ಮಡಿಕೇರಿ, ಜೂ. ೧೦: ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ತಾ. ೧೧ ರಂದು (ಇಂದು) ಜಿಲ್ಲೆಯಲ್ಲಿ ಕೊರೊನಾ ಸಮಸ್ಯೆ ಹಾಗೂ ಮಳೆಗಾಲಕ್ಕೆ ಸಂಬAಧಿಸಿದAತೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದೊಂದಿಗೆ ಮಹತ್ವದ ಸಭೆ ನಿಗದಿಯಾಗಿದೆ.
ಕೊರೊನಾ ಸಂಬAಧಿಸಿದ ಸಮಸ್ಯೆ ಗಂಭೀರವೇ ಆಗಿದ್ದು, ಇದು ಒಂದೆಡೆಯಾದರೆ, ಜಿಲ್ಲೆಯಲ್ಲಿ ನಿರಂತರವಾಗಿರುವ ಮತ್ತಷ್ಟು ಸಮಸ್ಯೆಗಳು ಕೂಡ ಗಂಭೀರ ಸ್ವರೂಪದ್ದೇ ಆಗಿದೆ. ಅದರಲ್ಲೂ ಮಳೆಗಾಲಕ್ಕೆ ಸಂಬAಧಿಸಿದAತೆ ಹಲವಾರು ಅಡ್ಡಿ - ಆತಂಕಗಳಿವೆ. ಕಳೆದ ಸತತ ಮೂರು ವರ್ಷಗಳಲ್ಲೂ ಕೊಡಗಿನಲ್ಲಿ ಭಾರೀ ದುರಂತಗಳು ಘಟಿಸಿರುವದು ಇನ್ನೂ ಜನ ಮಾನಸದಿಂದ ಮರೆಯಾಗಿಲ್ಲ. ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟದೊಂದಿಗೆ ಮಾನವ ಪ್ರಾಣಹಾನಿಗಳು ನಡೆದಿರುವದು, ಮಳೆಗಾಲದ ಸಂದರ್ಭದಲ್ಲಿ ಜಿಲ್ಲೆಯ ಜನತೆ, ಪರಸ್ಪರ ಸಂಪರ್ಕ ರಹಿತವಾಗಿ ದಿಗ್ಭಂದನಕ್ಕೆ ಒಳಗಾಗುವುದು, ವಿದ್ಯುತ್ ಸಂಪರ್ಕ, ದೂರವಾಣಿ ಸಂಪರ್ಕಗಳಿಲ್ಲದೆ ಅಂಧಕಾರದ ಪರಿಸ್ಥಿತಿಯನ್ನು ಎದುರಿಸುವದು, ಈ ರೀತಿಯಾಗಿ ಹಲವಷ್ಟು ಸಮಸ್ಯೆಗಳು ಮುಂದಿನ ಮೂರು ತಿಂಗಳಿನಲ್ಲಿ ಎದುರಾಗುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಕೆಲವೊಂದು ಮುಂಜಾಗ್ರತಾ ಕ್ರಮಗಳು ಕೂಡ ಅನಿವಾರ್ಯವಾಗಿದೆ. ಈಗಾಗಲೇ ಪ್ರಾಕೃತಿಕ ವಿಪತ್ತು ನಿರ್ವಹಣಾ ತಂಡ ಈ ಹಿಂದಿನ ಎರಡು ವರ್ಷಗಳಂತೆ ಈ ವರ್ಷವೂ ಜಿಲ್ಲೆಯಲ್ಲಿ ಬೀಡುಬಿಟ್ಟಿದೆ.
ಇಲ್ಲಿ ಪ್ರಮುಖವಾಗಿರುವ, ಸರಿಪಡಿಸಬಹುದಾದ ಕೆಲವೊಂದು ಸಮಸ್ಯೆಗಳು ಇದ್ದು, ಈ ಬಗ್ಗೆ ದೃಢ ನಿಲುವು ಅಗತ್ಯವಾಗಿದೆ. ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭ ವಿದ್ಯುತ್ ವ್ಯವಸ್ಥೆಗೆ ಧಕ್ಕೆಯಾಗುವದು ಬಹುತೇಕ ವಾಸ್ತವ, ಗುಡ್ಡಗಾಡು ಪ್ರದೇಶವಾಗಿರುವದರಿಂದ ಮರಗಳು ಬೀಳುವುದು, ವಿದ್ಯುತ್ ಕಂಬ, ಟ್ರಾನ್ಸ್ಫಾರ್ಮರ್, ಉರುಳುವದು, ತಂತಿಗಳು ತುಂಡರಿಸುವದು ಇಂತಹ ತೊಂದರೆಗಳು ಎದುರಾಗುತ್ತವೆ. ಇದರಿಂದ ಇದನ್ನು ತುರ್ತಾಗಿ ಸರಿಪಡಿಸಲು ಹೆಚ್ಚುವರಿಯಾಗಿ ಸಿಬ್ಬಂದಿಗಳ ನಿಯೋಜನೆ, ಸಾಮಗ್ರಿಗಳ ಸಂಗ್ರಹ ಮಾಡಿಕೊಳ್ಳುವುದು ಅಗತ್ಯ.