದ ದಯವಿಟ್ಟು ನಿನ್ನ ಭಕ್ತೆಯಾದ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗು ಎಂದು ಬೇಡಿಕೊಳ್ಳುತ್ತೇನೆ.

ಗಂಗೆ: ಯಮುನೆ, ನಿನ್ನ ಮಹಾದಾಸೆಗೆ ವಿಘ್ನ ಮಾಡಲಾರೆ, ಆದುದರಿಂದ ಬೇಗನೆ ಹೋಗಿ ಅವಳನ್ನು ಭೇಟಿಯಾಗಿ ಬರೋಣ ಬಾ.

ಯಮುನೆ : ಆಗಲಿ ಹೋಗೋಣ

ಶ್ರೀ ಕಾವೇರಿ ಅಳತಿತಿಪ್ಪ:

ಗಂಗೆ: (ಬಂದಿತ್) ಮಹದೇವಿಯೇ ನಮಸ್ಕಾರ

ಯಮುನೆ: (ಬಂದಿತ್) ಕಾವೇರಿ ಮಹದೇವಿಯೆ ನಮಸ್ಕಾರ

ಕಂದ|| ಜಗಕ್Ã ಬಲ್ಲಿಯ ಭೂಷಿಣಿ| ಜಗಕು ಲೋಕ ಲೋಕಕ್ಕು ಮಹಾ ತೀರ್ಥ ರೂಪಿಣಿ|| ಜಗವೇ ಪೊಲತುವ ಅವತಾರಿಣಿ| ಜಗಜ್ಜನನೀ ಕಾವೇರಿಯೆ ಕಲಿನಾಶಿಯೆ||

ಆದಿ ಮಾಯೆಯೆ, ಲಕ್ಷಿö್ಮಯೆ, ಪಾರ್ವತಿಯೆ, ಸರಸ್ವತಿಯೆ, ಲೋಪಾಮುದ್ರೆಯೆ, ಪಾಪನಾಶಿನಿಯೆ, ತೀರ್ಥರೂಪಿಯೆ, ಮಹಾಕಾವೇರಿಯೆ ಎನ್ನ ಕಾಪಾಡ್, ಮಹಲಕ್ಷಿö್ಮಯಾನಂತ ನ್Ãಡ ಕೇಳಿ ಕೀರ್ತಿ ಮಹದೇವಿಯಾನ ಈ ಗಂಗೆನಗುAಡ್ ಅರಿಂಜಿತ್ ನ್Ãಡ ದರುಶÀನಕ್ ಬಂದದಾಚಿ, ನಿನ್ನ ಕಂಡಿತ್ ದುಂಬ ಸಂತೋಷ ಆಚಿ. ಎಕ್ಕಲು ಎನ್ನ ದಯತ್ ಕಾಪಾಡ್.

ಮೂಲ ಕಾವೇರಿ

ಗಂಗೆ: ಮಹಾದೇವಿಯೇ ನಮಸ್ಕಾರ

ಯಮುನೆ: ಕಾವೇರಿ ಮಹಾದೇವಿಯೇ ನಮಸ್ಕಾರ.

ಆದಿಮಾಯೆಯೇ, ಲಕ್ಷಿö್ಮಯೆ, ಪಾರ್ವತಿಯೆ, ಸರಸ್ವತಿಯೆ, ಲೋಪಾಮುದ್ರೆಯೆ, ಪಾಪನಾಶಿನಿಯೆ, ತೀರ್ಥರೂಪಿಣಿಯೆ, ಮಹಾಕಾವೇರಿಯೆ ನನ್ನ ಕಾಪಾಡು, ಮಹಾಲಕ್ಷಿö್ಮಯಾದಂತಹ ನಿನ್ನ ಹಿರಿಮೆ, ಕೀರ್ತಿ ಮಹಾದೇವಿಯಾದ ಈ ಗಂಗೆಯಿAದ ತಿಳಿದು ನಿನ್ನ ದರ್ಶನಕ್ಕೆ ಬಂದುದಾಯಿತು. ನಿನ್ನ ಕಂಡು ಬಹಳ ಸಂತೋಷವಾಯಿತು. ಸದಾ ನನ್ನ ಕಾಪಾಡು.

ಕಾವೇರಿ: ಯಮುನೆ ನೀನು ಭಕ್ತಿಯಿಂದ ನನ್ನ ನಮಿಸಿದ್ದು ನೋಡಿ ಬಹಳ ಸಂತೋಷವಾಯಿತು. ಗಂಗಾದೇವಿಯ ಮೇಲೆ ನನಗೆಷ್ಟು ಪ್ರೀತಿಯಿದೆಯೋ ಅಷ್ಟೇ ಪ್ರೀತಿ ಯಮಪುತ್ರಿಯಾದ ನಿನ್ನ ಮೇಲೂ ಇದೆ ಎಂಬುದನ್ನು ನಂಬು ನಿಮಗಿಬ್ಬರಿಗೂ ಒಳಿತಾಗಲಿ. (ಮುಂದುವರಿಯುವುದು)

-(ಕನ್ನಡ ಅನುವಾದ) ಎಂ. ಇ. ಮಹಮದ್