ಮಡಿಕೇರಿ, ಜೂ. ೧೦: ಕೊಡಗು ಜಿಲ್ಲೆಯಲ್ಲಿ ಮತ್ತೆ ಮಾದಕ ವಸ್ತುಗಳ ಮಾರಾಟ ಜಾಲ (ಡ್ರಗ್ಸ್ ದಂಧೆ)ವನ್ನು ಪತ್ತೆಹಚ್ಚಿರುವ ಮಡಿಕೇರಿ ನಗರ ಠಾಣಾ ಪೊಲೀಸರು ಈ ಸಂಬAಧ ಐವರು ಯುವಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿAದ ಡ್ರಗ್ಸ್, ಗಾಂಜಾ ಸೇರಿದಂತೆ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಮಡಿಕೇರಿಯ ಚೈನ್‌ಗೇಟ್ ಬಳಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಂಗಲೆ ಬಳಿಯ ನಿರ್ಜನ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟ ಮಾಡುತ್ತಿರುವ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಮಡಿಕೇರಿಯ ಚೈನ್‌ಗೇಟ್ ಬಳಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಂಗಲೆ ಬಳಿಯ ನಿರ್ಜನ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟ ಮಾಡುತ್ತಿರುವ ಸೇವನೆ ಹಾಗೂ ಮಾರಾಟಕ್ಕೆ ಖರೀದಿಯಲ್ಲಿ ತೊಡಗಿದ್ದುದು ಗೋಚರಿಸಿದೆ. ಯುವಕರನ್ನು ಬಂಧಿಸಿ ಅವರುಗಳ ಬಳಿಯಿದ್ದ ಡ್ರಗ್ಸ್ಗಳನ್ನು ವಶಕ್ಕೆ ಪಡೆದಿದ್ದಾರೆ.

ಲಕ್ಷ ಮೊತ್ತದ ಮಾಲು ವಶ

ಡ್ರಗ್ಸ್ ಮಾರಾಟ ಜಾಲದಲ್ಲಿ ತೊಡಗಿದ್ದ ಪ್ರಮುಖ ಆರೋಪಿ ಕೊಟ್ಟಮುಡಿ ನಿವಾಸಿ, ಹಮೀದ್ ಅವರ ಪುತ್ರ, ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜು ವಿದ್ಯಾರ್ಥಿ ಕೆ.ಹೆಚ್. ಮೊಹಮ್ಮದ್ ಅಸ್ಲಾಂ (೨೩), ಬೇತು ಗ್ರಾಮ ನಿವಾಸಿ ಕಾರ್ಯಪ್ಪ ಅವರ ಪುತ್ರ

(ಮೊದಲ ಪುಟದಿಂದ) ಎಫ್‌ಎಂಸಿ ಕಾಲೇಜು ವಿದ್ಯಾರ್ಥಿ ಕೆ.ಕೆ. ಬೋಪಣ್ಣ (೨೨), ಬೇತು ಗ್ರಾಮದ ಸಿ.ಸಿ. ಅಕ್ಷಿತ್ ಚಿಟ್ಟಿಯಪ್ಪ (೨೪), ಮಡಿಕೇರಿ ಚೈನ್‌ಗೇಟ್ ಬಳಿಯ ಸುಮಂತ್ (ಅಣ್ಣು-೨೨) ಹಾಗೂ ಪುಟಾಣಿನಗರ ಸ್ವಾಮಿ ಅವರ ಪುತ್ರ ರಾಜೇಶ್ (೨೨) ಅವರುಗಳನ್ನು ಬಂಧಿಸಲಾಗಿದೆ. ಬಂಧಿತರಿAದ ರೂ. ೮೦ ಸಾವಿರ ಮೌಲ್ಯದ ೭೫೦ ಗ್ರಾಂ ಗಾಂಜಾ, ರೂ. ೧೨೦೦ ಮೌಲ್ಯದ

೦.೮ ಗ್ರಾಂ ಎಸ್ಕಾಟ್ (ಇಅSಖಿಂSಙ) ಮಾತ್ರೆಗಳು ಹಾಗೂ ರೂ. ೪೪,೮೦೦ ಮೌಲ್ಯದ ೧೧,೯೭೦ ಗ್ರಾಂ ಆ್ಯಂಫೆಟ ಮೈನ್ (ಂಒPಊಇಖಿAಒIಓಇ) ಡ್ರಗ್ಸ್ ಸೇರಿದಂತೆ ರೂ. ೧.೨೬ ಲಕ್ಷದ ಮಾಲುಗಳನ್ನೂ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿ ಕೊಳ್ಳಲಾಗಿದೆ.

