ಮಡಿಕೇರಿ: ಪರಿಸರ ದಿನಾಚರಣೆ ಪ್ರಯುಕ್ತ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಬಳಿ ಗಿಡ ನೆಡಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಸ್ವಾಮಿ ಇತರರು ಇದ್ದರು.
ಕಲಾಭವನದಲ್ಲಿ ಪರಿಸರ ದಿನಾಚರಣೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕುಶಾಲನಗರ ವಲಯದ ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸ್ವಾತಂತ್ರೊö್ಯÃತ್ಸವ ಅಮೃತ ಮಹೋತ್ಸವ ವರ್ಷಾಚರಣೆ ಅಂಗವಾಗಿ ಕುಶಾಲನಗರ ಕಲಾಭವನದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ ಸಸಿ ನೆಡುವುದರ ಮೂಲಕ ಚಾಲನೆ ನೀಡಿದರು. ಕೋವಿಡ್ ೧೯ರ ನಿಯಮದಂತೆ ಸಸಿ ನೆಡುವುದರ ಮೂಲಕ ಆಚರಿಸಲಾಯಿತು.
ಉಪವಲಯ ಅರಣ್ಯಾಧಿಕಾರಿ ಅನಿಲ್ ಡಿಸೋಜ, ಅರಣ್ಯ ರಕ್ಷಕ ಟಿ.ಕೆ. ಸಚಿನ್, ವಿ.ಎಸ್. ಮಂಜೇಗೌಡ, ಪಿಆರ್ಟಿ ಸಿಬ್ಬಂದಿಗಳಾದ ರವಿ, ಸುನಿಲ್, ಕೌಶಿಕ್, ಲೋಕೇಶ್, ಸುರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್ ಇದ್ದರು.*ವೀರಾಜಪೇಟೆ: ವೀರಾಜಪೇಟೆ ಡೊನೇಟರ್ಸ್ ಚಾರಿಟೇಬಲ್ ಟ್ರಸ್ಟ್ ಮತ್ತು ಬಿಸ್ಮಿಲ್ಲಷಾವಲಿ ಮಕಾನ್ ಕಮಿಟಿ ಜಂಟಿ ಆಶ್ರಯದಲ್ಲಿ ವೀರಾಜಪೇಟೆಯ ಖಬರ್ಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ನೀಡಿದ ಸುಮಾರು ೧೦೦ ಸಸಿಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಈ ಸಂದರ್ಭ ಪ.ಪಂ. ಸದಸ್ಯ ಎಸ್.ಹೆಚ್. ಮತೀನ್, ಕೆ.ಹೆಚ್. ಮೊಹಮ್ಮದ್ ರಾಫಿ, ಡೊನೇಟರ್ಸ್ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಎನ್.ಕೆ. ಸಮೀರ್, ಬಿಸ್ಮಿಲ್ಲಷಾವಲಿ ಮಕಾನ್ ಕಮಿಟಿ ಕಾರ್ಯದರ್ಶಿ ಫಹೀಮ್, ಟ್ರಸ್ಟ್ನ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.ಆರ್ಜಿ ಮೊರಾರ್ಜಿ ವಸತಿ ಶಾಲೆ ಆವರಣ
ವೀರಾಜಪೇಟೆ: ಆರ್ಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ಎನ್. ಉಪೇಂದ್ರ, ಸದಸ್ಯ ಅನೂಪ್ ಮತ್ತಿತರರು ಗ್ರಾಮದ ಮೊರಾರ್ಜಿ ವಸತಿ ಶಾಲೆಯ ಆವರಣದಲ್ಲಿ ವಿವಿಧ ಜಾತಿಯ ಸುಮಾರು ೩೦ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಿದರು.ಸುಂಟಿಕೊಪ್ಪ: ಕೆದಕಲ್ ಪಂಚಾಯಿತಿ ವತಿಯಿಂದ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಕೊರೊನಾ ಫ್ರಂಟ್ಲೈನ್ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ಅನ್ನು ಪಂಚಾಯಿತಿ ಅಧ್ಯಕ್ಷೆ ವಿಸ್ಮಿತ ಹಾಗೂ ಉಪಾಧ್ಯಕ್ಷ ಸಂಜು ಪೊನ್ನಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ವಿತರಿಸಿದರು. ಈ ಸಂದರ್ಭ ಪಂಚಾಯಿತಿ ಸದಸ್ಯರು, ಆರೋಗ್ಯ ಸಹಾಯಕಿಯರು, ಮಾಜಿ ಅಧ್ಯಕ್ಷ ಸೋಮಯ್ಯ, ಗ್ರಾಮಸ್ಥ ಗ್ಯಾಬ್ರಿಯಲ್ ಡಿಸೋಜ ಮತ್ತಿತರರು ಇದ್ದರು.