ಮಡಿಕೇರಿ: ಲಾಕ್‌ಡೌನ್‌ನಿಂದಾಗಿ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಸಂಕಷ್ಟದಲ್ಲಿರುವ ಜಿಲ್ಲಾ ಬಸ್ ಕಾರ್ಮಿಕರ ಸಂಘದ ಮಡಿಕೇರಿ ಘಟಕ ಸದಸ್ಯರಿಗೆ ಮಡಿಕೇರಿ ನಿವಾಸಿ, ಕಾಫಿ ಬೆಳೆಗಾರ ನಡಿಕೇರಿಯಂಡ ಚಿನ್ನಪ್ಪ ಅವರು ಆಹಾರ ಕಿಟ್‌ಗಳನ್ನು ವಿತರಿಸಿದರು.

ನಗರದ ಹೊಸ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಚಿನ್ನಪ್ಪ ಅವರು ೧೦೦ ಆಹಾರ ಕಿಟ್‌ಗಳನ್ನು ಬಸ್ ಕಾರ್ಮಿಕರ ಸಂಘದ ಸದಸ್ಯರಿಗೆ ವಿತರಿಸಿದರು. ಈ ಸಂದರ್ಭ ಮಡಿಕೇರಿ ಖಾಸಗಿ ಬಸ್ ಕಾರ್ಮಿಕರ ಸಂಘದ ಅಧ್ಯಕ್ಷ ಭರತ್ ಕುಮಾರ್, ಕಾರ್ಯದರ್ಶಿ ಬಿ.ಎಸ್. ನಾಗೇಂದ್ರ, ಖಜಾಂಚಿ ಟಿ.ಎನ್. ಮಂಜುನಾಥ್ ಹಾಗೂ ಇತರರು ಹಾಜರಿದ್ದರು.*ವೀರಾಜಪೇಟೆ: ಅಟಲ್ ಜೀ ಸ್ನೇಹಿತರ ಬಳಗದ ವತಿಯಿಂದ ವೀರಾಜಪೇಟೆ ಭಾಗದಲ್ಲಿ ಕೆಲಸ ಕಾರ್ಯವಿಲ್ಲದೆ ಸಂಕಷ್ಟದಲ್ಲಿದ್ದ ಸುಮಾರು ನಲವತ್ತು ಮಂದಿಯನ್ನು ಗುರುತಿಸಿ ಅವರ ಕುಟುಂಬದ ಸದಸ್ಯರಿಗೆ ಸುಮಾರು ಹದಿನೈದು ದಿನಗಳಿಗೆ ಆಗುವಷ್ಟು ದಿನಸಿ ಹಾಗೂ ದಿನಬಳಕೆಯ ವಸ್ತುಗಳನ್ನು ನೀಡಲಾಯಿತು.

ವೀರಾಜಪೇಟೆ ತಾಲೂಕು ಮೈದಾನದಲ್ಲಿ ವೀರಾಜಪೇಟೆ ನಗರ ಠಾಣಾಧಿಕಾರಿ ಜಗದೀಶ್ ದೂಳ್ ಶೆಟ್ಟಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ತಾಲೂಕು ಅಧ್ಯಕ್ಷ ಎಂ.ಬಿ. ಚಂದ್ರನ್, ಕಾರ್ಯದರ್ಶಿ ಆರ್. ಸುರೇಶ್, ವೀರಾಜಪೇಟೆ ನಗರ ಅಧ್ಯಕ್ಷ ಪ್ರದೀಪ್, ಸದಸ್ಯರಾದ ಶಶಿ, ನಿತಿನ್, ಪ್ರಶಾಂತ್, ವಿಜಯ, ಶ್ರೀಜಿತ್, ಜಗದೀಶ್, ವಿವೇಕ್ ಭಾಗವಹಿಸಿದ್ದರು.

