ಮಡಿಕೇರಿ, ಜೂ. ೧೨: ಕೊಡವ ನ್ಯಾಷನಲ್ ಕೌನ್ಸಿಲ್ (ಸಿ.ಎನ್.ಸಿ.) ಸಂಘಟನೆಯ ಪ್ರಯತ್ನದ ಫಲವಾಗಿ ಈ ಹಿಂದೆ ಆರಂಭಗೊAಡು ಬಳಿಕ ಸ್ಥಗಿತವಾಗಿರುವ ಕೊಡವ ಕುಲಶಾಸ್ತç ಅಧ್ಯಯನ ವಿಚಾರಕ್ಕೆ ಸಂಬAಧಿಸಿದAತೆ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಟಿ.ಟಿ. ಬಸವನಗೌಡ ಅವರನ್ನು ಬದಲಿಸುವಂತೆ ಸಿ.ಎನ್.ಸಿ. ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ಈ ಅರ್ಜಿಯ ವಿಚಾರಣೆಯನ್ನು ರಾಜ್ಯ ಉಚ್ಚ ನ್ಯಾಯಾಲಯ ಕೈಗೆತ್ತಿಕೊಂಡಿದ್ದು, ತಾ. ೯ರಂದು ವಿಚಾರಣೆ ನಡೆಸಿದೆ.

ಸಂಸ್ಥೆಯಲ್ಲಿ ನಿರ್ದೇಶಕರಾಗಿರುವ ಟಿ.ಟಿ. ಬಸವನಗೌಡ ಅವರು ಕೊಡವರ ಕುರಿತು ಸಮಗ್ರ ಕುಲಶಾಸ್ತಿçÃಯ ಅಧ್ಯಯನ ನಡೆಸದೆ ಸಾಮಾಜಿಕ, ಆರ್ಥಿಕ ಅಧ್ಯಯನ ನಡೆಸಿರುತ್ತಾರೆ. ಇವರು ಈ ಹಿಂದೆ ಹಲವು ಸಮುದಾಯಗಳನ್ನು ಎಸ್.ಟಿ. ಪಟ್ಟಿಗೆ ಸೇರಿಸಲು ಕುಲಶಾಸ್ತಿçÃಯ ಅಧ್ಯಯನ ನಡೆಸಿರುತ್ತಾರೆ. ಆದರೆ ಎಲ್ಲವನ್ನು ನಕಾರಾತ್ಮಕವಾಗಿ ವರದಿ ಮಾಡಿ ಸರ್ಕಾರಕ್ಕೆ ನೀಡಿರುತ್ತಾರೆ. ಇವರ ತಾರತಮ್ಯದ ಅಧ್ಯಯನದ ಕುರಿತು ನಾವು ಹಲವು ಬಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ದೂರು ನೀಡಿದರೂ ಯಾವುದೇ ಕ್ರಮ

(ಮೊದಲ ಪುಟದಿಂದ) ತೆಗೆದುಕೊಂಡಿರುವುದಿಲ್ಲ ಎಂದು ಆಕ್ಷೇಪಿಸಿ ಎನ್.ಯು.ನಾಚಪ್ಪ ಅವರು ವಕೀಲ ಲಕ್ಕವಳ್ಳಿ ಎಸ್. ಮಂಜುನಾಥ್ ವಕೀಲರ ಮುಖಾಂತರ ರಾಜ್ಯದ ಉಚ್ಛ ನ್ಯಾಯಾಲಯದಲ್ಲಿ ನ್ಯಾಯ ಕೋರಿ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ರಿಟ್ ಅರ್ಜಿ ಕುರಿತು ತಾ.೯ರಂದು ಹಿರಿಯ ವಕೀಲರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಅಡಿಷನಲ್ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಅರ್ಜಿದಾರರ ಪರವಾಗಿ ವಾದ ಮಂಡಿಸಿದರು. ವಾದದಲ್ಲಿ ಕಾನೂನು ಬಾಹಿರವಾಗಿ, ದುರುದ್ದೇಶದಿಂದ, ಕೊಡವ ಜನಾಂಗಕ್ಕೆ ತೊಂದರೆ ಮಾಡಲು ಇಚ್ಛಾಪೂರ್ವಕವಾಗಿ ತಪ್ಪು ಅಧ್ಯಯನವನ್ನು ಟಿ.ಟಿ. ಬಸವನಗೌಡ ಅವರು ಮಾಡಿರುತ್ತಾರೆ.

ಕೊಡವರ ಬಗ್ಗೆ ಸಮಗ್ರ ಕುಲಶಾಸ್ತಿçÃಯ ಅಧ್ಯಯನ ನಡೆಸದೆ ಸಾಮಾಜಿಕ, ಆರ್ಥಿಕತೆ ಕುರಿತು ವರದಿ ತಯಾರಿಸುತ್ತಿದ್ದಾರೆ. ಈ ಹಿಂದೆಯೂ ಉದ್ದೇಶಪೂರ್ವಕ ತಾರತಮ್ಯದ ಕರ್ತವ್ಯಲೋಪದಿಂದ ಕೂಡಿದ ವರದಿಗಳನ್ನು ನೀಡಿರುತ್ತಾರೆ. ಆದ್ದರಿಂದ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕರು ಟಿ.ಟಿ. ಬಸವನಗೌಡ ಅವರನ್ನು ನಿರ್ದೇಶಕರ ಸ್ಥಾನದಿಂದ ಬದಲಾಯಿಸಿ ಸರ್ಕಾರದ ಬೇರೊಬ್ಬ ಅಧಿಕಾರಿಯನ್ನು ನೇಮಿಸಿ ಹೊಸ ಅಧಿಕಾರಿಗಳಿಂದ ಕುಲಶಾಸ್ತಿçÃಯ ಅಧ್ಯಯನ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರು ಪ್ರತಿವಾದಿಗೆ ತುರ್ತು ನೋಟೀಸ್ ಜಾರಿ ಮಾಡಿ ಮತ್ತು ಮುಂದಿನ ವಿಚಾರಣೆಯನ್ನು ತಾ.೨೦-೦೭-೨೦೨೧ ಕ್ಕೆ ನಿಗದಿಪಡಿಸಿದ್ದಾರೆ. ಸದರಿ ವಿಷಯವು ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಬಾಕಿ ಇರುವ ಕಾರಣ ಈ ಸಂದರ್ಭದಲ್ಲಿ ನಿರ್ದೇಶಕ ಟಿ.ಟಿ. ಬಸವನಗೌಡ ಅವರು ಯಾವುದೇ ಕುಲಶಾಸ್ತಿçÃಯ ಅಧ್ಯಯನ ನಡೆಸದಂತೆ ಹಾಗೂ ವರದಿ ನೀಡದಂತೆ ತಡೆಹಿಡಿಯಲು ರಾಜ್ಯ ಸರ್ಕಾರ ಸೂಕ್ತ ಆದೇಶ ನೀಡಬೇಕೆಂದು ನಾಚಪ್ಪ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.