ಮಡಿಕೇರಿ: ಬಿ.ಜೆ.ಪಿ. ವೃತ್ತಿ ಪ್ರಕೋಷ್ಠದ ಜಿಲ್ಲಾ ಫಟಕದ ವತಿಯಿಂದ ವಿಶ್ವ ಪರಿಸರ ದಿನ ಆಚರಿಸಲಾಯಿತು. ಮಡಿಕೇರಿ ನಗರದ ಕಾವೇರಿ ಲೇಔಟ್ನಲ್ಲಿನ ನಗರಸಭೆಯ ಉದ್ಯಾನವನದಲ್ಲಿ ಸಸಿಗಳನ್ನು ನೆಡಲಾಯಿತು. ಬಿ.ಜೆ.ಪಿ. ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ನಗರ ಬಿ.ಜೆ.ಪಿ. ಅಧ್ಯಕ್ಷ ಮನು ಮಂಜುನಾಥ್, ಬಿ.ಜೆ.ಪಿ. ವೃತ್ತ ಪ್ರಕೋಷ್ಠದ ರಾಜೇಶ್ ಮರಗೋಡು, ನಗರಸಭಾ ಸದಸ್ಯರಾದ ಮಹೇಶ್ ಜೈನಿ, ಅನಿತಾ ಪೂವಯ್ಯ, ಚಿತ್ರಾವತಿ, ಕಲಾವತಿ, ಬಿ.ಜೆ.ಪಿ. ಜಿಲ್ಲಾ ಉಪಾಧ್ಯಕ್ಷ ಅರುಣ್ಕುಮಾರ್, ಬಿ.ಜೆ.ಪಿ. ಮಹಿಳಾ ಮೋರ್ಚಾದ ನಿಶಾ ಮೋಹನ್, ವೃತ್ತಿ ಪ್ರಕೋಷ್ಠದ ಕನ್ವೀನರ್ ಡಾ. ಮೋಹನ್ ಅಪ್ಪಾಜಿ, ಕೋ-ಕನ್ವೀನರ್ ಮನೋಜ್ ಮಂದಪ್ಪ ಹಾಗೂ ಇತರರು ಹಾಜರಿದ್ದರು.ಗೋಣಿಕೊಪ್ಪ ವರದಿ: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗೋಣಿಕೊಪ್ಪ ಪ್ರೌಢಶಾಲೆ ಟೈಗರ್ ಪಗ್ ಪರಿಸರ ಸಂಘದ ವತಿಯಿಂದ ಶಾಲಾ ಆವರಣದಲ್ಲಿ ಸಾಂಕೇತಿಕವಾಗಿ ಗಿಡ ನೆಡಲಾಯಿತು.
ಸಂಘದ ಸಂಚಾಲಕ ಡಿ. ಕೃಷ್ಣ ಚೈತನ್ಯ, ಶಿಕ್ಷಕರಾದ ಎಸ್.ಕೆ. ಈಶ, ಜಿ. ಗಿಡ್ಡಯ್ಯ, ಪತ್ರಕರ್ತ ಸಣ್ಣುವಂಡ ಕಿಶೋರ್ ನಾಚಪ್ಪ ಗಿಡ ನೆಟ್ಟರು.ಪೊನ್ನಂಪೇಟೆ: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದಲ್ಲಿ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು. ಈ ಸಂದರ್ಭ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸದಸ್ಯರಾದ ಮೂಕಳೇರ ಸುಮಿತ, ಅಣ್ಣೀರ ಹರೀಶ್, ಬೊಟ್ಟಂಗಡ ದಶಮಿ, ಅಮ್ಮತ್ತೀರ ಆರತಿ ಸುರೇಶ್, ರಾಮಕೃಷ್ಣ, ಸಹ ಶಿಕ್ಷಕಿಯರಾದ ರೋಸಿ, ಝಾನ್ಸಿ, ವಿನಿತ, ಶಾಲಾ ಸಿಬ್ಬಂದಿ ಮಂಗಳಮ್ಮ ಇದ್ದರು.ವೀರಾಜಪೇಟೆ: ವೀರಾಜಪೇಟೆ ಸಮೀಪದ ಕೋಟೆಕೊಪ್ಪ ಗ್ರಾಮದಲ್ಲಿ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಈ ಸಂದರ್ಭ ಶಿಕ್ಷಕ ವಿ.ಆರ್. ಸಂದೀಪ್ ಮಾತನಾಡಿ, ಕೊರೊನಾ ಮಹಾಮಾರಿಗೆ ಸಾವಿರಾರು ಜನರು ಆಮ್ಲಜನಕದ ಕೊರತೆಯಿಂದ ಪ್ರಾಣ ತೆತ್ತಿದ್ದಾರೆ. ಇದು ಆಮ್ಲಜನಕದ ಮಹತ್ವವನ್ನು ನಮಗೆ ತಿಳಿಸಿದೆ. ವಿದ್ಯಾರ್ಥಿಗಳು ಹಾಗೂ ಪ್ರತಿಯೊಬ್ಬ ನಾಗರಿಕರು ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಮುಂದಿನ ಪೀಳಿಗೆಗೆ ಕೊಡುಗೆ ನೀಡಬೇಕೆಂದು ಕರೆಕೊಟ್ಟರು.