ಕಳೆದ ಬಾರಿ ಅಟಲ್ ಜೀ ಸ್ನೇಹಿತರ ಬಳಗದಿಂದ ೩೫೩ ಪಡಿತರ ಕಿಟ್ ವಿತರಣೆ ಮಾಡಿಲಾಗಿತ್ತು. ಈ ಬಾರಿ ಕೂಡ ೧೮೦ ಕಿಟ್ ನೀಡಿದ್ದೇವೆ ಎಂದು ಚಂದ್ರನ್ ತಿಳಿಸಿದರು.ಶನಿವಾರಸಂತೆ: ಹಾಸನದ ಆದಿಚುಂಚನಗಿರಿ ಶಾಖಾ ಮಠದ ವತಿಯಿಂದ ನೀಡಲಾದ ರೋಗ ನಿರೋಧಕ ಔಷಧಿಗಳ ಕಿಟ್ಟನ್ನು ಕಳಲೆ-ಕೂಡಿಗೆ ಬಿಜಿಎಸ್ ಸೇವಾ ಸಮಿತಿಯವರು ಶನಿವಾರಸಂತೆ ಸಮೀಪದ ಗಡಿಭಾಗ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨೦ ಕೋವಿಡ್ ಸಂತ್ರಸ್ತರಿಗೆ ವಿತರಿಸಿದರು.

ಮಠದಿಂದ ನೀಡಲಾದ ಔಷಧಿಗಳ ಕಿಟ್‌ಅನ್ನು ಆದಿಚುಂಚನಗಿರಿ ಮಠ ಸೇವಾ ಸಂಘದ ಉಪಾಧ್ಯಕ್ಷ ಕೆ.ಟಿ. ಕೃಷ್ಣೇಗೌಡ ಅವರು ಗ್ರಾಮ ಪಂಚಾಯಿತಿ ಪಿ.ಡಿ.ಓ. ಶಿವಣ್ಣ ಅವರಿಗೆ ಹಸ್ತಾಂತರ ಮಾಡಿದರು. ನಂತರ ಅವರು ಮಾತನಾಡಿ, ಆದಿಚುಂಚನಗಿರಿ ಮಠ ಸಾರ್ವಜನಿಕ ಸೇವೆಗೆ ಸದಾ ಸಿದ್ಧವಿದೆ ಎಂದರು.

ಸAಸ್ಥೆ ಕಾರ್ಯದರ್ಶಿ ಉಮೇಶ್, ಸದಸ್ಯರಾದ ಸುದೀಪ್, ಹೊಸಕೋಟೆ ರಾಮಣ್ಣ, ಪಿ.ಡಿ.ಓ. ಶಿವಣ್ಣ ಇತರರು ಹಾಜರಿದ್ದರು.ಸಿದ್ದಾಪುರ: ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ಜಿಲ್ಲೆಯ ವಿವಿಧ ಭಾಗಗಳ ಹಾಡಿಯ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು.

ಗೋಣಿಗದ್ದೆ, ಕೆರೆದಟ್ಟು, ಕೋಡಂಗೆ, ಸೀತಾ ಕಾಲೋನಿಯ ೬೦ ಆದಿವಾಸಿ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಲಾಯಿತು. ಸಮಿತಿಯ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್, ಗೌರವ ಅಧ್ಯಕ್ಷ ಡಿ.ಎಸ್. ನಿರ್ವಾಣಪ್ಪ, ಜಿಲ್ಲಾ ಕಾರ್ಯದರ್ಶಿ ಹೇಮಂತ್ ಪ್ರಮುಖರಾದ ಮೋಹನ್, ತಾಯಮ್ಮ, ಜಲೀಲ್, ರೋಷನ್ ಇದ್ದರು.ಮಡಿಕೇರಿ: ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದ ಕೋವಿಡ್ ವಾರಿಯರ್ಸ್ಗಳಾದ ಆಶಾ ಕಾರ್ಯಕರ್ತೆಯರು, ಹೋಂ ಗಾರ್ಡ್ಸ್ ಮತ್ತು ಟ್ಯಾಕ್ಸಿ ಚಾಲಕರುಗಳಿಗೆ ಕೆ.ಪಿ.ಸಿ.ಸಿ. ಸಂಯೋಜಕ ಹೆಚ್.ಎಂ. ನಂದಕುಮಾರ್ ಒಂದು ತಿಂಗಳಿಗೆ ಆಗುವಷ್ಟು ಆಹಾರ ಸಾಮಗ್ರಿಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕೆ.ಪಿ.ಸಿ.ಸಿ. ತಮಗೆ ಉಸ್ತುವಾರಿ ನೀಡಿರುವ ಸುಳ್ಯ ತಾಲೂಕಿನಲ್ಲಿ ಮಾಜಿ ಸಚಿವ ರಮಾನಾಥ್ ರೈ ಮತ್ತು ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ಸುಮಾರು ರೂ. ೩ ಲಕ್ಷ ವೆಚ್ಚದಲ್ಲಿ ತಲಾ ರೂ. ೧೫೦೦ ಮೊತ್ತದ ಆಹಾರ ಸಾಮಗ್ರಿ ಇರುವ ಕಿಟ್‌ನ್ನು ಫಲಾನುಭವಿಗಳಿಗೆ ನೀಡಲಾಯಿತು.

