ಅವಕಾಶ ಬೇಕಿದೆ
ಕೊಡಗಿನಲ್ಲಿ ಕಳೆದ ೨ ತಿಂಗಳಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಸಂಪ್ರದಾಯದAತೆ ಭಾಗಮಂಡಲದಲ್ಲಿ ೪೦ ದಿನಗಳ ಒಳಗೆ ಪಿಂಡಪ್ರದಾನ ಮಾಡಿ ತಲಕಾವೇರಿಗೆ ಭೇಟಿ ನೀಡುವುದಿದೆ. ಕೊರೊನಾ ಲಾಕ್ಡೌನ್ನಿಂದಾಗಿ ಈ ವ್ಯವಸ್ಥೆಗೆ ಕಡಿವಾಣ ಬಿದ್ದಿದೆ. ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ, ಪಿಂಡಪ್ರದಾನ ಮಾಡುವ ಸಂಪ್ರದಾಯಕ್ಕೆ ಅವಕಾಶ ಕಲ್ಪಿಸಬೇಕಿದೆ. ಪ್ರತಿನಿತ್ಯ ಇಂತಿಷ್ಟು ಕುಟುಂಬಗಳು ಹಾಗೂ ಒಂದು ಕುಟುಂಬದಲ್ಲಿ ಇಂತಿಷ್ಟು ಜನರಿಗೆ ಅವಕಾಶವೆಂದು ನಿಯಮ ರೂಪಿಸಿ ಈ ಕಾರ್ಯವನ್ನು ತುರ್ತಾಗಿ ಮಾಡಬೇಕೆಂದು ಅನೇಕ ಕುಟುಂಬಗಳು ಮನವಿ ಮಾಡಿವೆ.ಇದರೊಂದಿಗೆ ಪ್ರಮುಖವಾಗಿರುವ ಮತ್ತೊಂದು ಸಮಸ್ಯೆ ಎಂದರೆ ದೂರವಾಣಿ ಸಂಪರ್ಕ, ದೂರಸಂಪರ್ಕ ವ್ಯವಸ್ಥೆ ಬಹುತೇಕ ಜಿಲ್ಲೆಯಲ್ಲಿ ಭಾರೀ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಅದರಲ್ಲೂ ಗ್ರಾಮೀಣ ಜನತೆ ಹೊರಪ್ರಪಂಚದೊAದಿಗೆ ಸಂಪರ್ಕವನ್ನೇ ಕಳೆದುಕೊಳ್ಳುವಂತಾಗುತ್ತದೆ. ಬಿಎಸ್ಎನ್ಎಲ್ನ ಗ್ರಾಹಕರಂತೂ ಶಿಲಾಯುಗದ ದಿನಗಳನ್ನೇ ಸ್ಮರಿಸಬೇಕಾಗುತ್ತದೆ. ವಿದ್ಯುತ್ ಇಲ್ಲದಿದ್ದರೆ ಎಲ್ಲಾ ವಿನಿಮಯ ಕೇಂದ್ರಗಳು, ಮೊಬೈಲ್ ಟವರ್ಗಳು ನಿಷ್ಕಿçಯವಾಗುತ್ತವೆ. ಈ ಕೇಂದ್ರಗಳಲ್ಲಿ ಜನರೇಟರ್ಗಳಿದ್ದರೂ, ಡೀಸಲ್ ಇಲ್ಲದೆ, ಅತ್ತ ನಿರ್ವಹಣೆಗೆ ಸಿಬ್ಬಂದಿಗಳೂ ಇಲ್ಲದೆ ಸ್ತಬ್ಧವಾಗುತ್ತವೆ. ಇದೂ ಕೂಡ ಮಳೆಗಾಲದ ಸಂದರ್ಭದಲ್ಲಿ ಮುಂಜಾಗ್ರತೆ ವಹಿಸಿದಲ್ಲಿ ಸರಿಪಡಿಸಬಹುದಾದ ಸಮಸ್ಯೆಯಾಗಿದೆ. ತುರ್ತು ಸಂದರ್ಭಗಳಲ್ಲಿ ಅನಿವಾರ್ಯತೆಗಳ ಬಗ್ಗೆ ಪರಸ್ಪರ ಮಾಹಿತಿ ಒದಗಿಸಲು, ಮಾಹಿತಿ ಪಡೆಯಲು ಕೇವಲ ಜನಸಾಮಾನ್ಯರಿಗೆ ಮಾತ್ರವಲ್ಲ ಜಿಲ್ಲಾಡಳಿತ ಹಾಗೂ ಸಂಬAಧಿಸಿದ ಇಲಾಖೆಗಳಿಗೂ ಇದು ಕ್ಲಿಷ್ಟಕರ ಪರಿಸ್ಥಿತಿಯನ್ನು ತಂದೊಡ್ಡುತ್ತವೆ.
ಮಳೆಗಾಲದ ಅವಧಿಯಲ್ಲಿ ಜಿಲ್ಲೆಗೆ ಹೆಚ್ಚುವರಿ ಸೀಮೆಎಣ್ಣೆ ಪೊರೈಸಬೇಕೆಂಬದು ಬಹುವರ್ಷಗಳ ಬೇಡಿಕೆಯಾಗಿದೆ. ಆದರೆ ಇದೀಗ ಕೆಲವು ತಿಂಗಳಿನಿAದ ಜಿಲ್ಲೆಗೆ ೧೧ ಸಾವಿರ ಲೀಟರ್ನಷ್ಟು ಸೀಮೆಎಣ್ಣೆ ಪೂರೈಕೆಯೇ ಕಡಿತವಾಗಿರುವದು ಅಚ್ಚರಿ ಮೂಡಿಸಿದೆ. ಇಂತಹ ಕೆಲವು ಸರಿಪಡಿಸಲು ಸಾಧ್ಯವಿರುವ ಸಮಸ್ಯೆಗಳನ್ನಾದರೂ ಆಡಳಿತ ನಡೆಸುವವರು ಗಮನಿಸಲಿ ಎಂಬದು ಜನಸಾಮಾನ್ಯರ ಅಳಲು.
- ಶಶಿ ಸೋಮಯ್ಯ