ಗ್ರಾಮ ಪಂಚಾಯಿತಿ ಸದಸ್ಯ ವಿ.ಪಿ. ಡಾಲು ಮಾತನಾಡಿ, ನೆಲ, ಜಲ, ಗಾಳಿಯ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಲಿ ಎಂದರು. ಗ್ರಾಮದ ಬೈತೂರೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ವಿ.ಜಿ. ಮಂಜು ಮಾತನಾಡಿದರು. ಕಾರ್ಯಕ್ರಮದಲ್ಲಿ ವಿ.ವೈ.ಸಿ. ಕ್ಲಬ್ನ ಅಧ್ಯಕ್ಷ ವಿ.ಎಂ. ಶಿವರಾಜ್, ಕಾರ್ಯದರ್ಶಿ ವಿ.ಎನ್. ಗೋಪಿ, ಸದಸ್ಯರಾದ ವಿ.ಎ. ಭರತ್, ವಿ.ಆರ್. ತಿಲಕ, ವಿ.ಆರ್. ಸುಧಿ, ವಿ.ಕೆ. ದೀಪು, ವಿ.ಜಿ. ಕುಮಾರ, ಗ್ರಾಮದ ಪ್ರಮುಖರು ಇದ್ದರು.ವೀರಾಜಪೇಟೆ: ವೀರಾಜಪೇಟೆ ಸಮೀಪದ ಕೋಟೆಕೊಪ್ಪ ಗ್ರಾಮದಲ್ಲಿ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಈ ಸಂದರ್ಭ ಶಿಕ್ಷಕ ವಿ.ಆರ್. ಸಂದೀಪ್ ಮಾತನಾಡಿ, ಕೊರೊನಾ ಮಹಾಮಾರಿಗೆ ಸಾವಿರಾರು ಜನರು ಆಮ್ಲಜನಕದ ಕೊರತೆಯಿಂದ ಪ್ರಾಣ ತೆತ್ತಿದ್ದಾರೆ. ಇದು ಆಮ್ಲಜನಕದ ಮಹತ್ವವನ್ನು ನಮಗೆ ತಿಳಿಸಿದೆ. ವಿದ್ಯಾರ್ಥಿಗಳು ಹಾಗೂ ಪ್ರತಿಯೊಬ್ಬ ನಾಗರಿಕರು ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಮುಂದಿನ ಪೀಳಿಗೆಗೆ ಕೊಡುಗೆ ನೀಡಬೇಕೆಂದು ಕರೆಕೊಟ್ಟರು.
ಗ್ರಾಮ ಪಂಚಾಯಿತಿ ಸದಸ್ಯ ವಿ.ಪಿ. ಡಾಲು ಮಾತನಾಡಿ, ನೆಲ, ಜಲ, ಗಾಳಿಯ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಲಿ ಎಂದರು. ಗ್ರಾಮದ ಬೈತೂರೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ವಿ.ಜಿ. ಮಂಜು ಮಾತನಾಡಿದರು. ಕಾರ್ಯಕ್ರಮದಲ್ಲಿ ವಿ.ವೈ.ಸಿ. ಕ್ಲಬ್ನ ಅಧ್ಯಕ್ಷ ವಿ.ಎಂ. ಶಿವರಾಜ್, ಕಾರ್ಯದರ್ಶಿ ವಿ.ಎನ್. ಗೋಪಿ, ಸದಸ್ಯರಾದ ವಿ.ಎ. ಭರತ್, ವಿ.ಆರ್. ತಿಲಕ, ವಿ.ಆರ್. ಸುಧಿ, ವಿ.ಕೆ. ದೀಪು, ವಿ.ಜಿ. ಕುಮಾರ, ಗ್ರಾಮದ ಪ್ರಮುಖರು ಇದ್ದರು.