ಕಳೆದ ವರ್ಷ ಕೂಡ ಮಡಿಕೇರಿ ನಗರದ ಅನೇಕ ಕಡೆಗಳಲ್ಲಿ ಹೆಚ್.ಎಂ. ನಂದಕುಮಾರ್ ಸುಮಾರು ನಾಲ್ಕು ಸಾವಿರ ಕುಟುಂಬಗಳಿಗೆ ಲಾಕ್‌ಡೌನ್ ಸಂದರ್ಭ ಕಿಟ್ ವಿತರಿಸಿ ನೆರವಾಗಿದ್ದರು. ಮಡಿಕೇರಿಯ ಪುಟಾಣಿ ನಗರದ ವಸತಿ ರಹಿತ ಮಹಿಳೆ ನಿಂಗಮ್ಮ ಅವರ ಮನೆ ನಿರ್ಮಾಣಕ್ಕೆ ಕೂಡ ನಂದ ಕುಮಾರ್ ಆರ್ಥಿಕ ನೆರವು ನೀಡಿದ್ದಾರೆ.ಮಡಿಕೇರಿ: ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದ ಕೋವಿಡ್ ವಾರಿಯರ್ಸ್ಗಳಾದ ಆಶಾ ಕಾರ್ಯಕರ್ತೆಯರು, ಹೋಂ ಗಾರ್ಡ್ಸ್ ಮತ್ತು ಟ್ಯಾಕ್ಸಿ ಚಾಲಕರುಗಳಿಗೆ ಕೆ.ಪಿ.ಸಿ.ಸಿ. ಸಂಯೋಜಕ ಹೆಚ್.ಎಂ. ನಂದಕುಮಾರ್ ಒಂದು ತಿಂಗಳಿಗೆ ಆಗುವಷ್ಟು ಆಹಾರ ಸಾಮಗ್ರಿಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕೆ.ಪಿ.ಸಿ.ಸಿ. ತಮಗೆ ಉಸ್ತುವಾರಿ ನೀಡಿರುವ ಸುಳ್ಯ ತಾಲೂಕಿನಲ್ಲಿ ಮಾಜಿ ಸಚಿವ ರಮಾನಾಥ್ ರೈ ಮತ್ತು ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ಸುಮಾರು ರೂ. ೩ ಲಕ್ಷ ವೆಚ್ಚದಲ್ಲಿ ತಲಾ ರೂ. ೧೫೦೦ ಮೊತ್ತದ ಆಹಾರ ಸಾಮಗ್ರಿ ಇರುವ ಕಿಟ್‌ನ್ನು ಫಲಾನುಭವಿಗಳಿಗೆ ನೀಡಲಾಯಿತು.

