? ಕುಡೆಕಲ್ ಸಂತೋಷ್

ಮಡಿಕೇರಿ,ಜೂ.೧೦; ಹವಾಮಾನದ ಋತುಚಕ್ರದಂತೆ ಮತ್ತೆ ಮಳೆಗಾಲ ಬಂದಿದೆ. ಈ ಹಿಂದೆಯೆಲ್ಲ ಮಳೆಗಾಲ ಬಂತೆAದರೆ ಏನೋ ಒಂದು ಸಂಭ್ರಮ., ಮಳೆಯಲ್ಲಿ ನೆನೆಯುತ್ತಾ ಆಟವಾಡುವದು ಮಕ್ಕಳಾಟವಾದರೆ, ತೋಟ, ಗದ್ದೆಗಿಳಿದು ಕೃಷಿ ಕಾಯಕದಲ್ಲಿ ತೊಡಗಿಕೊಳ್ಳುವದು ರೈತರ ಸಂಭ್ರಮ. ಶಾಲಾ-ಕಾಲೇಜುಗಳಿಗೆ ಹದಿನೈದು ದಿವಸ ರಜೆ ? ಕುಡೆಕಲ್ ಸಂತೋಷ್

ಮಡಿಕೇರಿ,ಜೂ.೧೦; ಹವಾಮಾನದ ಋತುಚಕ್ರದಂತೆ ಮತ್ತೆ ಮಳೆಗಾಲ ಬಂದಿದೆ. ಈ ಹಿಂದೆಯೆಲ್ಲ ಮಳೆಗಾಲ ಬಂತೆAದರೆ ಏನೋ ಒಂದು ಸಂಭ್ರಮ., ಮಳೆಯಲ್ಲಿ ನೆನೆಯುತ್ತಾ ಆಟವಾಡುವದು ಮಕ್ಕಳಾಟವಾದರೆ, ತೋಟ, ಗದ್ದೆಗಿಳಿದು ಕೃಷಿ ಕಾಯಕದಲ್ಲಿ ತೊಡಗಿಕೊಳ್ಳುವದು ರೈತರ ಸಂಭ್ರಮ. ಶಾಲಾ-ಕಾಲೇಜುಗಳಿಗೆ ಹದಿನೈದು ದಿವಸ ರಜೆ ಜಲಪ್ರಳಯ, ಭೂಕುಸಿತದಂತಹ ನೈಸರ್ಗಿಕ ಭಯಾನಕ ಘಟನೆಗಳು..! ಇದರೊಂದಿಗೆ ಈ ಬಾರಿ ಕೊರೊನಾ ಎಂಬ ಮಾರಿ ಕೂಡ ಸೇರಿಕೊಂಡಿದ್ದು, ಮತ್ತೊಂದು ಭೀತಿಯನ್ನು ಸೃಷ್ಟಿಸಿದೆ.!

ಕಳೆದ ೨೦೧೮ರಿಂದೀಚೆಗೆ ಸತತವಾಗಿ ಭೂಕುಸಿತ, ಜಲ ಪ್ರಳಯವುಂಟಾಗಿ ಸಾಕಷ್ಟು ಮಂದಿ ಜೀವ, ಮನೆ, ಮಠ, ಆಸ್ತಿ, ಜಾನುವಾರುಗಳನ್ನು ಕಳೆದುಕೊಂಡು ಸಂತ್ರಸ್ತರಾದರು. ಸಂತ್ರಸ್ತರ ನೆರವಿಗೆ ಸರಕಾರ, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಕೈಜೋಡಿಸಿದವು. ಮನೆ ಕಳೆದುಕೊಂಡವರಿಗೆ ಮನೆಗಳನ್ನು ನೀಡುವ ಕಾರ್ಯ ಇನ್ನೂ ಕೂಡ ಪ್ರಗತಿಯಲ್ಲಿದೆ. ಇದರೊಂದಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಕೃತಿ ವಿಕೋಪ ಉಂಟಾಗಿರುವ ಹಾಗೂ ಅಪಾಯದ ಸ್ಥಳಗಳೆಂದು ಗುರುತಿಸಲಾಗಿರುವ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗುತ್ತಿದೆ. ಅಲ್ಲದೆ, ಅಪಾಯ ಉಂಟಾದ

