ಸೋಮವಾರಪೇಟೆ, ಜೂ. ೧೧: ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಸೆಂಟರ್ನ ಉಸ್ತುವಾರಿಯನ್ನು ಖಾಸಗಿ ಸಂಸ್ಥೆಗೆ ವಹಿಸಲು ತೆರೆಮರೆಯ ಪ್ರಯತ್ನ ನಡೆಯುತ್ತಿದ್ದು, ಇದಕ್ಕೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳೂ ಸೇರಿದಂತೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಇದುವರೆಗೂ ಉತ್ತಮ ನಿರ್ವಹಣೆಯಲ್ಲಿರುವ ಕೋವಿಡ್ ಕೇರ್ ಸೆಂಟರ್ನ್ನು ದಿಢೀರಾಗಿ ಖಾಸಗಿ ಸಂಸ್ಥೆಯೊAದಕ್ಕೆ ವಹಿಸಲು ಸ್ಥಳೀಯ ಕೆಲವರು ಭಾರೀ ಉತ್ಸುಕತೆ ತೋರುತ್ತಿದ್ದು, ಇದಕ್ಕೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಸೇರಿದಂತೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಹೆಚ್ಸಿಎಲ್ ಫೌಂಡೇಷನ್ನ ಡಾಕ್ರ್ಸ್ ಫಾರ್ ಯು-ಕೋವಿಡ್ ರೀಸರ್ಜ್ ಸಂಸ್ಥೆಯ ಪ್ರತಿನಿಧಿಗಳು ಸೋಮವಾರಪೇಟೆ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯ ಆಡಳಿತಾಧಿಕಾರಿ ರವೀಂದ್ರ ಅವರನ್ನು ಭೇಟಿ ಮಾಡಿ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಈ ಸಂದರ್ಭ ಪಟ್ಟಣ ಪಂಚಾಯಿತಿಯ ಕೆಲ ಮುಖಂಡರು ಸಂಸ್ಥೆಯ ಪರವಾಗಿ ವಕಾಲತ್ತು ವಹಿಸಲು ಮುಂದಾಗಿದ್ದು, ಇದಕ್ಕೆ ಆಸ್ಪತ್ರೆಯ ಸಿಬ್ಬಂದಿಗಳು ಅಸಮಾಧಾನ ವ್ಯಕ್ತಪಡಿಸಿ, ಈಗಿರುವ ಕೋವಿಡ್ ಕೇರ್ ಸೆಂಟರ್ ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತಿದೆ. ಹೆಚ್ಚು ಕೇಸ್ಗಳಿದ್ದ ಸಂದರ್ಭ ನಾವೇ ನಿಭಾಯಿಸಿದ್ದೇವೆ. ಇದೀಗ ಪ್ರಕರಣಗಳು ಕಡಿಮೆಯಾಗಿರುವ ಸಂದರ್ಭ ಖಾಸಗೀಕರಣ ಏಕೆ? ಎಂದು ಆಕ್ಷೇಪಿಸಿದರು.
ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯನ್ನು
(ಮೊದಲ ಪುಟದಿಂದ) ಎರಡು ವಿಭಾಗಗಳಾಗಿ ವಿಂಗಡಿಸಿ ಕೋವಿಡ್ ಸಂಬAಧಿತ ಆರೈಕೆಗಾಗಿ ಪ್ರತ್ಯೇಕ ವಾರ್ಡ್ ಮೀಸಲಿಡಲಾಗಿದೆ. ಈಗಾಗಲೇ ಆಕ್ಸಿಜನ್ ಸಹಿತ ೫೦ ಬೆಡ್ಗಳು ಸೇವೆಗೆ ಲಭ್ಯವಿದ್ದು, ಹೆಚ್ಚುವರಿಯಾಗಿ ೫೦ ಬೆಡ್ಗಳನ್ನು ಮೀಸಲಿಡಲಾಗಿದೆ. ಕೋವಿಡ್ ಸೆಂಟರ್ನಲ್ಲಿ ವೈದ್ಯರಿಂದ ಉತ್ತಮ ಚಿಕಿತ್ಸೆ, ಶುಶ್ರೂಷಕಿಯರಿಂದ ಉತ್ತಮ ಆರೈಕೆ ಸಿಗುತ್ತಿರುವ ಬಗ್ಗೆ ಕೋವಿಡ್ನಿಂದ ಗುಣಮುಖರಾದವರು ಅಭಿಪ್ರಾಯಿಸುತ್ತಿದ್ದಾರೆ.