ನೈಜೀರಿಯಾ ವ್ಯಕ್ತಿ ನಂಟು

ಡ್ರಗ್ಸ್ ದಂಧೆ ಪ್ರಕರಣದಲ್ಲಿ ಮೊಹಮ್ಮದ್ ಅಸ್ಲಾಂ ಪ್ರಮುಖ ವ್ಯಕ್ತಿ. ವಿಚಾರಣೆ ವೇಳೆಯಲ್ಲಿ ಈತ ಬೆಂಗಳೂರಿನಿAದ ಡ್ರಗ್ಸ್ಗಳನ್ನು ತಂದು ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿರು ವದಾಗಿ ಒಪ್ಪಿಕೊಂಡಿ ದ್ದಾನೆ. ಈ ಡ್ರಗ್ಸ್ಗಳು ನೈಜೀರಿಯಾ ಮೂಲದ ವ್ಯಕ್ತಿಯಿಂದ ಸರಬರಾಜು ಆಗುತ್ತಿದೆಯಂತೆ. ಆದರೆ ಈತನಿಗೆ ನೈಜೀರಿಯಾ ವ್ಯಕ್ತಿಯ ಪರಿಚಯ ಹಾಗೂ ಸಂಪರ್ಕವಿಲ್ಲ. ಈತನ ಮಧ್ಯೆ ಈರ್ವರು ಮಧ್ಯವರ್ತಿಗಳಿದ್ದಾರೆ. ಮೂರನೇ ವ್ಯಕ್ತಿಯಾಗಿ ಅಸ್ಲಾಂ ಜಾಲದಲ್ಲಿ ತೊಡಗಿಸಿಕೊಂಡು ಅವರುಗಳಿಂದ ಪಡೆದು ಜಿಲ್ಲೆಗೆ ತಂದು ಮಾರಾಟ ಮಾಡುತ್ತಿದ್ದಾನೆ. ಮಡಿಕೇರಿ ಸೇರಿದಂತೆ ನಾಪೋಕ್ಲು, ವೀರಾಜಪೇಟೆ ಮುಂತಾದೆಡೆ ಈ ಜಾಲ ವಿಸ್ತರಿಸಿದೆ. ಇನ್ನೂ ಬಂಧಿತ ರಾಗಿರುವ ನಾಲ್ವರು ಯುವಕರು ಕೂಡ ಡ್ರಗ್ಸ್ ಸೇವನೆ ಮಾಡುವವರಾಗಿದ್ದು, ಗಿರಾಕಿಗಳನ್ನು ಸಂಪರ್ಕಿಸಿ ಮಾರಾಟ ಮಾಡುವ ಕಾರ್ಯದಲ್ಲೂ ತೊಡಗಿಸಿ ಕೊಂಡಿದ್ದಾರೆ ಎಂದು ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಿದೆ. ಈ ದಂಧೆಯ ಹಿಂದೆ ಬಿದ್ದ ಪೊಲೀಸರು ಇವರುಗಳನ್ನು ಬಂಧಿಸಿದ್ದು, ಐವರನ್ನು ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರಾ ಅವರ ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಪಿ. ದಿನೇಶ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ನಗರ ವೃತ್ತ ನಿರೀಕ್ಷಕ ಪಿ.ವಿ. ವೆಂಕಟೇಶ್ ಅವರ ನೇತೃತ್ವದಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣಾ ಉಪ ನಿರೀಕ್ಷಕಿ ಅಂತಿಮ ಎಂ.ಟಿ., ಮಡಿಕೇರಿ ನಗರ ಪೊಲೀಸ್ ಠಾಣಾ ಅಪರಾಧ ಪತ್ತೆ ಕರ್ತವ್ಯದ ಸಿಬ್ಬಂದಿಗಳಾದ ಕೆ.ಕೆ. ದಿನೇಶ್, ಹೆಚ್.ಎಸ್. ಶ್ರೀನಿವಾಸ, ಪ್ರವೀಣ್ ಬಿ.ಕೆ., ನಾಗರಾಜ್ ಕಡಗನ್ನವರ್, ಸಿಬ್ಬಂದಿಗಳಾದ ಅರುಣ್ ಕುಮಾರ್ ಬಿ.ಜಿ., ಸುನಿಲ್ ಬಿ.ಓ., ಧರ್ಮ ಕೆ.ಎಂ., ಎಲ್.ಎಸ್. ಶಶಿಕುಮಾರ್, ದಿವ್ಯ, ಸೌಮ್ಯ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. - ಸಂತೋಷ್