(ಮೊದಲ ಪುಟದಿಂದ) ಸಂದರ್ಭದಲ್ಲಿ ಸನಿಹದ ಪ್ರದೇಶಗಳಲ್ಲಿ ಪರಿಹಾರ ಕೇಂದ್ರಗಳನ್ನು ತೆರೆದು ಅಲ್ಲಿಯೇ ಸರಕಾರದ ವತಿಯಿಂದ ಸೌಲಭ್ಯಗಳನ್ನು ಒದಗಿಸುವ ಕಾರ್ಯವಾಗುತ್ತಿದೆ. ಈ ಬಾರಿಯೂ ಕೂಡ ಅಪಾಯದ ಸ್ಥಳಗಳಲ್ಲಿರುವ ನಿವಾಸಿಗಳಿಗೆ ತಾವು ವಾಸಿಸುತ್ತಿರುವ ಪ್ರದೇಶವನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸರಕಾರದ ನಿರ್ದೇಶನದಂತೆ ಕಂದಾಯ ಇಲಾಖೆ, ಸ್ಥಳೀಯ ಸಂಸ್ಥೆಗಳಿAದ ನೋಟೀಸ್ ಜಾರಿ ಮಾಡಲಾಗಿದೆ. ಆದರೆ, ಜನರು ಹೋಗುವದಾದರೂ ಎಲ್ಲಿಗೆ? ಎಂಬ ಪ್ರಶ್ನೆ ಇದೀಗ ದಟ್ಟವಾಗಿದೆ.

ಎಲ್ಲಿಗೆ ಹೋಗಲಿ..?

ಮುಂಗಾರು ಪ್ರವೇಶಕ್ಕೂ ಮುನ್ನವೇ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಅಪಾಯದ ಸ್ಥಳಗಳನ್ನು ಪರಿಶೀಲನೆ ಮಾಡಿದೆಯಲ್ಲದೆ, ವಿಪತ್ತನ್ನು ಎದುರಿಸುವ ಸಲುವಾಗಿ ಎನ್‌ಡಿಆರ್‌ಎಫ್ ತಂಡವನ್ನು ಕರೆಸಿ ಈಗಾಗಲೇ ಸಜ್ಜುಗೊಳಿಸಿದೆ. ಅಲ್ಲದೆ ಅಪಾಯದ ಸ್ಥಳಗಳಲ್ಲಿ ವಾಸಿಸುತ್ತಿರುವ ಮಂದಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನೋಟೀಸ್ ನೀಡಲಾಗುತ್ತಿದೆ. ಅಪಾಯ, ಅನಾಹುತ ತಪ್ಪಿಸುವ ಸಲುವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವದೇ ಕ್ಷೇಮ. ಆದರೆ ಹೋಗುವದಾದರೂ ಎಲ್ಲಿಗೆ..? ಇದು ಅಪಾಯದ ಸ್ಥಳಗಳಲ್ಲಿರುವ ಮಂದಿಯ ಅಸಹಾಯಕತೆಯ ಪ್ರಶ್ನೆಯಾಗಿದೆ. ಅಪಾಯದ ಸ್ಥಳಗಳಲ್ಲಿನ ಜನರನ್ನು ಸ್ಥಳಾಂತರಗೊಳಿಸುವ ನಿಟ್ಟಿನಲ್ಲಿ ಆಯಾ ಪ್ರದೇಶಗಳಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಲಾಗಿದೆಯಲ್ಲದೆ ಎಲ್ಲಯೂ ಪರಿಹಾರ ಕೇಂದ್ರಗಳನ್ನು ತೆರೆದಿಲ್ಲ. ಯಾವದೇ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಹೀಗಿರುವಾಗ ಎಲ್ಲಿಗೆ ಹೋಗುವದು. ಇಂದಿನ ಕೋವಿಡ್ ಪರಿಸ್ಥಿತಿಯಲ್ಲಿ ಸಂಬAಧಿಕರ, ಸ್ನೇಹಿತರ ಮನೆಗಳಿಗೆ ಹೋಗೋಣವೆಂದರೆ ಯಾರೂ ಸೇರಿಸಿಕೊಳ್ಳುವದಿಲ್ಲ. ಪರ ಊರಿನಲ್ಲಿರುವ ಬಂಧುಗಳ ಮನೆಗೆ ಹೋಗಬೇಕೆಂದರೆ ಅಲ್ಲಿಯೂ ಇದೇ ಸಮಸ್ಯೆ. ಕಳೆದೆರಡು ವರ್ಷ ಈ ಸಮಸ್ಯೆ ಇರಲಿಲ್ಲ. ಹಾಗಾಗಿ ಈ ಬಾರಿ ಅಪಾಯದ ಪ್ರದೇಶದಲ್ಲಿರುವ ಮಂದಿಯನ್ನು ಸ್ಥಳಾಂತರಿಸುವದೇ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ..!

ಕಾಳಜಿ ಕೇಂದ್ರ ಹೆಚ್ಚಲಿದೆಯೇ..?