ಏಪ್ರಿಲ್ ೨೪ ರಿಂದ ಇಲ್ಲಿಯವರೆಗೆ ಒಟ್ಟು ೯೫ ಮಂದಿ ಕೋವಿಡ್ ಕೇರ್ ಸೆಂಟರ್ಗೆ ದಾಖಲಾಗಿದ್ದು, ಇದರಲ್ಲಿ ೬೧ ಮಂದಿ ಗುಣಮುಖರಾಗಿ ಮನೆಗೆ ಹಿಂತಿರುಗಿದ್ದಾರೆ. ಮಡಿಕೇರಿಗೆ ೩೧ ಮಂದಿಯನ್ನು ಕಳುಹಿಸಲಾಗಿದೆ. ಸದ್ಯ ೩ ಮಂದಿ ಸೆಂಟರ್ನಲ್ಲಿದ್ದಾರೆ.
೩ ಬೆಡ್ಗಳಿರುವ ಐಸಿಯು ಮತ್ತು ೨ ವೆಂಟಿಲೇಟರ್ ಸಹ ಸೋಮವಾರಪೇಟೆಯಲ್ಲಿದ್ದು, ನಿನ್ನೆಯಿಂದ ಫಿಜಿಷಿಯನ್ ಡಾ. ಕಿರಣ್ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅನಸ್ತೇಷಿಯಾ ತಜ್ಞರೋರ್ವರನ್ನು ಆಸ್ಪತ್ರೆಗೆ ನಿಯೋಜಿಸಿದ್ದು, ಇನ್ನಷ್ಟೇ ವರದಿ ಮಾಡಿಕೊಳ್ಳಬೇಕಿದೆ. ಅನಸ್ತೇಷಿಯಾ ತಜ್ಞರು ಆಗಮಿಸಿದರೆ ಐಸಿಯು ಘಟಕ ಕಾರ್ಯಾಚರಿಸಲಿದೆ. ಶುಶ್ರೂಷಕಿಯರು, ವೈದ್ಯರು ಸೇವೆಯಲ್ಲಿದ್ದು ಇಂತಹ ಸುಧಾರಣಾ ಕ್ರಮಗಳಿರುವ ಸಂದರ್ಭದಲ್ಲಿ ಕೋವಿಡ್ ಸೆಂಟರ್ನ್ನು ಖಾಸಗಿ ಸಂಸ್ಥೆಗೆ ವಹಿಸುವುದು ಏಕೆ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಸದ್ಯ ಸೋಮವಾರಪೇಟೆ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ ಇಎನ್ಟಿ ತಜ್ಞ ಡಾ. ರವೀಂದ್ರ ಕಾರ್ಯನಿರ್ವಹಿಸುತ್ತಿದ್ದು, ಜನರಲ್ ಸರ್ಜನ್ ಆಗಿ ಡಾ. ಸತೀಶ್, ಸ್ತಿçÃರೋಗ ತಜ್ಞರಾಗಿ ಡಾ. ಶಿವಪ್ರಸಾದ್, ಫಿಜಿಷಿಯನ್ ಆಗಿ ಡಾ. ಕಿರಣ್, ದಂತ ಚಿಕಿತ್ಸಕರಾಗಿ ಶ್ರದ್ಧಾ ಮಂಜುನಾಥ್, ಮೂಳೆ ತಜ್ಞರಾಗಿ ಶುಶ್ರೂತ್ರಾಜ್, ಮಕ್ಕಳ ತಜ್ಞರಾಗಿ ಜಿನ್ಸಿ ಜೋಸೆಫ್, ಇಎನ್ಟಿ ತಜ್ಞರಾಗಿ ಮಂಜುಳ, ಗ್ರಾಮೀಣ ಸೇವೆಯಲ್ಲಿ ಡಾ. ವರ್ಣ ಅವರುಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅರೆವಳಿಕೆ ತಜ್ಞರು, ರೇಡಿಯಾಲಜಿಸ್ಟ್, ಕಣ್ಣಿನ ತಜ್ಞರ ಅವಶ್ಯಕತೆ ಇದೆ. ಕೊರೊನಾ ಸೋಂಕು ತಗುಲಿ ಗಂಭೀರ ಸ್ಥಿತಿಗೆ ತಲುಪುವ ಮಂದಿಯನ್ನು ಮಡಿಕೇರಿಯ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿದ್ದು, ಆಕ್ಸಿಜನ್ ಅವಶ್ಯಕತೆಯಿರುವ ಮಂದಿಯನ್ನು ಇಲ್ಲಿಯೇ ಉಳಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚು ಪ್ರಕರಣಗಳಿದ್ದ ಸಂದರ್ಭ ನಾವುಗಳೇ ಸುಧಾರಿಸಿದ್ದೇವೆ. ಕೋವಿಡ್ನಿಂದ ಆಸ್ಪತ್ರೆಯಲ್ಲಿ ಯಾವುದೇ ಮರಣ ಸಂಭವಿಸಿಲ್ಲ. ಎಲ್ಲಾ ರೋಗಿಗಳನ್ನು ಉತ್ತಮವಾಗಿಯೇ ಆರೈಕೆ ಮಾಡಿದ್ದೇವೆ. ಇಂತಹ ಸನ್ನಿವೇಶದಲ್ಲಿ ಖಾಸಗೀಕರಣ ಯಾಕೆ? ಎಂದು ವೈದ್ಯರು, ಸಿಬ್ಬಂದಿಗಳು ಪ್ರಶ್ನಿಸುತ್ತಿದ್ದಾರೆ.
