ಚೆಟ್ಟಳ್ಳಿ, ಜೂ. ೧೧: ಸೋಮವಾರಪೇಟೆ ತಾಲೂಕಿನ ವಾಲ್ನೂರು - ತ್ಯಾಗತ್ತೂರು ಗ್ರಾಮದಲ್ಲಿ ಅಭಿವೃದ್ಧಿ ಹಾಗೂ ಜನ ಸಾಮಾನ್ಯರಿಗೆ ಸಹಾಯಹಸ್ತ ಚಾಚುವ ದೃಷ್ಟಿಯಿಂದ ಯುವ ಜನತೆಯನ್ನು ಒಗ್ಗೂಡಿಸಿ ತ್ಯಾಗತ್ತೂರು ಕಾರುಣ್ಯ ವೆಲ್ಫೇರ್ ಗ್ರೂಪ್ ಎಂಬ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಇದರ ನೂತನ ಅಧ್ಯಕ್ಷರಾಗಿ ರಶೀದ್ ಇ.ಪಿ., ಪ್ರಧಾನ ಕಾರ್ಯದರ್ಶಿಯಾಗಿ ಶಾಫಿ ಪಿ.ಎ. ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಹಾರಿಸ್ ಪಿ.ಎಂ., ಸಹಕಾರ್ಯದರ್ಶಿಯಾಗಿ ಹಾರಿಸ್ ಭಾವಾ, ಕೋಶಾಧಿಕಾರಿಗಳಾಗಿ ಲತೀಫ್, ಇಬ್ರಾಹಿಂ ಪಿ.ಎ. ಅವರನ್ನು ಆಯ್ಕೆ ಮಾಡಲಾಗಿದೆ.
ನೂತನ ಸಮಿತಿಯ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕೊರೊನಾ ಮಹಾಮಾರಿ ಹೆಚ್ಚುತ್ತಿರುವ ಹಿನ್ನೆಲೆ ಗ್ರಾಮವನ್ನು ರಕ್ಷಿಸುವ ನಿಟ್ಟಿನಲ್ಲಿ ಸ್ಯಾನಿಟೈಸ್ ಹಾಗೂ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ತ್ಯಾಗತ್ತೂರು ಜಮಾಅತ್ ಪ್ರತಿನಿಧಿಗಳಾದ ರಶೀದ್ ಬಿ.ಎಂ., ಹನೀಫ ಗುಜರಾತ್, ಸಲೀಮ್ ಟಿ.ಎಂ. ಹಾಗೂ ಗ್ರಾಮಸ್ಥರು ಹಾಜರಿದ್ದರು.