ಕಳೆದ ವರ್ಷ ಕೂಡ ಮಡಿಕೇರಿ ನಗರದ ಅನೇಕ ಕಡೆಗಳಲ್ಲಿ ಹೆಚ್.ಎಂ. ನಂದಕುಮಾರ್ ಸುಮಾರು ನಾಲ್ಕು ಸಾವಿರ ಕುಟುಂಬಗಳಿಗೆ ಲಾಕ್‌ಡೌನ್ ಸಂದರ್ಭ ಕಿಟ್ ವಿತರಿಸಿ ನೆರವಾಗಿದ್ದರು. ಮಡಿಕೇರಿಯ ಪುಟಾಣಿ ನಗರದ ವಸತಿ ರಹಿತ ಮಹಿಳೆ ನಿಂಗಮ್ಮ ಅವರ ಮನೆ ನಿರ್ಮಾಣಕ್ಕೆ ಕೂಡ ನಂದ ಕುಮಾರ್ ಆರ್ಥಿಕ ನೆರವು ನೀಡಿದ್ದಾರೆ.ಮಡಿಕೇರಿ: ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ನಗರದ ಕೋವಿಡ್ ಆಸ್ಪತ್ರೆ ಆವರಣದಲ್ಲಿ ಕೊರೊನಾ ವಾರಿಯರ್ಸ್ಗಳಿಗೆ ಆಹಾರ ವಿತರಿಸಲಾಯಿತು. ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಆಹಾರ ವಿತರಣೆಗೆ ಚಾಲನೆ ನೀಡಿ ಮಾತನಾಡಿ, ಜೀವದ ಹಂಗನ್ನು ತೊರೆದು ನಮಗಾಗಿ ಕಾರ್ಯನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್ಗಳಿಗೆ ನಮ್ಮಿಂದಾದ ನೆರವು ನೀಡಲು ಕಾಂಗ್ರೆಸ್ ಪಕ್ಷ ಮುಂದಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿಯೂ ಕಾಂಗ್ರೆಸ್ ಇಂತಹ ಸೇವಾ ಕಾರ್ಯವನ್ನು ಮುಂದುವರಿಸಲಿದೆ ಎಂದರು.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಜಿಲ್ಲಾಧ್ಯಕ್ಷ ಎಂ.ಎ. ಉಸ್ಮಾನ್, ಪ್ರಧಾನ ಕಾರ್ಯದರ್ಶಿ ಕೆ.ಎಂ. ಬಾವ, ಸೇವಾದಳ ಘಟಕದ ಪ್ರಧಾನ ಕಾರ್ಯದರ್ಶಿ ತೆರೆಸ ವಿಕ್ಟರ್ ಸೇರಿದಂತೆ ಕಾಂಗ್ರೆಸ್ ವಿವಿಧ ಘಟಕಗಳ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.*ವೀರಾಜಪೇಟೆ: ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೆ ಹಾಗೂ ಕಾರ್ಮಿಕರಿಗೆ ಸುಮಾರು ತೊಂಬತ್ತು ಮಂದಿಗೆ ಕೊಡಗು ಹಿಂದೂ ಮಲೆಯಾಳಿ ಸಂಘದ ವತಿಯಿಂದ ಒಂದು ಹೊತ್ತಿನ ಊಟದ ವ್ಯವಸ್ಥೆ ಕಲ್ಪಿಸಲಾಯಿತು.

ಕೊರೊನಾ ಹಿನ್ನೆಲೆ ಹಗಲಿರುಳು ಶ್ರಮಿಸುವ ವೈದ್ಯಕೀಯ ಕ್ಷೇತ್ರದಲ್ಲಿ ದುಡಿಯುತ್ತಿರುವವರನ್ನು ಗಮನಿಸಿ ವೀರಾಜಪೇಟೆ ಘಟಕದ ವತಿಯಿಂದ ಮುಖಂಡರಾದ ವಿನೂಪ್, ಪಟ್ಟಣ ಪಂಚಾಯಿತಿ ಸದಸ್ಯ ಸಿ.ಕೆ ಪ್ರಥ್ವಿನಾಥ್, ಉಪಾಧ್ಯಕ್ಷರಾದ ದಿನೇಶ್, ಸುನೀಲ್ ವಾಸು, ಸಿನೋಜ್, ಮಹಿಳಾ ಸಂಘದ ಅಧ್ಯಕ್ಷೆ ಶಿಬಾ ಪೃಥ್ವಿನಾಥ್, ಸಂಘದ ಎಲ್ಲಾ ಮಹಿಳಾ ಸದಸ್ಯರು ಹಾಗೂ ಸದಸ್ಯರು ಭಾಗವಹಿಸಿದ್ದರು.ದಾನಿಗಳಿಂದ ನೆರವು

ಪೊನ್ನಂಪೇಟೆ: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್-೧೯ ವೈರಾಣುವಿನಿಂದ ಸೋಂಕಿತರಾಗಿದ್ದವರ ಒಟ್ಟು ೯೧ ಕುಟುಂಬಗಳು, ಕೋವಿಡ್ ಮಹಾಮಾರಿ ನಡುವೆಯೂ ನಿರಂತರ ಸೇವೆ ಸಲ್ಲಿಸುತ್ತಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೯ ಆಶಾ ಕಾರ್ಯಕರ್ತೆಯರು, ೩ ಆರೋಗ್ಯ ಸಹಾಯಕಿಯರು ಹಾಗೂ ಗ್ರಾ.ಪಂ.ನ ೮ ಸ್ವಚ್ಛತಾ ಸಿಬ್ಬಂದಿಗಳಿಗೆ ತಲಾ ರೂ. ೧೦೦೦ ಮೊತ್ತದ ಒಟ್ಟು ೧೧೧ ಪಡಿತರ ಕಿಟಗಳನ್ನು ನೀಡುವ ಮೂಲಕ ದಾನಿಗಳು ನೆರವಾಗಿದ್ದಾರೆ.