ಖಾಸಗಿ ಸಂಸ್ಥೆಯಿAದ ಈರ್ವರು ಪ್ರತಿನಿಧಿಗಳು ಆಗಮಿಸಿ ಕೋವಿಡ್ ಸೆಂಟರ್ ಬಗ್ಗೆ ಮಾಹಿತಿ ಪಡೆದಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ವೈದ್ಯರು, ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಖಾಸಗೀಕರಣದ ಅವಶ್ಯಕತೆ ಸದ್ಯಕ್ಕೆ ಇಲ್ಲ. ಈ ಬಗ್ಗೆ ಶಾಸಕರು, ಜನಪ್ರತಿನಿಧಿಗಳು, ಇಲಾಖೆಯ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಪ್ರತಿನಿಧಿಗಳಿಗೆ ತಿಳಿಸಲಾಗಿದೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ರವೀಂದ್ರ ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ಸರ್ಕಾರಿ ಆಸ್ಪತ್ರೆಯನ್ನು ಖಾಸಗೀಕರಣ ಮಾಡಬಾರದು. ಎಲ್ಲಿಂದಲೋ ಬಂದ ಸಂಸ್ಥೆಗೆ ಕೋವಿಡ್ ಸೆಂಟರ್ನ್ನು ಒಪ್ಪಿಸಿದರೆ ಮುಂದಾಗುವ ಅನಾಹುತಗಳಿಗೆ ಹೊಣೆ ಯಾರು? ಈಗಿರುವ ವೈದ್ಯರು, ಶುಶ್ರೂಷಕಿಯರು, ಸಿಬ್ಬಂದಿಗಳು ಉತ್ತಮ ಸೇವೆ ನೀಡುತ್ತಿದ್ದಾರೆ. ಉತ್ತಮ ಸ್ಥಿತಿಯಲ್ಲಿರುವ ಕೋವಿಡ್ ಸೆಂಟರ್ನ್ನು ಖಾಸಗಿಯವರಿಗೆ ನೀಡಿದರೆ ಮುಂದಿನ ದಿನಗಳಲ್ಲಿ ಸಮಸ್ಯೆಯಾಗಲಿದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರದೀಪ್, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮೋಹನ್, ಪ.ಪಂ. ಸದಸ್ಯರಾದ ಪಿ.ಕೆ. ಚಂದ್ರು, ಬಿ.ಆರ್. ಮಹೇಶ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕೆ.ಎನ್. ದೀಪಕ್ ಸೇರಿದಂತೆ ಇತರರು ಅಭಿಪ್ರಾಯಿಸಿದ್ದಾರೆ. ಈ ಬಗ್ಗೆ ಶಾಸಕರು ಗಮನ ಹರಿಸಬೇಕು. ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲವೊಂದು ಸುಧಾರಣಾ ಕ್ರಮ ಕೈಗೊಂಡು ಕೋವಿಡ್ ಕೇರ್ ಸೆಂಟರ್ನ್ನು ಸರ್ಕಾರದ ವತಿಯಿಂದಲೇ, ಈಗಿರುವಂತೆ ನಿರ್ವಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
- ವಿಜಯ್ ಹಾನಗಲ್