ಮಡಿಕೇರಿ, ಜೂ. ೧೧: ಆರ್ಟ್ ಆಫ್ ಲಿವಿಂಗ್ ಯೋಗ ಶಿಕ್ಷಕಿ ಪೋಡಮಾಡ ಭವಾನಿ ನಾಣಯ್ಯ ಕೊಡಗಿನ ಪತ್ರಕರ್ತರಿಗೆ ೩ ದಿನ ಆನ್‌ಲೈನ್ ಮೂಲಕ ಯೋಗ ತರಗತಿ ಆಯೋಜಿಸಿದ್ದರು. ರಾಷ್ಟçಮಟ್ಟದ ಯೋಗ ಶಿಕ್ಷಕಿಯಾಗಿ ಗಮನ ಸೆಳೆದಿರುವ ಭವಾನಿ ನಾಣಯ್ಯ ಮೂರು ದಿನ ಸಂಜೆ ೬.೩೦ ರಿಂದ ೮ ಗಂಟೆಯವರೆಗೆ ಕೋವಿಡ್ ಕೇರ್ ಯೋಗ, ಪ್ರಾಣಾಯಾಮ, ಧ್ಯಾನ ಶಿಬಿರ ನಡೆಸಿಕೊಟ್ಟರು.

ಪತ್ರಕರ್ತರೊಂದಿಗೆ ಮೂರು ದಿನಗಳವರೆಗೆ ನಡೆದ ಶಿಬಿರ ನನಗೆ ನಿಜಕ್ಕೂ ಒಳ್ಳೆಯ ಅನುಭವ ನೀಡಿದೆ. ಸಂತೋಷವನ್ನು ತಂದುಕೊಟ್ಟಿದೆ ಎಂದು ಪೋಡಮಾಡ ಭವಾನಿ ನಾಣಯ್ಯ ಹೇಳಿದ್ದಾರೆ. ಜೂನ್ ೧೨, ೧೩ (ಶನಿವಾರ, ಭಾನುವಾರ) ರಿಂದ ವಾರದಲ್ಲಿ ಎರಡು ದಿನ ಯೋಗ, ಪ್ರಾಣಾಯಾಮ ಮತ್ತು ಧ್ಯಾನ ತರಗತಿ ನಡೆಯಲಿದೆ. ಶರೀರದ ಕಲ್ಮಶವನ್ನು ತೆಗೆದು ನಮ್ಮ ನರನಾಡಿಗಳನ್ನು ಶುದ್ಧೀಕರಿಸಿ ನಮ್ಮಲ್ಲಿ ಉತ್ಸಾಹ ತುಂಬುವ ಸುದರ್ಶನ ಕ್ರಿಯೆ ನಾಲ್ಕು ದಿನ ನಡೆಯಲಿದೆ ಎಂದು ಭವಾನಿ ನಾಣಯ್ಯ ಹೇಳಿದ್ದಾರೆ.

ಕೊಡಗಿನ ಪತ್ರಕರ್ತರಿಗೆ ಕೋವಿಡ್ ಕೇರ್ ಯೋಗ, ಪ್ರಾಣಾಯಾಮ, ಧ್ಯಾನ ಶಿಬಿರ ಉಚಿತವಾಗಿ ಆಯೋಜಿಸಿರುವುದಕ್ಕೆ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮೆಚ್ಚುಗೆ ವ್ಯಕ್ತಪಡಿಸಿದರು.