ಸಂಕಷ್ಟಕ್ಕೀಡಾಗುವವರನ್ನು ಸ್ಥಳಾಂತರಗೊಳಿಸುವದೇ ಜಿಲ್ಲಾಡಳಿತಕ್ಕೆ ಒಂದು ಸವಾಲಾಗಿದೆ. ಕೋವಿಡ್ ಸೋಂಕು ಗ್ರಾಮೀಣ ಭಾಗದಲ್ಲೇ ಹೆಚ್ಚಾಗಿ ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ಗ್ರಾಮದ ಒಂದು ಪ್ರದೇಶದ ನೂರಾರು ಮಂದಿಯನ್ನು ಒಂದೇ ಪರಿಹಾರ ಕೇಂದ್ರದಲ್ಲಿ ಒಟ್ಟು ಸೇರಿಸುವದೂ ಕೂಡ ಅಪಾಯವೇ.! ಯಾರಾದರೂ ಒಬ್ಬರಲ್ಲಿ ಸೋಂಕಿದ್ದರೂ ಎಲ್ಲರಿಗೂ ಹರಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಹಾಗಾಗಿ ಪರಿಹಾರ ಕೇಂದ್ರಕ್ಕೆ ಸೇರಿಸುವವರನ್ನು ಪರೀಕ್ಷೆ ಮಾಡಿಯೇ ವರದಿ ಬಂದ ಬಳಿಕವಷ್ಟೇ ಕಳುಹಿಸಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂದಾಗಿರುವ ಬಗ್ಗೆ ತಿಳಿದು ಬಂದಿದ್ದು, ಮನೆ ಮನೆಗಳಿಗೆ ತೆರಳಿ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿ ಸೋಂಕಿತರನ್ನು ಕಾಳಜಿ ಕೇಂದ್ರಗಳಿಗೆ ಕಳುಹಿಸುವ ಬಗ್ಗೆ ಚಿಂತನೆ ನಡೆಸಿದೆ. ಹಾಗಾಗಿ ಈ ಬಾರಿ ಪರಿಹಾರ ಕೇಂದ್ರಗಳಿಗಿAತ ಕಾಳಜಿ ಕೇಂದ್ರಗಳೇ ಹೆಚ್ಚಾಗುವ ಸಾಧ್ಯತೆಯಿದೆ.

ಯರ‍್ಯಾರು ಎಲ್ಲಿಗೆ..?

ಪರೀಕ್ಷೆ ನಡೆಸಿದ ಬಳಿಕ ಪಾಸಿಟಿವ್ ಕಂಡುಬAದಲ್ಲಿ ಕಾಳಜಿ ಕೇಂದ್ರಗಳಿಗೆ, ಅವರುಗಳ ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಬೇರೊಂದು ಕಡೆಗೆ ಹಾಗೂ ನೆಗೆಟಿವ್ ಇರುವವರನ್ನು ಪರಿಹಾರ ಕೇಂದ್ರ ಅಥವಾ ಸುರಕ್ಷಿತ ಪ್ರದೇಶಗಳಲ್ಲಿರುವ ಮನೆಗಳಿಗೆ ಕಳುಹಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಸಂಬAಧ ಜಿಲ್ಲೆಯ ಎಲ್ಲ ಶಾಲೆ, ಹಾಸ್ಟೆಲ್‌ಗಳು, ಸಮುದಾಯ ಭವನಗಳನ್ನು ಸಜ್ಜುಗೊಳಿಸಿ ಕಾಳಜಿ ಕೇಂದ್ರ, ಪರಿಹಾರ ಕೇಂದ್ರಗಳನ್ನಾಗಿ ಮಾರ್ಪಡಿಸುವ ಬಗ್ಗೆ ತಿಳಿದು ಬಂದಿದೆ.

ಮಡಿಕೇರಿ ನಗರದ ಇಂದಿರಾನಗರ, ಚಾಮುಂಡೇಶ್ವರಿ ನಗರ, ಮಂಗಳಾದೇವಿ ನಗರ ಸೇರಿದಂತೆ ವೀರಾಜಪೇಟೆಯ ಬೆಟ್ಟ ಗುಡ್ಡ ಪ್ರದೇಶದಲ್ಲಿ ಹಾಗೂ ಸಿದ್ದಾಪುರ, ನಾಪೋಕ್ಲು, ಕೂಡಿಗೆ ವ್ಯಾಪ್ತಿ ಸೇರಿದಂತೆ ವಿವಿಧೆಡೆಗಳಲ್ಲಿ ನದಿ ತೀರ ಹಾಗೂ ಅಪಾಯದ ಸ್ಥಳಗಳಲ್ಲಿ ನೆಲೆಸಿರುವವರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನೋಟೀಸ್ ನೀಡಲಾಗಿದೆ. ಆದರೆ, ಎಲ್ಲಿಗೆ ಹೋಗುವದೆಂಬದೇ ಅಲ್ಲಿನ ನಿವಾಸಿಗಳ ಚಿಂತೆಯಾಗಿದೆ..!